ಬಿಗ್​ ಬಾಸ್​ ಮನೆಯವರಿಗೆ ಬೇಡವಾದರಾ ಮಂಜು? ಎಲ್ಲರ ಅಸಲಿಮುಖ ಬಯಲು

ಪ್ರತಿವಾರ ನಾಮಿನೇಷನ್ ಪ್ರಕ್ರಿಯೆ ಸೋಮವಾರವೇ ನಡೆಯುತ್ತಿತ್ತು. ಆದರೆ, ಈ ವಾರ ವಿಳಂಬವಾಗಿದೆ. ಶುಕ್ರವಾರ ನಾಮಿನೇಷನ್​ ಪ್ರಕ್ರಿಯೆ ನಡೆದಿದೆ.

  • TV9 Web Team
  • Published On - 15:23 PM, 1 May 2021
ಬಿಗ್​ ಬಾಸ್​ ಮನೆಯವರಿಗೆ ಬೇಡವಾದರಾ ಮಂಜು? ಎಲ್ಲರ ಅಸಲಿಮುಖ ಬಯಲು
ಮಂಜು ಪಾವಗಡ

ಬಿಗ್​ ಬಾಸ್​ ಎಲಿಮಿನೇಷನ್​ ಪ್ರಕ್ರಿಯೆ​ ಎಂದರೆ ಮನೆಯವರಿಗೆ ಒಂದು ರೀತಿಯ ತಲೆನೋವು. ಸ್ಪರ್ಧಿಗಳನ್ನು ಕೇವಲ ನಾಮಿನೇಷನ್​ ಮಾಡಿದರೆ ಮಾತ್ರ ಸಾಲದು, ಅದಕ್ಕೆ ಸೂಕ್ತ ಕಾರಣವನ್ನು ಕೂಡ ನೀಡಬೇಕು. ಮನೆಯಲ್ಲಿ ಎಲ್ಲರ ಜತೆಯೂ ಉತ್ತಮವಾಗಿರುವ ಮಂಜು ಈಗ ಮನೆಯವರಿಗೆ ಬೇಡವಾಗಿದ್ದಾರೆ. ಈ ವಿಚಾರ ನಾಮಿನೇಷನ್​ ವೇಳೆ ಸ್ಪಷ್ಟವಾಗಿದೆ.

ಪ್ರತಿವಾರ ನಾಮಿನೇಷನ್ ಪ್ರಕ್ರಿಯೆ ಸೋಮವಾರವೇ ನಡೆಯುತ್ತಿತ್ತು. ಆದರೆ, ಈ ವಾರ ವಿಳಂಬವಾಗಿದೆ. ಶುಕ್ರವಾರ ನಾಮಿನೇಷನ್​ ಪ್ರಕ್ರಿಯೆ ನಡೆದಿದೆ. ಈ ವೇಳೆ ಬಹುತೇಕರು ಮಂಜು ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ. ಅಲ್ಲದೆ ಅತಿ ಹೆಚ್ಚು ವೋಟ್​ ಪಡೆದು ಮಂಜು ಅವರೇ ನಾಮಿನೇಟ್​ ಲಿಸ್ಟ್​ನಲ್ಲಿ ಮೊದಲಿದ್ದಾರೆ.

ಈ ಬಾರಿ ಕ್ಯಾಪ್ಟನ್ಸಿ ಟಾಸ್ಕ್​ಗೆ ಅಭ್ಯರ್ಥಿಗಳ ಆಯ್ಕೆ ಮಾಡುವ ವೇಳೆ ಮಂಜು ತಪ್ಪು ನಿರ್ಧಾರ ತೆಗೆದುಕೊಂಡಿದ್ದರು. ಅರವಿಂದ್​ಗೋಸ್ಕರ ಅವರು ಆ ರೀತಿ ಮಾಡಿದ್ದಾರೆ ಎನ್ನುವ ಮಾತಿದೆ. ಈ ವಿಚಾರವನ್ನೇ ಇಟ್ಟುಕೊಂಡು ನಾಮಿನೇಷನ್​ ವೇಳೆ ಮನೆಯ ಬಹುತೇಕರು ಮಂಜು ಅವರ ಹೆಸರನ್ನು ತೆಗೆದುಕೊಂಡರು. ಅರವಿಂದ್​, ದಿವ್ಯಾ ಉರುಡುಗ, ಪ್ರಶಾಂತ್​ ಸೇರಿದಂತೆ ಬಹುತೇಕರು ಮಂಜು ಅವರನ್ನು ನಾಮಿನೇಷನ್​ಗೆ ಆಯ್ಕೆ ಮಾಡಿದರು.

ಮಂಜು ಪಾವಗಡ, ಗೇಮ್​ ಆಡಬೇಕಾದರೆ ಫೇವರಿಸಂ ಮಾಡುತ್ತಾರೆ, ದ್ವೇಷದ ಆಟ ಆಡುತ್ತಾರೆ, ಅವರು ರಿವೇಂಜ್​ ತೆಗೆದುಕೊಳ್ಳುತ್ತಾರೆ, ಮೋಸದ ಆಟ ಆಡುತ್ತಾರೆ ಎಂಬಿತ್ಯಾದಿ ಆರೋಪಗಳು ಬಂದವು. ಈ ಮೂಲಕ ಎಲಿಮಿನೇಷನ್​ ತೂಗುಗತ್ತಿ ಅವರ ತಲೆಯಮೇಲೆ ತೂಗುವಂತಾಯಿತು.

ಉಳಿದಂತೆ, ಪ್ರಶಾಂತ್, ಚಕ್ರವರ್ತಿ ಚಂದ್ರಚೂಡ್​, ಅರವಿಂದ್ ನಾಮಿನೇಟ್​ ಆದರು. ದಿವ್ಯಾ ಸುರೇಶ್​ ಹಾಗೂ ಪ್ರಿಯಾಂಕಾ ತಿಮ್ಮೇಶ್​ ನೇರವಾಗಿ ನಾಮಿನೇಟ್​ ಆಗಿದ್ದಾರೆ. ಕ್ಯಾಪ್ಟನ್​ ರಘು ಗೌಡ ಅವರು ಒಬ್ಬರ ಹೆಸರನ್ನು ನೇರವಾಗಿ ನಾಮಿನೇಟ್​ ಮಾಡಬೇಕಿತ್ತು. ಆಗ ಅವರು ಶುಭಾ ಅವರ ಹೆಸರನ್ನು ತೆಗೆದುಕೊಂಡರು. ಶುಭಾ ಗೋಲ್ಡನ್​ ಪಾಸ್​ ಬಳಸಿ ನಾಮಿನೇಷನ್​ನಿಂದ ಬಚಾವ್​ ಆದರು.

ಇದನ್ನೂ ಓದಿ: ಇದಿನ್ನೂ ಕೆಟ್ಟದಾಗಿ ಕಾಣಿಸುತ್ತಿದೆ; ಪ್ರಶಾಂತ್​ ಸಂಬರಗಿ ಗುಣಗಳು ಚಕ್ರವರ್ತಿಗೆ ಅಸಹ್ಯ ಮೂಡಿಸುತ್ತಿವೆ

ಬಿಗ್​ ಬಾಸ್ ಹೆಸರು ದುರ್ಬಳಕೆ ಮಾಡಿಕೊಂಡ ಪ್ರಶಾಂತ್​ ಸಂಬರಗಿ; ಸುದೀಪ್ ಛೀಮಾರಿ