Srivastava Chandrasekhar: ತಮಿಳು ನಟ ಧನುಶ್​ ಜತೆ ತೆರೆ ಹಂಚಿಕೊಂಡಿದ್ದ ನಟ ಶ್ರೀವಾತ್ಸವ್​ ಚಂದ್ರಶೇಖರ್ ಆತ್ಮಹತ್ಯೆ

ಬುಧವಾರ ಮನೆಯಿಂದ ಹೊರಗೆ ಹೊರಟಿದ್ದ ಶ್ರೀವಾತ್ಸವ್​ ಶೂಟಿಂಗ್​ ಇದೆ ಎಂದು ಹೇಳಿ ಹೊರಟಿದ್ದರು. ಆದರೆ, ಅಂದು ಯಾವುದೇ ಶೂಟಿಂಗ್​ ಇರಲಿಲ್ಲ.

  • TV9 Web Team
  • Published On - 18:57 PM, 6 Feb 2021
Srivastava Chandrasekhar: ತಮಿಳು ನಟ ಧನುಶ್​ ಜತೆ ತೆರೆ ಹಂಚಿಕೊಂಡಿದ್ದ ನಟ ಶ್ರೀವಾತ್ಸವ್​ ಚಂದ್ರಶೇಖರ್ ಆತ್ಮಹತ್ಯೆ
ಶ್ರೀವಾಸ್ತವ್​ ಚಂದ್ರಶೇಖರ್

ಪೆರಂಬೂರು: ವಲ್ಲಮೈ ತಾರಾಯೋ ಖ್ಯಾತಿಯ ತಮಿಳು ನಟ ಶ್ರೀವಾತ್ಸವ್​ ಚಂದ್ರಶೇಖರ್​ ಅವರು ಫೆಬ್ರವರಿ 4ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶುಕ್ರವಾರ ಇವರ ಅಂತ್ಯಸಂಸ್ಕಾರವನ್ನು ಕುಟುಂಬದವರು ಪೂರ್ಣಗೊಳಿಸಿದ್ದಾರೆ ಎನ್ನುವ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ತಂದೆಯ ಹೆಸರಿನಲ್ಲಿದ್ದ ಮನೆಯಲ್ಲೇ ಶ್ರೀವಾತ್ಸವ್​ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಯುವ ನಟ ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿದ್ದರಿಂದ ಚಿಕಿತ್ಸೆ ಕೂಡ ಪಡೆಯುತ್ತಿದ್ದರು ಎಂದು ವರದಿಗಳು ಹೇಳಿವೆ. ಆದರೆ, ಅವರ ಸಾವಿಗೆ ನಿಜವಾದ ಕಾರಣ ತಿಳಿದು ಬಂದಿಲ್ಲ.

ಬುಧವಾರ ಮನೆಯಿಂದ ಹೊರಗೆ ಹೊರಟಿದ್ದ ಶ್ರೀವಾತ್ಸವ್​ ಶೂಟಿಂಗ್​ ಇದೆ ಎಂದು ಹೇಳಿ ಹೊರಟಿದ್ದರು. ಆದರೆ, ಅಂದು ಯಾವುದೇ ಶೂಟಿಂಗ್​ ಇರಲಿಲ್ಲ. ಮನೆಯಿಂದ ಹೊರಟ ಶ್ರೀವಾತ್ಸವ್​ ಪೆರಂಬೂರಿಗೆ ತೆರಳಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಶ್ರೀವಾತ್ಸವ್​ ಸಾವಿಗೆ ಸಾಕಷ್ಟು ನಟ-ನಟಿಯರು, ನಿರ್ದೇಶಕರು-ನಿರ್ಮಾಪಕರು ಸಾಮಾಜಿಕ ಜಾಲತಾಣದಲ್ಲಿ ಸಂತಾಪ ಸೂಚಿಸಿದ್ದಾರೆ. ವಲ್ಲಮೈ ತಾರಾಯೋ ವೆಬ್​ ಸೀರಿಸ್​ ಮೂಲಕ ಶ್ರೀವಾತ್ಸವ್​ ಖ್ಯಾತಿ ಹೆಚ್ಚಿಸಿಕೊಂಡಿದ್ದರು. 2019ರಲ್ಲಿ ತೆರೆಕಂಡಿದ್ದ ಧನುಶ್​ ನಟನೆಯ ಎನೈ ನೋಕಿ ಪಯೂಮ್ ತೊಟ್ಟಾ ಸಿನಿಮಾದಲ್ಲಿ ಸಹನಟನಾಗಿ ಶ್ರೀವಾತ್ಸವ್ ನಟಿಸಿದ್ದರು.

ಬಾಲಿವುಡ್​ ನಟ ಸುಶಾಂತ್​ ಸಿಂಗ್​ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದಾದ ನಂತರ ಸಾಕಷ್ಟು ನಟ-ನಟಿಯರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇತ್ತೀಚೆಗೆ ಬಿಗ್​ ಬಾಸ್​ ಸ್ಪರ್ಧಿ ಜಯಶ್ರೀ ಕೂಡ ನೇಣಿಗೆ ಶರಣಾಗಿದ್ದರು.

ಆತ್ಮಹತ್ಯೆಗೂ ಮುನ್ನ ಜಯಶ್ರೀ ಪಶ್ಚಾತಾಪದ ನುಡಿ.. ಡೆತ್ ​ನೋಟ್​ನಲ್ಲಿ ಬರೆದಿಟ್ಟಿದ್ದಾರೆ ಅಸಲಿ ಸತ್ಯ