Bigg Boss Kannada Day 3: ಬ್ರೋ-ಪ್ರಶಾಂತ್​ ನಡುವೆ ಆರಂಭವಾದ ಜಗಳ ಇಡೀ ಮನೆಗೆ ಹೊತ್ತಿಕೊಳ್ಳುತ್ತಾ?

ಡ್ರಾಮಾ ಮಾಡುವಾಗ ಸೈಲೆನ್ಸ್​ ಇಲ್ಲ ಎಂದರೆ ಕಷ್ಟ. ಮಧ್ಯೆ ಬಂದು ಡಿಸ್ಟರ್ಬ್​ ಮಾಡೋದೇಕೆ ಎಂದು ಪ್ರಶಾಂತ್​ ಬ್ರೋ ಗೌಡ ಅವರನ್ನು ಪ್ರಶ್ನೆ ಮಾಡಿದ್ದಾರೆ. ಈ ವಿಚಾರದಲ್ಲಿ ಮಾತಿಗೆ ಮಾತು ಬೆಳೆದಿದೆ.

  • TV9 Web Team
  • Published On - 23:04 PM, 3 Mar 2021
Bigg Boss Kannada Day 3: ಬ್ರೋ-ಪ್ರಶಾಂತ್​ ನಡುವೆ ಆರಂಭವಾದ ಜಗಳ ಇಡೀ ಮನೆಗೆ ಹೊತ್ತಿಕೊಳ್ಳುತ್ತಾ?
ಬಿಗ್​ ಬಾಸ್​ನಲ್ಲಿ ಬ್ರೋ ಗೌಡ-ಪ್ರಶಾಂತ್​

ಬಿಗ್​ ಬಾಸ್​ ಆರಂಭವಾಗಿ ಮೂರು ದಿನ ಕಳೆದಿವೆ. ಇಲ್ಲಿಯವರೆಗೆ ಮನೆಯಲ್ಲಿ ಸಾಕಷ್ಟು ಡ್ರಾಮಾ, ಪ್ರೇಮ ಕಥೆಗಳು ನಡೆದಿವೆ. ಆದರೆ, ಈವರೆಗೆ ಯಾವುದೇ ಜಗಳ ಕಂಡುಬಂದಿರಲಿಲ್ಲ. ಇದೇ ಮೊದಲ ಬಾರಿಗೆ ಬಿಗ್​ ಬಾಸ್ ಮನೆಯಲ್ಲಿ ಜಗಳ ಒಂದು ನಡೆದಿದೆ. ಪ್ರಶಾಂತ್​ ಮತ್ತು ಶ್ಯಮಂತ್​ ಅಲಿಯಾಸ್​ ಬ್ರೋ ಗೌಡ ಕಿತ್ತಾಡಿಕೊಂಡಿದ್ದಾರೆ. ಕೆಲವರು ಬ್ರೋ ಗೌಡ ಪರ ವಹಿಸಿಕೊಂಡು ಬಂದರೆ, ಇನ್ನೂ ಕೆಲವರು ಪ್ರಶಾಂತ್​ ಬೆಂಬಲಕ್ಕೆ ನಿಂತಿದ್ದಾರೆ.

ಮನೆಯಲ್ಲಿ ನಾಟಕ ಏರ್ಪಡಿಸಿದ್ದರು. ಪ್ರಶಾಂತ್​ ಹಾಗೂ ದಿವ್ಯಾ ನಾಟಕ ಮಾಡುತ್ತಿದ್ದರು. ಇದು ಹಾಸ್ಯ ರೂಪದಲ್ಲಿ ನಡೆಯುತ್ತಿದ್ದರಿಂದ ಅನೇಕರು ಮಧ್ಯೆ ಬಂದು ಕಿಚಾಯಿಸುತ್ತಿದ್ದರು. ಇದರಲ್ಲಿ ಬ್ರೋ ಗೌಡ ಕೂಡ ಒಬ್ಬರು. ನಾಟಕ ಮುಗಿದ ಮೇಲೆ ಬ್ರೋ ಗೌಡನಿಗೆ ಪ್ರಶಾಂತ್​ ಕ್ಲಾಸ್​ ತೆಗೆದುಕೊಂಡರು.

ಡ್ರಾಮಾ ಮಾಡುವಾಗ ಸೈಲೆನ್ಸ್​ ಇಲ್ಲ ಎಂದರೆ ಕಷ್ಟ. ಮಧ್ಯೆ ಬಂದು ಡಿಸ್ಟರ್ಬ್​ ಮಾಡೋದೇಕೆ ಎಂದು ಪ್ರಶಾಂತ್​ ಬ್ರೋ ಗೌಡ ಅವರನ್ನು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಸಿಟ್ಟಾದ ಬ್ರೋ ಗೌಡ, ನಾನೋಬ್ಬನೇ ಅಲ್ಲಿ ಕೂಗುತ್ತಾ ಇದ್ದಿದ್ದಾ? ನೀವೇಕೆ ನನ್ನ ಬಳಿ ಬಂದು ಪ್ರಶ್ನೆ ಮಾಡಬೇಕಿತ್ತು ಎಂದು ರೈಸ್​ ಆಗಿದ್ದಾರೆ. ಈ ವಿಚಾರದ ಬಗ್ಗೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ.

ಇದನ್ನೂ ಓದಿ: Bigg Boss Kannada Day 3: ಧನುಶ್ರೀ ಮೇಕಪ್​ ತೆಗೆಯೋಕೆ ಒಂದು ವರ್ಷ ಸ್ನಾನ ಮಾಡಬೇಕು ಎಂದ ಪ್ರಶಾಂತ್​ ಸಂಬರಗಿ