ಸೀರಿಯಲ್​ ನೋಡಿ ದೇವ್ರೇ ಕಾಪಾಡಪ್ಪ ಎಂದ ಅನಿತಾ ಭಟ್​! ಅಂಥದ್ದೇನಿದೆ ಈ ದೃಶ್ಯದಲ್ಲಿ?

ಕಿಂಚಿತ್ತೂ ಲಾಜಿಕ್​ ಇಲ್ಲದ ಧಾರಾವಾಹಿ ದೃಶ್ಯಗಳು ಆಗಾಗ ವೈರಲ್​ ಆಗುತ್ತಿರುತ್ತವೆ. ಅವುಗಳ ಪೈಕಿ ಈ ವಿಡಿಯೋಗೆ ಅಗ್ರಸ್ಥಾನ ಸಿಗಲೇಬೇಕು. ಅಷ್ಟು ಫನ್ನಿಯಾಗಿದೆ ಈ ದೃಶ್ಯ!

  • TV9 Web Team
  • Published On - 17:24 PM, 7 Apr 2021
ಸೀರಿಯಲ್​ ನೋಡಿ ದೇವ್ರೇ ಕಾಪಾಡಪ್ಪ ಎಂದ ಅನಿತಾ ಭಟ್​! ಅಂಥದ್ದೇನಿದೆ ಈ ದೃಶ್ಯದಲ್ಲಿ?
(ಧಾರಾವಾಹಿ ವೈರಲ್​ ವಿಡಿಯೋ - ಅನಿತಾ ಭಟ್​)

ಸೀರಿಯಲ್​ಗಳ ಲೋಕವೇ ಬೇರೆ ರೀತಿ ಇರುತ್ತದೆ. ಪ್ರತಿದಿನ ವೀಕ್ಷಕರನ್ನು ಸೆಳೆಯಲು ಏನೇನೋ ತಂತ್ರಗಳನ್ನು ಮಾಡಬೇಕಾಗುತ್ತದೆ. ಆದರೆ ಅವು ಒಂದು ಗಡಿಯನ್ನು ದಾಟಿದ ಬಳಿಕ ನಗೆಪಾಟಲಿಗೆ ಈಡಾಗಬೇಕಾಗುತ್ತದೆ. ಸದ್ಯ ಅಂಥದ್ದೊಂದು ಧಾರಾವಾಹಿಯ ದೃಶ್ಯ ಇಂಟರ್​ನೆಟ್​ನಲ್ಲಿ ವೈರಲ್​ ಆಗಿದ್ದು, ಅದನ್ನು ನೋಡಿದ ಎಲ್ಲರ ತಲೆ ಗಿರಗಿರ ಎನ್ನುತ್ತಿದೆ. ಕನ್ನಡದ ನಟಿ ಅನಿತಾ ಭಟ್​ ಕೂಡ ಈ ಸೀರಿಯಲ್​ ಸೀನ್​ ನೋಡಿ ಸುಸ್ತಾಗಿದ್ದಾರೆ!

ಆ ದೃಶ್ಯದಲ್ಲಿ ಏನಿದೆ? ಒಬ್ಬಳು ಹುಡುಗಿಯನ್ನು ಒಲಿಸಿಕೊಳ್ಳಲು ಇಬ್ಬರು ಹುಡುಗರ ನಡುವೆ ಪೈಪೋಟಿ ಏರ್ಪಡುತ್ತದೆ. ಚಂದ್ರನ ಚೂರನ್ನು ಮುರಿದು ತಂದವರಿಗೆ ಆ ಹುಡುಗಿ ಸಿಗುತ್ತಾಳೆ ಎಂಬ ನಿಯಮ ಹಾಕಲಾಗುತ್ತದೆ. ಆಗ ಆ ಇಬ್ಬರು ಹುಡುಗರು ಚಂದ್ರನ ಚೂರನ್ನು ಭೂಮಿಗೆ ತರುವ ಪ್ರಯತ್ನ ಮಾಡುತ್ತಾರೆ. ಅದು ಎಷ್ಟು ಕಾಮಿಡಿ ಆಗಿದೆಯೆಂದರೆ, ನೋಡಿದವರೆಲ್ಲ ನಕ್ಕು ನಕ್ಕು ಸುಸ್ತಾಗುತ್ತಿದ್ದಾರೆ. ಅನಿತಾ ಭಟ್​ ಅವರು ಆ ದೃಶ್ಯವನ್ನು ಟ್ವಿಟರ್​ನಲ್ಲಿ ಶೇರ್​ ಮಾಡಿಕೊಂಡು ‘ದೇವ್ರೇ ನನ್ನ ಕಾಪಾಡಪ್ಪ’ ಎಂದು ಕ್ಯಾಪ್ಷನ್​ ನೀಡಿದ್ದಾರೆ.

ಸ್ಟಾರ್​ ಪ್ಲಸ್​ ವಾಹಿನಿಯ ‘ಯೇ ಜಾದೂ ಹೈ ಜಿನ್​ ಕಾ’ ಧಾರಾವಾಹಿಯ ದೃಶ್ಯವಿದು. ಮೊದಲ ಸೀಸನ್​ ಯಶಸ್ವಿ ಆದ ಬಳಿಕ ಈಗ 2ನೇ ಸೀಸನ್​ ಪ್ರಸಾರ ಆಗುತ್ತಿದೆ. ಇದೊಂದು ಫ್ಯಾಂಟಸಿ ಕಥೆಯುಳ್ಳ ಧಾರಾವಾಹಿ. ಪ್ರಸ್ತುತ ವೈರಲ್​ ಆಗಿರುವ ದೃಶ್ಯ ಒಂದು ಸ್ವಯಂವರದ್ದು. ಮುಖ್ಯ ಪಾತ್ರಧಾರಿ ರೋಷನಿ (ಅದಿತಿ ಶರ್ಮಾ) ತನ್ನನ್ನು ಮದುವೆ ಆಗುವ ಹುಡುಗನು ಚಂದ್ರನ ಚೂರನ್ನು ಭೂಮಿಗೆ ತರಬೇಕು ಎಂದು ಸವಾಲು ಹಾಕುತ್ತಾಳೆ. ಆಗ ಒಬ್ಬ ಹುಡುಗ ಚಂದ್ರನಿಗೆ ಹಗ್ಗ ಹಾಕಿ ಎಳೆಯಲು ಪ್ರಯತ್ನಿಸುತ್ತಾನೆ. ಮತ್ತೊಬ್ಬನಂತೂ ಕಾರಿನಲ್ಲೇ ಚಂದ್ರಲೋಕಕ್ಕೆ ಹೋಗುತ್ತಾನೆ!

ಇಂಥದ್ದನ್ನೆಲ್ಲ ನೋಡಿದರೆ ಯಾರಿಗೆ ನಗು ಬರುವುದಿಲ್ಲ ಹೇಳಿ? ಹಾಗಾಗಿ ಇಂಟರ್​ನೆಟ್​ನಲ್ಲಿ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಇದರ ಮೇಲೆ ಹಲವು ಬಗೆಯ ಮೀಟ್​ಗಳನ್ನು ರಚಿಸಿ ಹರಿಬಿಡಲಾಗುತ್ತಿದೆ. ‘ಈ ವಿಡಿಯೋವನ್ನು ನೀವು ನಾಸಾದವರಿಗೆ ಫಾರ್ವರ್ಡ್​ ಮಾಡುವುದಿಲ್ಲ ಎಂದು ನನಗೆ ಪ್ರಮಾಣ ಮಾಡಿ’ ಎಂಬಂತಹ ಫನ್ನಿ ಕ್ಯಾಪ್ಷನ್​ಗಳೊಂದಿಗೆ ಜನರು ಇದನ್ನು ಶೇರ್​ ಮಾಡುತ್ತಿದ್ದಾರೆ. ‘ದೇವ್ರೇ ನನ್ನ ಕಾಪಾಡಪ್ಪ’ ಎಂದು ಕನ್ನಡದ ನಟಿ ಅನಿತಾ ಭಟ್​ ಕೈ ಮುಗಿದಿದ್ದಾರೆ.

ಇದನ್ನೂ ಓದಿ: Naagini 2: ಮದುವೆ ಆದ್ರೂ ನಾವು ಗಂಡ-ಹೆಂಡತಿ ಅಲ್ಲ ಎಂದ ನಾಗಿಣಿ ನಟ-ನಟಿ! ಏನಿದರ ಅಸಲಿ ಕಥೆ?

‘ನಾಗಿಣಿ’ ತ್ರಿಶೂಲ್​-ಶಿವಾನಿ ಅದ್ದೂರಿ ಮದುವೆ! ಸಾವಿರಾರು ಫ್ಯಾನ್ಸ್​ ಎದುರು ಆರತಕ್ಷತೆ

 

(Anita Bhat shares a funny viral video of Yehh Jadu Hai Jinn Ka serial on twitter)