ಕನ್ನಡ ಬಿಗ್ ಬಾಸ್ ಸೀಸನ್ 8ರ ಕೊನೆಯ ಎಲಿಮಿನೇಷನ್ ಆಗಸ್ಟ್ 4ರಂದು ನಡೆದಿದೆ. ಈ ವೇಳೆ ದಿವ್ಯಾ ಸುರೇಶ್ ಎಲಿಮಿನೇಟ್ ಆಗಿದ್ದಾರೆ. ಹೊರ ನಡೆಯುವುದಕ್ಕೂ ಮೊದಲು ಬಿಗ್ ಬಾಸ್ ಅವರ ಆಸೆಯನ್ನು ಈಡೇರಿಸಿದ್ದಾರೆ. ಇದರಿಂದ ದಿವ್ಯಾ ಸಾಕಷ್ಟು ಖುಷಿಪಟ್ಟಿದ್ದಾರೆ.
ಬಿಗ್ ಬಾಸ್ ಮನೆಯ ಗಾರ್ಡನ್ ಏರಿಯಾದಲ್ಲಿ ಕಿವಿ ಆಕೃತಿಯನ್ನು ಇರಿಸಲಾಗಿತ್ತು. ಆ ಕಿವಿ ಬಳಿ ಹೋಗಿ ಸ್ಪರ್ಧಿಗಳು ತಮ್ಮಿಚ್ಛೆಯನ್ನು ಕೋರಬೇಕು. ಅದು ಈಡೇರಿಸುವಂತಿದ್ದರೆ ಬಿಗ್ ಬಾಸ್ ಅದನ್ನು ಪೂರ್ಣಗೊಳಿಸುತ್ತಾರೆ. ಮನೆಯ ಎಲ್ಲಾ ಸ್ಪರ್ಧಿಗಳು ತಮ್ಮಿಷ್ಟದ್ದನ್ನು ಕೋರಿದ್ದಾರೆ. ಈ ವೇಳೆ ದಿವ್ಯಾ ಸುರೇಶ್ ವಿಶೇಷ ಬೇಡಿಕೆ ಒಂದನ್ನು ಇಟ್ಟಿದ್ದರು. ಮಂಜು ಮತ್ತು ನಾನು ಒಟ್ಟಿಗೆ ಇರುವ ಫೋಟೋ ಜತೆ ಕೇಕ್ ಕೂಡ ಕಳಿಸಿ ಎಂದು ಕೋರಿದ್ದರು.
ಈ ಬೇಡಿಕೆಯನ್ನು ಬಿಗ್ ಬಾಸ್ ಈಡೇರಿಸಿದ್ದಾರೆ. ಆಗಸ್ಟ್ 4ರ ಎಪಿಸೋಡ್ನಲ್ಲಿ ಗಾರ್ಡನ್ ಏರಿಯಾದಲ್ಲಿ ಕೇಕ್ ಇಟ್ಟು ಬಲೂನ್ಗಳ ಮೂಲಕ ಸಿಂಗರಿಸಲಾಗಿತ್ತು. ದಿವ್ಯಾ ಸುರೇಶ್ ಹಾಗೂ ಮಂಜು ಇಬ್ಬರೇ ಅಲ್ಲಿ ಕುಳಿತು ಮಾತುಕತೆ ನಡೆಸಿದರು.
View this post on Instagram
‘ನನಗೆ ಈ ಆಲೋಚನೆ ಬರೋದಕ್ಕೂ ಕಾರಣ ಇದೆ. ನಿನ್ನ ನೋಡಿದಾಗ ರೆಸ್ಪೆಕ್ಟ್ ಕೊಡಬೇಕು ಎನಿಸುತ್ತದೆ. ಮೊದಲ ಇನ್ನಿಂಗ್ಸ್ನಲ್ಲಿ ನಿನಗೆ ಬೇಜಾರು ಮಾಡಿದೆ. ನಾಮಿನೇಟ್ ಮಾಡಿದೆ. ಕೊನೆಯಲ್ಲಿ ನಿನ್ನ ಆಟಕ್ಕೆ ತೊಂದರೆ ಆಯ್ತು ಅಂತ ನನಗೆ ಅನ್ನಿಸ್ತು. ಜಾಸ್ತಿ ಪೊಸೆಸಿವ್ ಆದೆ. ನಿನ್ನ ನಿಯಂತ್ರಣ ಮಾಡಿದೆ. ನಿನಗೆ ಯಾವಾಗೂ ಸಾರಿ ಕೇಳಿಲ್ಲ. ಕರೆಕ್ಟ್ ಆಗಿ ಸಾರಿ ಕೇಳಿರಲಿಲ್ಲ. ನೀನಂದ್ರೆ ತುಂಬಾ ಇಷ್ಟ’ ಎಂದರು ದಿವ್ಯಾ.
‘ತಪ್ಪು ಗೊತ್ತಾದಾಗ ತಿದ್ದಿಕೊಳ್ಳೋದು ಮುಖ್ಯ. ಇದರಿಂದ ಹೊರ ಬಂದಮೇಲೆ ಎಲ್ಲರೂ ಒಳ್ಳೆದು ಮಾತಾಡ್ಬೇಕು. ನಾನು ಸಿನಿಮಾದಲ್ಲಿ ನೋಡಿದ್ದೆ ಇದನ್ನೆಲ್ಲ’ ಎಂದರು ಮಂಜು. ಇದಾದ ನಂತರ ದಿವ್ಯಾ ಎಲಿಮಿನೇಟ್ ಆಗಿದ್ದಾರೆ.
ಇದನ್ನೂ ಓದಿ:
Divya Suresh: ಬಿಗ್ ಬಾಸ್ ಸ್ಪರ್ಧಿಗಳಿಗೆ ಮುಖ ತೋರಿಸದೇ ಮನೆಯಿಂದ ಹೊರ ನಡೆದ ದಿವ್ಯಾ ಸುರೇಶ್
‘ಅರವಿಂದ್ ಬೈಕ್ ಮಿಸ್ ಹೊಡೆಯುತ್ತಿದೆ, ಫಿನಾಲೆ ಗೆಲ್ಲೋದು ಮಂಜು ಪಾವಗಡ’