AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಪುಷ್ಪ 2’ ಚಿತ್ರಕ್ಕೆ ಎರಡೆರಡು ಕ್ಲೈಮ್ಯಾಕ್ಸ್; ಟ್ವಿಸ್ಟ್ ಕೊಡಲು ರೆಡಿ ಆದ ಸುಕುಮಾರ್

‘ಪುಷ್ಪ 2’ ಚಿತ್ರಕ್ಕೆ ಒಂದು ತಿಂಗಳ ಶೂಟ್ ಬಾಕಿ ಇದೆ ಎಂದು ವರದಿ ಆಗಿದೆ. ಅಲ್ಲು ಅರ್ಜುನ್ ಅವರು ಶೀಘ್ರವೇ ಸೆಟ್ ಸೇರಿಕೊಳ್ಳಲಿದ್ದಾರೆ. ಸದ್ಯ ಇತರ ಕಲಾವಿದರ ಶೂಟ್​ಗಳನ್ನು ಮಾಡಲಾಗುತ್ತಿದೆ. ಆದಾಗ್ಯೂ ಒಂದು ತಿಂಗಳ ಶೂಟ್ ಬಾಕಿ ಇದೆ ಎಂದು ಹೇಳಲಾಗುತ್ತಿದೆ.

‘ಪುಷ್ಪ 2’ ಚಿತ್ರಕ್ಕೆ ಎರಡೆರಡು ಕ್ಲೈಮ್ಯಾಕ್ಸ್; ಟ್ವಿಸ್ಟ್ ಕೊಡಲು ರೆಡಿ ಆದ ಸುಕುಮಾರ್
ಅಲ್ಲು ಅರ್ಜುನ್-ಸುಕುಮಾರ್
ರಾಜೇಶ್ ದುಗ್ಗುಮನೆ
|

Updated on:Aug 02, 2024 | 1:53 PM

Share

‘ಪುಷ್ಪ 2’ ಸಿನಿಮಾ ಸದ್ಯ ವಿವಾದಗಳ ಮೂಲಕ ಸುದ್ದಿ ಆಗುತ್ತಿದೆ. ನಿರ್ದೇಶಕ ಸುಕುಮಾರ್ ಹಾಗೂ ಹೀರೋ ಅಲ್ಲು ಅರ್ಜುನ್ ಮಧ್ಯೆ ಯವುದೂ ಸರಿ ಇಲ್ಲ, ಹೀರೋ ಶೂಟಿಂಗ್​ ಬರದೆ ವಿದೇಶಕ್ಕೆ ಹೋಗಿದ್ದಾರೆ ಎಂಬಿತ್ಯಾದಿ ವದಂತಿಗಳು ವೈರಲ್ ಆಗುತ್ತಿವೆ. ಈಗ ಗೊಂದಲಕ್ಕೆ ಅನೇಕರು ಸ್ಪಷ್ಟನೆ ನೀಡಿದ್ದಾರೆ. ಇವುಗಳ ಮಧ್ಯೆ ನಿರ್ದೇಶಕ ಸುಕುಮಾರ್ ಅವರು ಚಿತ್ರದ ಕ್ಲೈಮ್ಯಾಕ್ಸ್ ಶೂಟ್​ಗೆ ರೆಡಿ ಆಗಿದ್ದಾರೆ. ಎರಡೆರಡು ಕ್ಲೈಮ್ಯಾಕ್ಸ್ ಶೂಟ್ ಮಾಡಲು ಅವರು ಸಿದ್ಧತೆ ಮಾಡಿಕೊಂಡಿದ್ದಾರೆ.

ಸದ್ಯ ಒಂದು ತಿಂಗಳ ಶೂಟ್ ಬಾಕಿ ಇದೆ ಎಂದು ವರದಿ ಆಗಿದೆ. ಅಲ್ಲು ಅರ್ಜುನ್ ಅವರು ಶೀಘ್ರವೇ ಸೆಟ್ ಸೇರಿಕೊಳ್ಳಲಿದ್ದಾರೆ. ಸದ್ಯ ಇತರ ಕಲಾವಿದರ ಶೂಟ್​ಗಳನ್ನು ಮಾಡಲಾಗುತ್ತಿದೆ. ಆದಾಗ್ಯೂ ಒಂದು ತಿಂಗಳ ಶೂಟ್ ಬಾಕಿ ಇದೆ ಎಂದು ಹೇಳಲಾಗುತ್ತಿದೆ. ಫೈಟಿಂಗ್ ಹಾಗೂ ಸಾಂಗ್ ಒಂದನ್ನು ಶೂಟ್ ಮಾಡಿದರೆ ಬಹುತೇಕ ಚಿತ್ರೀಕರಣ ಮುಗಿದಂತೆ ಆಗಲಿದೆ. ಆ ಬಳಿಕ ನಿರ್ದೇಶಕರು ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿ ಆಗಲಿದ್ದಾರೆ.

