Bigg Boss Kannada 8: ‘ಬಿಗ್​ ಬಾಸ್​ ಕನ್ನಡ ಸೀಸನ್​ 8’ ಬಗ್ಗೆ ಬಿಗ್​ ಅಪ್​ಡೇಟ್​; ಇನ್ನೂ ಮುಗಿದಿಲ್ಲ ಶೋ?

ನಿತ್ಯ 20 ಸಾವಿರಕ್ಕೂ ಅಧಿಕ ಪ್ರಕರಣಗಳು ಬರುತ್ತಿದ್ದ ಬೆಂಗಳೂರಿನಲ್ಲಿ ಈಗ ಕೊವಿಡ್ ನಿಯಂತ್ರಣಕ್ಕೆ ಬಂದಿದೆ. ಈ ಕಾರಣಕ್ಕೆ ಬೆಂಗಳೂರು ಕೂಡ ಸೋಮವಾರದಿಂದ (ಜೂನ್​ 14) ಅನ್​ಲಾಕ್​ ಆಗಲಿದೆ.

Bigg Boss Kannada 8: ‘ಬಿಗ್​ ಬಾಸ್​ ಕನ್ನಡ ಸೀಸನ್​ 8’ ಬಗ್ಗೆ ಬಿಗ್​ ಅಪ್​ಡೇಟ್​; ಇನ್ನೂ ಮುಗಿದಿಲ್ಲ ಶೋ?
ಸುದೀಪ್​

ಕೊವಿಡ್​ ಎರಡನೇ ಅಲೆ ನಿಯಂತ್ರಣಕ್ಕಾಗಿ ಹೇರಿದ ಲಾಕ್​ಡೌನ್​ನಿಂದ ‘ಕನ್ನಡ ಬಿಗ್​ ಬಾಸ್​ ಸೀಸನ್​ 8’ ಅರ್ಧಕ್ಕೆ ನಿಂತಿತ್ತು. ಈ ವಿಚಾರದ ಬಗ್ಗೆ ಕಲರ್ಸ್​ ಕನ್ನಡ ವಾಹಿನಿ ಅಧಿಕೃತ ಘೋಷಣೆ ಮಾಡುತ್ತಿದ್ದಂತೆಯೇ ಸ್ಪರ್ಧಿಗಳು ಹಾಗೂ ವೀಕ್ಷಕರಿಗೆ ಬಹಳಷ್ಟು ಬೇಸರವಾಗಿತ್ತು. ಈಗ ಕನ್ನಡ ‘ಬಿಗ್​ ಬಾಸ್ ಸೀಸನ್​ 8’ ಬಗ್ಗೆ ಹೊಸ ಅಪ್​ಡೇಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಕೊರೊನಾ ವೈರಸ್ ಎರಡನೇ ಅಲೆ ನಿಧಾನವಾಗಿ ಕಡಿಮೆ ಆಗುತ್ತಿದೆ. ಕೊರೊನಾ ಪ್ರಕರಣಗಳ ಸಂಖ್ಯೆ ನಿಯಂತ್ರಣಕ್ಕೆ ಬಂದ ಹಿನ್ನೆಲೆಯಲ್ಲಿ ರಾಜ್ಯದ 11 ಜಿಲ್ಲೆಗಳಲ್ಲಿ ಮಾತ್ರ ಲಾಕ್​ಡೌನ್​ ಮುಂದುವರಿಯುತ್ತಿದ್ದು, ಉಳಿದ ಕಡೆಗಳಲ್ಲಿ ಜೂನ್​ 14ರಿಂದ ಲಾಕ್​ಡೌನ್​ ತೆರವಾಗಲಿದೆ. ನಿತ್ಯ 20 ಸಾವಿರಕ್ಕೂ ಅಧಿಕ ಪ್ರಕರಣಗಳು ಬರುತ್ತಿದ್ದ ಬೆಂಗಳೂರಿನಲ್ಲಿ ಕೊವಿಡ್ ನಿಯಂತ್ರಣಕ್ಕೆ ಬಂದಿದೆ. ಈ ಕಾರಣಕ್ಕೆ ಬೆಂಗಳೂರು ಕೂಡ ಸೋಮವಾರದಿಂದ (ಜೂನ್​ 14) ಅನ್​ಲಾಕ್​ ಆಗಲಿದೆ.

ಈಗ ‘ಬಿಗ್​ ಬಾಸ್ ಸೀಸನ್​ 8’ ಬಗ್ಗೆ ಹೊಸ ಅಪ್​ಡೇಟ್​ ಒಂದು ಸಿಕ್ಕಿದೆ. ಶೀಘ್ರವೇ ಬಿಗ್​ ಬಾಸ್​ ಪುನರಾರಂಭಗೊಳ್ಳಲಿದೆಯಂತೆ. ಹೌದು, ಕೊವಿಡ್​ ಇನ್ನೊಂದು ತಿಂಗಳಲ್ಲಿ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬರುವ ನಿರೀಕ್ಷೆ ಇದೆ. ನಂತರ ಶೂಟಿಂಗ್​ಗೂ ಅವಕಾಶ ಸಿಗಲಿದೆ. ಹೀಗಾಗಿ, ಜೂನ್​ ಅಂತ್ಯಕ್ಕೆ ಬಿಗ್​ ಬಾಸ್​ ಮತ್ತೆ ಆರಂಭಗೊಳ್ಳಲಿದೆ ಎನ್ನುವ ಮಾತು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.

ಈಗಾಗಲೇ ಕನ್ನಡ ಬಿಗ್​ ಬಾಸ್​ 70 ದಿನಗಳನ್ನು ಪೂರ್ಣಗೊಳಿಸಿದೆ. ಇನ್ನೂ ಒಂದು ತಿಂಗಳು ಬಾಕಿ ಇರುವಾಗಲೇ ಶೋ ನಿಂತಿದೆ. ಮೂಲಗಳ ಪ್ರಕಾರ, ಜೂನ್​ ಕೊನೆಯಲ್ಲಿ ಬಿಗ್​ ಬಾಸ್ ಆರಂಭವಾಗಲಿದ್ದು, ಹೊಸ ರೀತಿಯಲ್ಲಿ ಶೋ ಮುಂದುವರಿಯಲಿದೆಯಂತೆ. ಈ ವಿಚಾರ ಸದ್ಯ ಅಭಿಮಾನಿಗಳಿಗೆ ಖುಷಿ ನೀಡಿದೆ. ಇನ್ನು, ಬಿಗ್​ ಬಾಸ್ ಮತ್ತೆ ಆರಂಭವಾದರೆ, 30 ದಿನಕ್ಕೆ ಪೂರ್ಣಗೊಳಿಸದೆ ಇನ್ನೂ ವಿಸ್ತರಣೆ ಮಾಡುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ.

ಬಿಗ್​ ಬಾಸ್​ ಕೊನೆಯ ದಿನ ಎಲ್ಲಾ ಸ್ಪರ್ಧಿಗಳಿಗೆ ಸಂದೇಶವೊಂದು ಬಂದಿತ್ತು. ‘ಈಗ ಅರ್ಧಕ್ಕೆ ನಿಂತ ಪ್ರಯಾಣ ಯಾವಾಗ ಬೇಕಾದರೂ ಮುಂದುವರಿಬಹುದು’ ಎನ್ನುವ ಮಾತನ್ನು ಬಿಗ್​ ಬಾಸ್​ ಹೇಳಿದ್ದರು. ಆಗಲೇ ಬಿಗ್​ ಬಾಸ್ ಮತ್ತೆ ಆರಂಭವಾಗಲಿದೆ ಎನ್ನುವ ಗುಸುಗುಸು ಆರಂಭವಾಗಿತ್ತು. ಈಗ ಅದು ನಿಜವಾಗುವ ಕಾಲ ಸಮೀಪವಾಗಿದೆ.

ಇದನ್ನೂ ಓದಿ:

ಬಿಗ್​ ಬಾಸ್​ ಹೊಸ ಸೀಸನ್​ನಲ್ಲಿ ರವಿಚಂದ್ರನ್​ ಸಿನಿಮಾ ನಾಯಕಿ? ಕೇಳಿಬರ್ತಿದೆ ಸ್ಟಾರ್ ನಟಿ ಹೆಸರು