ಮಹೇಶ್​ ಬಾಬು ಬರ್ತ್​ಡೇಗೆ ಕೌಂಟ್​ಡೌನ್​; ಹೊಸ ಸಿನಿಮಾದ ರಿಲೀಸ್​ ಡೇಟ್​ ಘೋಷಣೆ

ಇಂದು (ಜುಲೈ 31) ರಿಲೀಸ್​ ಆದ ಹೊಸ ಪೋಸ್ಟರ್​ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದೆ. ಮಹೇಶ್​ ಬಾಬು ಐಷಾರಾಮಿ ಕಾರಿನಲ್ಲಿ ಸಾಕಷ್ಟು ಸ್ಟೈಲಿಷ್​ ಆಗಿ ಕಾಣಿಸಿಕೊಂಡಿದ್ದಾರೆ.

ಮಹೇಶ್​ ಬಾಬು ಬರ್ತ್​ಡೇಗೆ ಕೌಂಟ್​ಡೌನ್​; ಹೊಸ ಸಿನಿಮಾದ ರಿಲೀಸ್​ ಡೇಟ್​ ಘೋಷಣೆ
ಮಹೇಶ್​ ಬಾಬು ಬರ್ತ್​ಡೇಗೆ ಕೌಂಟ್​ಡೌನ್​; ಹೊಸ ಸಿನಿಮಾದ ರಿಲೀಸ್​ ಡೇಟ್​ ಘೋಷಣೆ
TV9kannada Web Team

| Edited By: Rajesh Duggumane

Jul 31, 2021 | 7:28 PM

ಸೂಪರ್​​ಸ್ಟಾರ್​ಗಳ ಜನ್ಮದಿನಕ್ಕೂ ಮೊದಲೇ ಅಭಿಮಾನಿಗಳ ಸಂಭ್ರಮಾಚರಣೆ ಮುಗಿಲುಮುಟ್ಟಿರುತ್ತದೆ. ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟರ್​ಗಳನ್ನು ಹಂಚಿಕೊಂಡು ಅಭಿಮಾನಿಗಳು ಸಂಭ್ರಮಿಸುತ್ತಾರೆ. ಆಗಸ್ಟ್​ 9ರಂದು ಮಹೇಶ್​ ಬಾಬು ಜನ್ಮದಿನ. ಇದಕ್ಕೆ 9 ದಿನ ಮಾತ್ರ ಬಾಕಿ ಇದ್ದು, ಈಗಾಗಲೇ ಕೌಂಟ್​ಡೌನ್​ ಆರಂಭಗೊಂಡಿದೆ. ಮಹೇಶ್​ ಬಾಬು ನಟನೆಯ ‘ಸರ್ಕಾರು ವಾರಿ ಪಾಟ’ ಸಿನಿಮಾದ ಲುಕ್​ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಅಲ್ಲದೆ, ಜನ್ಮದಿನದಂದು ಅಭಿಮಾನಿಗಳಿಗೆ ವಿಶೇಷ ಉಡುಗೊರೆ ನೀಡುವ ಸೂಚನೆಯನ್ನು ಚಿತ್ರತಂಡ ನೀಡಿದೆ.

ಇಂದು (ಜುಲೈ 31) ರಿಲೀಸ್​ ಆದ ಹೊಸ ಪೋಸ್ಟರ್​ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದೆ. ಮಹೇಶ್​ ಬಾಬು ಐಷಾರಾಮಿ ಕಾರಿನಲ್ಲಿ ಸಾಕಷ್ಟು ಸ್ಟೈಲಿಷ್​ ಆಗಿ ಕಾಣಿಸಿಕೊಂಡಿದ್ದಾರೆ. ಇದೇ ಮೊದಲ ಬಾರಿ ಮಹೇಶ್​ ಬಾಬು ಈ ರೀತಿಯ ಭಿನ್ನ ಅವತಾರ ತಾಳಿದ್ದಾರೆ. ಮಹೇಶ್​ ಬಾಬು ದೇಹದ ಮೇಲೆ ಟ್ಯಾಟೂ ಇದೆ ಅನ್ನೋದು ವಿಶೇಷ. ಮಹೇಶ್​ ಬಾಬು ಉದ್ದ ಕೂದಲು ಬಿಟ್ಟಿದ್ದಾರೆ. ಕಾರಿನ ಮುಂಭಾಗ ಸಂಪೂರ್ಣವಾಗಿ ಒಡೆದಿದೆ. ಈ ಎಲ್ಲಾ ವಿಚಾರಗಳು ಸಾಕಷ್ಟು ಗಮನ ಸೆಳೆಯುತ್ತಿವೆ.

ಆಗಸ್ಟ್​ 9ಕ್ಕೆ ಮಹೇಶ್​ ಬಾಬು ಅವರ ವಿಶೇಷ ಲುಕ್​ ಅನಾವರಣಗೊಳ್ಳುವ ಸಾಧ್ಯತೆ ಇದೆ. ಈ ವಿಚಾರ ಕೇಳಿದ ಅಭಿಮಾನಿಗಳು ಸಾಕಷ್ಟು ಖುಷಿಪಟ್ಟಿದ್ದಾರೆ. ಮೈತ್ರಿ ಮೂವಿ ಮೇಕರ್ಸ್​ ಸಿನಿಮಾ ನಿರ್ಮಾಣ ಮಾಡುತ್ತಿದೆ. ಪರಶುರಾಮ ಈ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ‘ಸರ್ಕಾರು ವಾರಿ ಪಾಟ’ ಸಿನಿಮಾ ಸಂಕ್ರಾಂತಿ ಪ್ರಯುಕ್ತ ಜನವರಿ 13ರಂದು ತೆರೆಗೆ ಬರುತ್ತಿದೆ. ಜನವರಿ 14ರಂದು ರಾಧೆ ಶ್ಯಾಮ್​ ಸಿನಿಮಾ ರಿಲೀಸ್​ ಆಗುತ್ತಿದ್ದು, ಬಾಕ್ಸ್​ ಆಫೀಸ್​ನಲ್ಲಿ ದೊಡ್ಡ ಕಾಂಪಿಟೇಷನ್​ ಏರ್ಪಡುವುದರಲ್ಲಿ ಯಾವುದೇ ಅನುಮಾನವಿಲ್ಲ.

ಮಹೇಶ್​ ಬಾಬು ಖ್ಯಾತ ನಿರ್ದೇಶಕ ರಾಜಮೌಳಿ ಜತೆ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾ ಬಗ್ಗೆಯೂ ಸಾಕಷ್ಟು ನಿರೀಕ್ಷೆ ಇದೆ. ಅವರ ಜನ್ಮದಿನದಂದು ಚಿತ್ರತಂಡದಿಂದ ವಿಶೇಷ ಘೋಷಣೆ ಆಗುವ ಸಾಧ್ಯತೆ ಇದೆ.

ಇದನ್ನೂ ಓದಿ: ಮಹೇಶ್​ ಬಾಬು-ರಾಜಮೌಳಿ ಹೊಸ ಚಿತ್ರದಲ್ಲಿ ‘ಅವನೇ ಶ್ರೀಮನ್ನಾರಾಯಣ’ ಕಥೆ; ಏನಿದು ಹೊಸ ಗಾಸಿಪ್​?

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada