ಹುಬ್ಬಳ್ಳಿಯ ಕೈ ನಾಯಕನ ಜತೆ ಗೋವಾದಲ್ಲಿ ಸುತ್ತಾಡಿದ್ದ ರಾಗಿಣಿ ಫೋಟೋ ವೈರಲ್

ಹುಬ್ಬಳ್ಳಿಯ ಕೈ ನಾಯಕನ ಜತೆ ಗೋವಾದಲ್ಲಿ ಸುತ್ತಾಡಿದ್ದ ರಾಗಿಣಿ ಫೋಟೋ ವೈರಲ್

ಹುಬ್ಬಳ್ಳಿ: ಸ್ಯಾಂಡಲ್​ವುಡ್​ಗೆ ಡ್ರಗ್ಸ್ ಜಾಲದ ನಂಟಿರುವ ಪ್ರಕರಣಕ್ಕೆ ಸಂಬಂಧಿಸಿ ದಿನೇ ದಿನೇ ಸ್ಫೋಟಕ ಮಾಹಿತಿಗಳು ಬಹಿರಂಗವಾಗುತ್ತಿವೆ. ಪ್ರಕರಣ ಸಂಬಂಧ ಕಸ್ಟಡಿಯಲ್ಲಿರುವ ನಟಿ ರಾಗಿಣಿ ಕೈ ನಾಯಕನ ಜತೆ ಗೋವಾದಲ್ಲಿದ್ದ ಫೋಟೋ ಲಭ್ಯವಾಗಿದೆ.

ಗೋವಾ ಕ್ಯಾಸಿನೊದಲ್ಲಿ ರಾಗಿಣಿ ಜತೆ ಹುಬ್ಬಳ್ಳಿ ಕಾಂಗ್ರೆಸ್ ನಾಯಕ ಗಿರೀಶ್ ಗದಿಗೆಪ್ಪ ಗೌಡ ಸುತ್ತಾಡಿದ್ದ ಬಗ್ಗೆ ಮಾಹಿತಿ ಸಿಕ್ಕಿದೆ. ಆ ಸಮಯದಲ್ಲಿ ತೆಗೆಸಿಕೊಂಡಿದ್ದ ಫೋಟೋಗಳು ಲಭ್ಯವಾಗಿವೆ. ಸಿಸಿಬಿ ಅಧಿಕಾರಿಗಳಿಗೆ ವಿಚಾರಣೆ ವೇಳೆ ರಾಗಿಣಿ ಮೊಬೈಲ್​ ನಲ್ಲಿ ಕೈ ನಾಯಕನೊಟ್ಟಿಗಿನ ಫೋಟೋ ಸಿಕ್ಕಿತ್ತು.

ಹೀಗಾಗಿ ಅಧಿಕಾರಿಗಳು ಹೆಚ್ಚಿನ ಮಾಹಿತಿಗಾಗಿ ಗಿರೀಶ್ ಮನೆ ಮೇಲೆ ದಾಳಿ ನಡೆಸಿದ್ರು. ಕೈ ನಾಯಕ ಗಿರೀಶ್ ಗದಿಗೆಪ್ಪ ಗೌಡರ ಗೋವಾಗೆ ಹೋಗಿದ್ದ ಫೋಟೋಗಳನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

Click on your DTH Provider to Add TV9 Kannada