ಶಿವರಾತ್ರಿಯಂದು ರಾಬರ್ಟ್ ದರ್ಶನ! ಅಭಿಮಾನಿಗಳಿಗಾಗಿ ಶಿವ ‘ರಾತ್ರಿ’ ವೇಳೆ ಹೆಚ್ಚುವರಿ ಶೋಗಳು..

ಮೊದಲ ದಿನ ಬೆಳಗ್ಗೆ 10.30. ಶೋನಿಂದ ಪ್ರದರ್ಶನ ಶುರುವಾಗುತ್ತೆ. ಆದ್ರೆ ರಾತ್ರಿ 10 ಮತ್ತು 12ಗಂಟೆಯ ಶೋಗಳನ್ನ ಹೆಚ್ಚುವರಿಯಾಗಿ ಆಯೋಜಿಸಲಾಗ್ತಿದೆ.

  • TV9 Web Team
  • Published On - 11:44 AM, 5 Mar 2021
ಶಿವರಾತ್ರಿಯಂದು ರಾಬರ್ಟ್ ದರ್ಶನ! ಅಭಿಮಾನಿಗಳಿಗಾಗಿ ಶಿವ ‘ರಾತ್ರಿ’ ವೇಳೆ ಹೆಚ್ಚುವರಿ ಶೋಗಳು..
ರಾಬರ್ಟ್ ಪೋಸ್ಟರ್​

ಬೆಂಗಳೂರು:ಶಿವರಾತ್ರಿ ಅಂದ್ರೆ ಶಿವನ ಆರಾಧಕರಿಂದ ಜಾಗರಣೆ ಪಕ್ಕಾ! ಇನ್ನು ಕಾಲಕ್ಕೆ ತಕ್ಕಂತೆ ಈಗಿನ ಸಿನಿಮಾ ತಾರೆಯರ ಅಭಿಮಾನಿಗಳು ತಮ್ಮನೆಚ್ಚಿನ ನಟನ ಸಿನಿಮಾ ರಿಳಿಸ್​ ಅಂದ್ರೆ ಹಿಂದಿನ ರಾತ್ರಿಯೇ ಥಿಯೇಟರ್​ಗಳ ಬಳಿಯೇ ಠಿಕಾಣಿ ಹಾಕಿಬಿಡುತ್ತಾರೆ. ಬೆಳಗ್ಗೆ ಬೆಳಗ್ಗೆ 6 ಗಂಟೆ ಷೋ ನೋಡಲು ಹಾತೊರೆಯುತ್ತಾರೆ. ಅಂತಹುದರಲ್ಲಿ ಶಿವರಾತ್ರಿಯಂದೇ/ ಶಿವರಾತ್ರಿಗೆಂದೇ ಇಡೀ ರಾತ್ರಿ ನೆಚ್ಚಿನ ನಟನ ಸಿನಿಮಾ ರಿಲೀಸ್​ ಆಗುತ್ತದೆ ಅಂದ್ರೆ ಬಿಡುತ್ತಾರಾ?

ಶಿವರಾತ್ರಿಯಂದು ರಾಬರ್ಟ್ ಸಿನಿಮಾ ಬಿಡುಗಡೆಯಾಗುತ್ತಿದ್ದು, ದರ್ಶನ್​ ಅಭಿಮಾನಿಗಳಿಗೆ ಜಾಗರಣೆ ಪಕ್ಕಾ ಆದಂತ್ತಾಗಿದೆ. ರಾಬರ್ಟ್​ ಸಿನಿಮಾವನ್ನು ಬೆಳಗಿನ ಶೋ ಬದಲಿಗೆ, ರಾತ್ರಿ ವೇಳೆಯಲ್ಲಿ ಹೆಚ್ಚುವರಿ ಶೋಗಳನ್ನು ಇಡಲು ನಿರ್ಧರಿಸಲಾಗಿದೆ. ಮೊದಲ ದಿನ ಬೆಳಗ್ಗೆ 10.30. ಶೋನಿಂದ ಪ್ರದರ್ಶನ ಶುರುವಾಗುತ್ತೆ. ಆದ್ರೆ ರಾತ್ರಿ 10 ಮತ್ತು 12ಗಂಟೆಯ ಶೋಗಳನ್ನ ಹೆಚ್ಚುವರಿಯಾಗಿ ಆಯೋಜಿಸಲಾಗ್ತಿದೆ.

ತರುಣ್​ ಸುಧೀರ್​ ನಿರ್ದೇಶನದಲ್ಲಿ ಮೂಡಿ ಬಂದಿರುವ ರಾಬರ್ಟ್​ ಸಿನಿಮಾ ರಿಲೀಸ್​ಗೆ 6 ದಿನಗಳು ಬಾಕಿ ಇದೆ. ದರ್ಶನ್​ ಅಭಿನಯದ ರಾಬರ್ಟ್​ ಚಿತ್ರ ಸೆನ್ಸಾರ್​ನಲ್ಲಿ ಪಾಸಾಗಿದೆ. ಚಿತ್ರಕ್ಕೆ ಯು/ಎ ಪ್ರಮಾಣಪತ್ರ ಸಿಕ್ಕಿದೆ. ಈ ಖುಷಿಯ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.

ಇದನ್ನೂ ಓದಿ:Roberrt: ‘ರಾಬರ್ಟ್​’ ಚಿತ್ರಕ್ಕೆ U/A ಪ್ರಮಾಣಪತ್ರ! ‘ಪೊಗರು’ ಕಿರಿಕ್​ ನಂತರ ದರ್ಶನ್​ ಚಿತ್ರದಲ್ಲಿ ಸೆನ್ಸಾರ್​ ಮಂಡಳಿ ಕಣ್ಣಿಟ್ಟ ಅಂಶಗಳೇನು?