‘ವೆಡ್ಡಿಂಗ್ ಗಿಫ್ಟ್’ ಡ್ಯುಯೆಟ್ ಸಾಂಗ್​ಗೆ ಸಖತ್ ರೆಸ್ಪಾನ್ಸ್; ಮೋಡಿ ಮಾಡುತ್ತಿದೆ ಜಯಂತ ಕಾಯ್ಕಿಣಿ ಸಾಹಿತ್ಯ

‘ವೆಡ್ಡಿಂಗ್ ಗಿಫ್ಟ್’ ಸಿನಿಮಾದ ‘ಮೊದಲ ಪ್ರೀತಿಯ ಪಯಣ..’ ಸಾಂಗ್ ಒಂದು ಮಿಲಿಯನ್ ಪ್ರೇಕ್ಷಕರ ಮನ ಕದ್ದಿತ್ತು. ಇದೀಗ ‘ರೋಮಾಂಚಕ..’ ಹಾಡಿನ ಸರದಿ ಶುರುವಾಗಿದೆ.

‘ವೆಡ್ಡಿಂಗ್ ಗಿಫ್ಟ್’ ಡ್ಯುಯೆಟ್ ಸಾಂಗ್​ಗೆ ಸಖತ್ ರೆಸ್ಪಾನ್ಸ್; ಮೋಡಿ ಮಾಡುತ್ತಿದೆ ಜಯಂತ ಕಾಯ್ಕಿಣಿ ಸಾಹಿತ್ಯ
ವೆಡ್ಡಿಂಗ್ ಗಿಫ್ಟ್
TV9kannada Web Team

| Edited By: Madan Kumar

May 02, 2022 | 2:40 PM


‘ವೆಡ್ಡಿಂಗ್ ಗಿಫ್ಟ್’ ಸಿನಿಮಾ (Wedding Gift Movie) ಮೂಲಕ ಸ್ಯಾಂಡಲ್​ವುಡ್ ಅಂಗಳಕ್ಕೆ ಮತ್ತೊಬ್ಬ ಪ್ರತಿಭಾನ್ವಿತ ನಿರ್ದೇಶಕನ ಆಗಮನ ಆಗುತ್ತಿದೆ. ಸ್ಯಾಂಡಲ್​ವುಡ್ ಅಂಗಳದ ಹಿರಿಯ ನಿರ್ದೇಶಕರ ಗರಡಿಯಲ್ಲಿ ಪಳಗಿರುವ ವಿಕ್ರಮ್ ಪ್ರಭು ಬಹು ವರ್ಷಗಳ ಕನಸನ್ನು ನನಸು ಮಾಡಿಕೊಳ್ಳುತ್ತಿದ್ದಾರೆ. ಮೊದಲ ಬಾರಿಯೇ ಚಾಲೆಂಜಿಂಗ್ ರೋಲ್ ಪ್ಲೇ ಮಾಡುತ್ತಿರುವ ವಿಕ್ರಮ್ ಪ್ರಭು (Vikram Prabhu) ನಿರ್ದೇಶನದ ಜೊತೆ ನಿರ್ಮಾಣವನ್ನು ಮಾಡುತ್ತಿದ್ದಾರೆ. ತಮ್ಮ ಅನುಭವಗಳನ್ನೆಲ್ಲ ಧಾರೆ ಎರೆದು ನಿರ್ದೇಶಿಸುತ್ತಿರುವ ‘ವೆಡ್ಡಿಂಗ್ ಗಿಫ್ಟ್’ ಚಿತ್ರಕ್ಕೆ ಪ್ರೇಕ್ಷಕರಿಗೆ ಹಾಡುಗಳ ಮೂಲಕ ಆಮಂತ್ರಣ ನೀಡಿದ್ದು ‘ಮೊದಲ ಪ್ರೀತಿಯ ಪಯಣ..’ ಸಾಂಗ್ ನಂತರ ಡ್ಯುಯೆಟ್ ಸಾಂಗ್ ಬಿಡುಗಡೆ ಮಾಡಿದೆ. ಈ ಹಾಡಿಗೆ ಜಯಂತ ಕಾಯ್ಕಿಣಿ (Jayanth Kaikini) ಸಾಹಿತ್ಯವಿದೆ.

‘ರೋಮಾಂಚಕ..’ ಹಾಡಿನ ವೀಡಿಯೋ ಬಿಡುಗಡೆಯಾಗಿದೆ. ಅದು ಈಗಾಗಲೇ ಎಲ್ಲರ ಮನಸ್ಸನ್ನು ಕದ್ದಾಗಿದೆ. ಪ್ರೀತಿಸುವ ಮನಸ್ಸುಗಳ ಫೇವರೇಟ್ ಲಿಸ್ಟ್​ನಲ್ಲಿ ಮೊದಲಿದ್ದು ರಿಪೀಟ್ ಮೂಡ್​ನಲ್ಲಿ ಕೇಳುತ್ತಿದ್ದಾರೆ. ಜಯಂತ ಕಾಯ್ಕಿಣಿ ಬರೆದಿರುವ ರಸವತ್ತಾದ ಸಾಹಿತ್ಯ ಕೇಳುಗರ ಮನದ ಕದ ತಟ್ಟಿದ್ರೆ, ಬಾಲಚಂದ್ರ ಪ್ರಭು ಧ್ವನಿ, ಮೆಲುವಾದ ಸಂಗೀತ ಮತ್ತೆ ಮತ್ತೆ ಹಾಡನ್ನು ಕೇಳುವಂತೆ ಮಾಡಿದೆ. ಹೈಟ್ ಮಂಜು ಡ್ಯುಯೆಟ್ ಸಾಂಗ್​ಗೆ ತಕ್ಕಂತೆ ಕೋರಿಯೋಗ್ರಫಿ ಮಾಡಿ ಇಡೀ ಹಾಡನ್ನು ಚೆಂದಗಾಣಿಸಿದ್ದಾರೆ. ಜಯಂತ ಕಾಯ್ಕಿಣಿ ಸಾಹಿತ್ಯದಲ್ಲಿ ಈ ಹಿಂದೆ ಬಿಡುಗಡೆ ಆಗಿದ್ದ ‘ಮೊದಲ ಪ್ರೀತಿಯ ಪಯಣ..’ ಸಾಂಗ್ ಕೂಡ ಒಂದು ಮಿಲಿಯನ್ ಪ್ರೇಕ್ಷಕರ ಮನ ಕದ್ದಿತ್ತು. ಇದೀಗ ‘ರೋಮಾಂಚಕ..’ ಹಾಡಿನ ಸರದಿ ಶುರುವಾಗಿದೆ.

ಚಂದನವನದ ಎವರ್ ಗ್ರೀನ್ ನಟಿ ಪ್ರೇಮ ಈ ಚಿತ್ರದ ಮೂಲಕ ಮತ್ತೆ ನಟನೆಗೆ ಮರಳಿದ್ದು, ಲಾಯರ್ ಪಾತ್ರದ ಮೂಲಕ ಮನರಂಜನೆ ನೀಡಲಿದ್ದಾರೆ. ಅಚ್ಯುತ್ ಕುಮಾರ್, ಪವಿತ್ರಾ ಲೋಕೇಶ್ ಮುಂತಾದವರನ್ನು ಒಳಗೊಂಡಂತೆ ದೊಡ್ಡ ತಾರಾಬಳಗ ಚಿತ್ರದಲ್ಲಿದೆ. ವಿಜೇತ್​ ಚಂದ್ರ ಸಂಕಲನ ಚಿತ್ರಕ್ಕಿದೆ.

(ರೋಮಾಂಚಕ ಹಾಡು ಇಲ್ಲಿದೆ..)

ಬೆಂಗಳೂರು, ಚಿಕ್ಕಮಗಳೂರು, ಮಂಗಳೂರಿನ ಚೆಂದದ ಲೋಕೇಶನ್​ಗಳಲ್ಲಿ ಚಿತ್ರವನ್ನು ಸೆರೆ ಹಿಡಿಯಲಾಗಿದ್ದು, ಉದಯ್ ಲೀಲಾ ಕ್ಯಾಮೆರಾ ಕಣ್ಣಲ್ಲಿ ಸಿನಿಮಾ ಸೆರೆಯಾಗಿದೆ.  ಬಿಡುಗಡೆಗೆ ಎದುರು ನೋಡುತ್ತಿರುವ ಸಿನಿಮಾ ತಂಡ ಸದ್ಯದಲ್ಲೇ ಚಿತ್ರದ ಬಗ್ಗೆ ಇನ್ನಷ್ಟು ಮಾಹಿತಿ ಹೊತ್ತು ಬರಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಇದನ್ನೂ ಓದಿ:

ನಟಿ ಪ್ರೇಮಾ ‘ವೆಡ್ಡಿಂಗ್​ ಗಿಫ್ಟ್​’ ಒಪ್ಪಿಕೊಂಡಿದ್ದು ಯಾಕೆ? ಈಗ ಏನಾಗಿದೆ ಅದರ ಕಥೆ?

‘ನಾನು ಹಣಕ್ಕಾಗಿಯೇ ಎಂದೂ ಸಿನಿಮಾ ಮಾಡಿಲ್ಲ’: ನಟಿ ಪ್ರೇಮಾ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada