ವಿಕ್ರಂ ಪ್ರಭು ನಿರ್ದೇಶನದ ‘ವೆಡ್ಡಿಂಗ್ ಗಿಫ್ಟ್’ ಕುಟುಂಬ ಕಲಹಕ್ಕೆ ಟ್ಯಾಬ್ಲೆಟ್! ಇಂಟ್ರಸ್ಟಿಂಗ್ ಆಗಿದೆ ಟೀಸರ್

Wedding Gift: ವಿಕ್ರಂ ಪ್ರಭು ನಿರ್ದೇಶನ ಮಾಡಿರುವ ‘ವೆಡ್ಡಿಂಗ್ ಗಿಫ್ಟ್’ ಕನ್ನಡ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಇದಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ವಿಕ್ರಂ ಪ್ರಭು ನಿರ್ದೇಶನದ ‘ವೆಡ್ಡಿಂಗ್ ಗಿಫ್ಟ್’ ಕುಟುಂಬ ಕಲಹಕ್ಕೆ ಟ್ಯಾಬ್ಲೆಟ್! ಇಂಟ್ರಸ್ಟಿಂಗ್ ಆಗಿದೆ ಟೀಸರ್
‘ವೆಡ್ಡಿಂಗ್ ಗಿಫ್ಟ್’ ಪೋಸ್ಟರ್​​
TV9kannada Web Team

| Edited By: Madan Kumar

Jun 03, 2022 | 3:26 PM

ಸ್ಯಾಂಡಲ್​ವುಡ್​ನಲ್ಲಿ (Sandalwood) ಹೊಸಬರ ಪ್ರವೇಶ, ವಿನೂತನ ಪ್ರಯೋಗ, ಗೆಲುವು ಇವೆಲ್ಲಾ ಹೊಸತಲ್ಲ. ಹೊಸ ಹೊಸ ಕಥೆಗಳು, ಪ್ರಯೋಗಗಳೊಂದಿಗೆ ನಟ ನಟಿಯರು, ನಿರ್ದೇಶಕರು, ನಿರ್ಮಾಪಕರು, ತಂತ್ರಜ್ಞರು ಕಾಲಿಡ್ತಾ ಯಶಸ್ಸು ಕಂಡವರ ಸಂಖ್ಯೆಯೂ ಬಹಳಷ್ಟಿದೆ. ಹೀಗಿರುವಾಗ ಈ ಸಾಲಿಗೀಗ ನಿರ್ದೇಶನದೊಂದಿಗೆ, ನಿರ್ಮಾಣದ ಜವಾಬ್ದಾರಿಯನ್ನೂ ಹೆಗಲ ಮೇಲೆ ಹೊತ್ತು ಬಂದಿರೋ ವಿಕ್ರಮ್ ಪ್ರಭು (Vikram Prabhu) ಸೇರಿಕೊಳ್ತಿದ್ದಾರೆ. ‘ವೆಡ್ಡಿಂಗ್ ಗಿಫ್ಟ್’ ಚಿತ್ರದ ಮೂಲಕ ಅವರು ಪ್ರೇಕ್ಷಕರನ್ನು ರಂಜಿಸಲಿದ್ದಾರೆ. ರಾಜೇಂದ್ರ ಸಿಂಗ್ ಬಾಬು ಬಳಿ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದ ವಿಕ್ರಮ್ ಪ್ರಭು ಸ್ವತಂತ್ರ ನಿರ್ದೇಶಕರಾಗಿ ‘ವೆಡ್ಡಿಂಗ್ ಗಿಫ್ಟ್’ (Wedding Gift) ಚಿತ್ರದ ಮೂಲಕ ತಮ್ಮ ಟ್ಯಾಲೆಂಟ್ ಜೊತೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಈಗ ವೆಡ್ಡಿಂಗ್ ಗಿಫ್ಟ್ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗ್ತಿದೆ. ಕುಟುಂಬ ಕಲಹಗಳಿಗೆ ಕಾರಣಗಳು ಹಾಗು ಹೆಣ್ಣಿನ ರಕ್ಷಣೆಗಾಗಿಯೇ ಇರುವ ಕಾನೂನಿನ ದುರ್ಬಳಕೆ ಅದೇ ಹೆಣ್ಣಿನಿಂದಾದರೆ ಏನಾಗಬಹುದೆಂಬ ಸೂಕ್ಷ್ಮತೆಗಳನ್ನ ನಿರ್ದೇಶಕರು ಚಂದವಾಗಿ ಬಣ್ಣಿಸಿದಂತಿದೆ.

ನ್ಯಾಯಾಲಯದಿಂದಲೇ ತೆರೆದುಕೊಳ್ಳುವ ಟೀಸರ್​​ನಲ್ಲಿ ಪುರುಷ ಪ್ರಧಾನ ಸಮಾಜದಿಂದ ಇಂದಿನ ಕುಟುಂಬಗಳಲ್ಲಿ ಆಗುವ ಕಲಹಗಳಂಥ ಗಂಭೀರತೆಯ ಬಗ್ಗೆ ವಿಭಿನ್ನವಾಗಿ ಚಿತ್ರಿಸಿದಂತಿದೆ. ನಿಶಾನ್ ನಾಣಯ್ಯ ಈ ಚಿತ್ರದ ನಾಯಕನಾಗಿ ನಟಿಸುತ್ತಿದ್ದು, ಇವರಿಗೆ ನಾಯಕಿಯಾಗಿ ಸೋನು ಗೌಡ ಅಭಿನಯಿಸುತ್ತಿದ್ದಾರೆ. ಹಿರಿಯ ನಟಿ ಪ್ರೇಮಾ ನಾಲ್ಕು ವರ್ಷಗಳ ನಂತರ ಈ ಚಿತ್ರದಲ್ಲಿ ಲಾಯರ್ ಪಾತ್ರದ ಮೂಲಕ ಮತ್ತೆ ಪ್ರೇಕ್ಷಕರ ಎದುರು ಮುಖಾಮುಖಿ ಯಾಗಲಿದ್ದಾರೆ.

ಇದನ್ನೂ ಓದಿ: ನಟಿ ಪ್ರೇಮಾ ‘ವೆಡ್ಡಿಂಗ್​ ಗಿಫ್ಟ್​’ ಒಪ್ಪಿಕೊಂಡಿದ್ದು ಯಾಕೆ? ಈಗ ಏನಾಗಿದೆ ಅದರ ಕಥೆ?

ಉಳಿದಂತೆ ಅಚ್ಯುತ್ ಕುಮಾರ್, ಪವಿತ್ರಾ ಲೋಕೇಶ್ ಮುಂತಾದವರು ತಾರಾಬಳಗದಲ್ಲಿ ಇದ್ದಾರೆ. ಬಾಲಚಂದ್ರ ಪ್ರಭು ಸಂಗೀತ ಸಂಯೋಜನೆ, ಉದಲ್​ ಲೀಲ ಅವರ ಛಾಯಾಗ್ರಹಣ ಇರುವ ‘ವೆಡ್ಡಿಂಗ್ ಗಿಫ್ಟ್’ ಸಿನಿಮಾಗೆ ವಿಜೇತ್ ಚಂದ್ರ ಅವರು ಸಂಕಲನ ಮಾಡಿದ್ದಾರೆ. ಸದ್ಯ ಟೀಸರ್ ಮೂಲಕ ಈ ಸಿನಿಮಾ ಸದ್ದು ಮಾಡೋಕೆ ಶುರುಮಾಡಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಇದನ್ನೂ ಓದಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada