ಅದ್ದೂರಿಯಾಗಿ ಶೂಟ್​ ಮಾಡಿದ ‘ಆರ್​ಆರ್​ಆರ್’​ ಸಿನಿಮಾ ದೃಶ್ಯಗಳಿಗೆ ಕತ್ತರಿ ಹಾಕೋಕೆ ಮುಂದಾದ ರಾಜಮೌಳಿ; ಕಾರಣವೇನು?

ಅದ್ದೂರಿಯಾಗಿ ಶೂಟ್​ ಮಾಡಿದ ‘ಆರ್​ಆರ್​ಆರ್’​ ಸಿನಿಮಾ ದೃಶ್ಯಗಳಿಗೆ ಕತ್ತರಿ ಹಾಕೋಕೆ ಮುಂದಾದ ರಾಜಮೌಳಿ; ಕಾರಣವೇನು?
RRR ಚಿತ್ರದ ಪೋಸ್ಟರ್

ರಾಜಮೌಳಿ ನಿರ್ದೇಶನದ ಸಿನಿಮಾ ಎಂದರೆ ಅದ್ದೂರಿತನಕ್ಕೆ ಹೆಸರುವಾಸಿ ಆಗಿರುತ್ತವೆ. ಬೃಹತ್​ ಸೆಟ್​ಗಳು​, ದೊಡ್ಡ ತಾರಾಗಣ, ಬಹುಕೋಟಿ ರೂ. ಬಜೆಟ್​ನಲ್ಲಿ ಸಿನಿಮಾ ತಯಾರಾಗುತ್ತದೆ. ಹಾಗಾಗಿ ತೆರೆಹಿಂದಿನ ವಿಷಯಗಳನ್ನು ತಿಳಿದುಕೊಳ್ಳಲು ಸಿನಿಪ್ರಿಯರು ಸದಾ ಆಸಕ್ತಿ ತೋರುತ್ತಾರೆ.

TV9kannada Web Team

| Edited By: Rajesh Duggumane

Oct 25, 2021 | 8:42 PM

ಎಸ್​.ಎಸ್​. ರಾಜಮೌಳಿ ನಿರ್ದೇಶನದ ‘ಆರ್​ಆರ್​ಆರ್​’ ಸಿನಿಮಾ ಬಗ್ಗೆ ಅಭಿಮಾನಿಗಳು ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಜನವರಿ ಏಳರಂದು ಚಿತ್ರ ರಿಲೀಸ್​ ಆಗುತ್ತಿದೆ ಎನ್ನುವ ವಿಚಾರ ಕೇಳಿ ಅವರ ಅಭಿಮಾನಿಗಳು ಸಖತ್​ ಖುಷಿಪಟ್ಟಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಚಿತ್ರತಂಡ ಪ್ರಚಾರ ಕಾರ್ಯಕ್ಕೂ ಚಾಲನೆ ನೀಡಲಿದೆ. ಈ ಮಧ್ಯೆ ಸಿನಿಮಾದ ಒಟ್ಟು ಅವಧಿ ಬಗ್ಗೆ ದೊಡ್ಡ ಚರ್ಚೆ ಆಗುತ್ತಿದೆ. ರಾಜಮೌಳಿ ಕೆಲ ದೃಶ್ಯಗಳಿಗೆ ಕತ್ತರಿ ಹಾಕುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗುತ್ತಿದೆ.

ರಾಜಮೌಳಿ ಸಿನಿಮಾ ಎಂದರೆ ಅಲ್ಲಿ ಸಣ್ಣಸಣ್ಣ ವಿಚಾರಕ್ಕೂ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತದೆ. ಕಥೆಗೆ ಹೆಚ್ಚು ಇಂಪಾರ್ಟೆನ್ಸ್​ ಇರುತ್ತದೆ . ಈ ಎಲ್ಲಾ ಕಾರಣಕ್ಕೆ ಅವರ ಸಿನಿಮಾ ಅವಧಿ ಅಧಿಕವಾಗಿರುತ್ತದೆ. ಅವರ ನಿರ್ದೇಶನದ ಈ ಹಿಂದಿನ ಚಿತ್ರ ‘ಬಾಹುಬಲಿ 2’ ಬರೋಬ್ಬರಿ 2.47 ಗಂಟೆ ಇದೆ. ಈಗ ಬರುತ್ತಿರುವ ‘ಆರ್​ಆರ್​ಆರ್​’ ಸಿನಿಮಾದ ಅವಧಿ ಅದನ್ನೂ ಮೀರಿಸಲಿದೆ ಎನ್ನಲಾಗಿತ್ತು.

‘ಆರ್​ಆರ್​ಆರ್​’  ಅವಧಿ ಮೂರು ಗಂಟೆ ಇದೆ. ಆದರೆ, ಇದು ತುಂಬಾನೇ ದೀರ್ಘವಾಯಿತು ಎಂದು ರಾಜಮೌಳಿಗೆ ಅನಿಸಿದೆ. ಹೀಗಾಗಿ ಚಿತ್ರದ ಅವಧಿಯನ್ನು 2.50 ಗಂಟೆಗೆ ಇಳಿಸಲು ರಾಜಮೌಳಿ ನಿರ್ಧರಿಸಿದ್ದಾರೆ. ಹೀಗಾಗಿ, ಕೆಲ ದೃಶ್ಯಗಳಿಗೆ ಅವರು ಕತ್ತರಿ ಹಾಕುವ ಕಾರ್ಯ ಮಾಡಿದ್ದಾರೆ ಎನ್ನಲಾಗಿದೆ.

ರಾಜಮೌಳಿ ನಿರ್ದೇಶನದ ಸಿನಿಮಾ ಎಂದರೆ ಅದ್ದೂರಿತನಕ್ಕೆ ಹೆಸರುವಾಸಿ ಆಗಿರುತ್ತವೆ. ಬೃಹತ್​ ಸೆಟ್​ಗಳು​, ದೊಡ್ಡ ತಾರಾಗಣ, ಬಹುಕೋಟಿ ರೂ. ಬಜೆಟ್​ನಲ್ಲಿ ಸಿನಿಮಾ ತಯಾರಾಗುತ್ತದೆ. ಹಾಗಾಗಿ ತೆರೆಹಿಂದಿನ ವಿಷಯಗಳನ್ನು ತಿಳಿದುಕೊಳ್ಳಲು ಸಿನಿಪ್ರಿಯರು ಸದಾ ಆಸಕ್ತಿ ತೋರುತ್ತಾರೆ. ಈ ಎಲ್ಲಾ ಕುತೂಹಲಕ್ಕೆ ಉತ್ತರ ಜನವರಿ 7ರಂದು ಸಿಗಲಿದೆ.

ಐತಿಹಾಸಿಕ ಕಥಾಹಂದರ ಇರುವ ಈ ಚಿತ್ರ ದೊಡ್ಡ ಕ್ಯಾನ್ವಾಸ್​ನಲ್ಲಿ ಮೂಡಿಬರುತ್ತಿದೆ. ‘ಬಾಹುಬಲಿ’ ರೀತಿಯ ದೈತ್ಯ ಸಿನಿಮಾವನ್ನು ಕಟ್ಟಿಕೊಟ್ಟ ತಂಡವೇ ‘ಆರ್​ಆರ್​ಆರ್​’ ಚಿತ್ರಕ್ಕಾಗಿ ಶ್ರಮಿಸುತ್ತಿದೆ. ಕೊಮರಾಮ್​ ಭೀಮ್​ ಪಾತ್ರಕ್ಕೆ ಜ್ಯೂ. ಎನ್​ಟಿಆರ್​ ಬಣ್ಣ ಹಚ್ಚಿದ್ದಾರೆ. ಅಲ್ಲುರಿ ಸೀತಾರಾಮ ರಾಜು ಪಾತ್ರದಲ್ಲಿ ರಾಮ್​ ಚರಣ್​ ಕಾಣಿಸಿಕೊಂಡಿದ್ದಾರೆ. ನಾಯಕಿಯಾಗಿ ಆಲಿಯಾ ಭಟ್​ ಅಭಿನಯಿಸುತ್ತಿದ್ದು, ಇದು ದಕ್ಷಿಣ ಭಾರತದಲ್ಲಿ ಅವರಿಗೆ ಮೊದಲ ಸಿನಿಮಾ. ಅಜಯ್​ ದೇವಗನ್​ ಕೂಡ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು ಚಿತ್ರದ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಅ.13ರಂದು ಆರ್​ಆರ್​ಆರ್​ ರಿಲೀಸ್​ ಮಾಡಲು ಉದ್ದೇಶಿಸಲಾಗಿದೆ. ಅಂದುಕೊಂಡ ದಿನಾಂಕದಲ್ಲೇ ಸಿನಿಮಾವನ್ನು ತೆರೆಕಾಣಿಸಬೇಕು ಎಂದು ಇಡೀ ತಂಡ ಶ್ರಮವಹಿಸುತ್ತಿದೆ.

ಇದನ್ನೂ ಓದಿ: ಚಿರಂಜೀವಿ ಮತ್ತು ರಾಮ್​ ಚರಣ್ ಜತೆ ಪ್ರಶಾಂತ್​ ನೀಲ್​​; ಆರ್​ಆರ್​ಆರ್​ ನಿರ್ಮಾಣ ಸಂಸ್ಥೆಯಿಂದ ಬಂಡವಾಳ?

‘ಸೂರ್ಯವಂಶಿ’ ಬಾಕ್ಸ್​ ಆಫೀಸ್​ ಕಲೆಕ್ಷನ್​ ಮೇಲೆ ನಿಂತಿದೆ ರಾಜಮೌಳಿ ‘ಆರ್​ಆರ್​ಆರ್’ ಭವಿಷ್ಯ; ಏನಿದು ಸಮಾಚಾರ?

Follow us on

Related Stories

Most Read Stories

Click on your DTH Provider to Add TV9 Kannada