ಕೆಲವು ವರದಿಗಳ ಪ್ರಕಾರ ಸುಕುಮಾರ್ ಅವರು ಎರಡು ಕ್ಲೈಮ್ಯಾಕ್ಸ್​ಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ಎರಡನ್ನೂ ಶೂಟ್ ಮಾಡಿ ಕೊನೆಯಲ್ಲಿ ಯಾವುದನ್ನು ಇಡಬೇಕು, ಯಾವುದನ್ನು ತೆಗೆಯಬೇಕು ಎಂದು ನಿರ್ಧರಿಸಲಿದ್ದಾರೆ. ಎಡಿಟಿಂಗ್ ವೇಳೆ ಅವರು ಟ್ವಿಸ್ಟ್ ನೀಡಲಿದ್ದಾರೆ. ಇತ್ತೀಚೆಗೆ ಸಿನಿಮಾಗಳ ದೃಶ್ಯಗಳು, ಕಥೆ ಲೀಕ್ ಆಗುತ್ತಿರೋ ಪ್ರಕರಣಗಳು ನಡೆಯುತ್ತಿವೆ. ಇದನ್ನು ತಪ್ಪಿಸಲು ಸುಕುಮಾರ್ ಅವರು ಈ ಪ್ಲ್ಯಾನ್ ಮಾಡಿದ್ದಾರೆ.

ಇದನ್ನೂ ಓದಿ: ಅಲ್ಲು ಅರ್ಜುನ್​, ಸುಕುಮಾರ್​ ನಡುವೆ ಕಿರಿಕ್​? ‘ಪುಷ್ಪ 2’ ಬಿಡುಗಡೆ ಮತ್ತೆ ಲೇಟ್​ ಆಗುತ್ತಾ?

‘ಕೆಜಿಎಫ್ 2’ಗೆ ಮೂರನೇ ಪಾರ್ಟ್ ಬರಲಿದೆ. ಅದೇ ರೀತಿ ಸುಕುಮಾರ್ ಕೂಡ ಈ ಸಿನಿಮಾಗೆ ಮೂರನೇ ಪಾರ್ಟ್​ ತರೋ ಆಲೋಚನೆಯಲ್ಲಿ ಇದ್ದಾರೆ.  ‘ಪುಷ್ಪ 2: ದಿ ರೂಲ್’ ಸಿನಿಮಾ ಡಿಸೆಂಬರ್ 6ರಂದು ಬಿಡುಗಡೆ ಆಗಲಿದೆ. ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಫಹಾದ್ ಫಾಸಿಲ್ ಸೇರಿ ಅನೇಕ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ. ‘ಮೈತ್ರಿ ಮೂವೀ ಮೇಕರ್ಸ್​’ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:53 am, Fri, 2 August 24

ರಾಜಸ್ಥಾನದಲ್ಲಿ ಭಾರೀ ಪ್ರವಾಹ; ಒಂದೇ ದಿನದಲ್ಲಿ 6 ಜನ ಸಾವು
ರಾಜಸ್ಥಾನದಲ್ಲಿ ಭಾರೀ ಪ್ರವಾಹ; ಒಂದೇ ದಿನದಲ್ಲಿ 6 ಜನ ಸಾವು
ಬುಧವಾರ ಪುನಃ ವಿಚಾರಣೆಗೆ ಬರಲು ಹೇಳಿದ್ದಾರೆ: ಭೈರತಿ ಬಸವರಾಜ
ಬುಧವಾರ ಪುನಃ ವಿಚಾರಣೆಗೆ ಬರಲು ಹೇಳಿದ್ದಾರೆ: ಭೈರತಿ ಬಸವರಾಜ
ಭೂಪಾಲ್​ನ ಶಾಲೆಯಲ್ಲಿ ಸೀಲಿಂಗ್ ಪ್ಲಾಸ್ಟರ್ ಬಿದ್ದು ಇಬ್ಬರಿಗೆ ಗಾಯ
ಭೂಪಾಲ್​ನ ಶಾಲೆಯಲ್ಲಿ ಸೀಲಿಂಗ್ ಪ್ಲಾಸ್ಟರ್ ಬಿದ್ದು ಇಬ್ಬರಿಗೆ ಗಾಯ
ಶ್ರೀಗಳ ವಿರುದ್ಧ ಆಡಿದ ಮಾತನ್ನು ಕಾಶಪ್ಪನವರ್ ವಾಪಸ್ಸ ಪಡೆಯಬೇಕು: ವೀರಣ್ಣ
ಶ್ರೀಗಳ ವಿರುದ್ಧ ಆಡಿದ ಮಾತನ್ನು ಕಾಶಪ್ಪನವರ್ ವಾಪಸ್ಸ ಪಡೆಯಬೇಕು: ವೀರಣ್ಣ
ಬಸವರಾಜ ಆಸಂಗಿ, ಲಕ್ಷ್ಮಿ ವಿರುದ್ಧ ಪೊಲೀಸ್ ದೂರು ಸಲ್ಲಿಸಿರುವ ಸಂತ್ರಸ್ತೆ
ಬಸವರಾಜ ಆಸಂಗಿ, ಲಕ್ಷ್ಮಿ ವಿರುದ್ಧ ಪೊಲೀಸ್ ದೂರು ಸಲ್ಲಿಸಿರುವ ಸಂತ್ರಸ್ತೆ
ಎಂಎ ಸಲೀಂರನ್ನು ಐಜಿ-ಡಿಜಿಪಿ ನೇಮಕಾತಿ ಹಿಂದೆ ರಾಜಕೀಯ ಇದೆ: ಅನುಪಮಾ ಶೆಣೈ
ಎಂಎ ಸಲೀಂರನ್ನು ಐಜಿ-ಡಿಜಿಪಿ ನೇಮಕಾತಿ ಹಿಂದೆ ರಾಜಕೀಯ ಇದೆ: ಅನುಪಮಾ ಶೆಣೈ
ಹ್ಯಾಟ್ರಿಕ್ ವಿಕೆಟ್ ಉರುಳಿಸಿದ ಪಾಕ್ ಮೂಲದ ಫರ್ಹಾನ್
ಹ್ಯಾಟ್ರಿಕ್ ವಿಕೆಟ್ ಉರುಳಿಸಿದ ಪಾಕ್ ಮೂಲದ ಫರ್ಹಾನ್
ಸಮಸ್ಯೆ ಹೆಚ್ಚುತ್ತಿದೆ, ಕೂಡಲೇ ಸರ್ಕಾರ ಮಧ್ಯಪ್ರವೇಶಿಸಬೇಕು: ಧಾಬಾ ಮಾಲೀಕ
ಸಮಸ್ಯೆ ಹೆಚ್ಚುತ್ತಿದೆ, ಕೂಡಲೇ ಸರ್ಕಾರ ಮಧ್ಯಪ್ರವೇಶಿಸಬೇಕು: ಧಾಬಾ ಮಾಲೀಕ
ಸಾಧನಾ ಸಮಾವೇಶದಿಂದ ವಾಪಸ್​ ಬರುತ್ತಿದ್ದ ಡಿಕೆಶಿ ಎಸ್ಕಾರ್ಟ್​​ ವಾಹನ ಪಲ್ಟಿ
ಸಾಧನಾ ಸಮಾವೇಶದಿಂದ ವಾಪಸ್​ ಬರುತ್ತಿದ್ದ ಡಿಕೆಶಿ ಎಸ್ಕಾರ್ಟ್​​ ವಾಹನ ಪಲ್ಟಿ
ಸಿಎಂ ಸಿದ್ದರಾಮಯ್ಯರನ್ನು ವಿನಾಕಾರಣ ದೂಷಿಸಲಾಗುತ್ತಿದೆ: ಕಾಶಪ್ಪನವರ್
ಸಿಎಂ ಸಿದ್ದರಾಮಯ್ಯರನ್ನು ವಿನಾಕಾರಣ ದೂಷಿಸಲಾಗುತ್ತಿದೆ: ಕಾಶಪ್ಪನವರ್