Bigg Boss Kannada: ಕಳ್ಳ​ ನನ್ಮಗ ಎಂದು ಪ್ರಶಾಂತ್​ಗೆ ಬೈಯ್ದ ನಿಧಿ! ಅಚ್ಚರಿ ಹುಟ್ಟಿಸಿದ ಸಂಬರಗಿ ಪ್ರತಿಕ್ರಿಯೆ

Nidhi Subbaiah: ಹೆಜ್ಜೆ ಹೆಜ್ಜೆಗೂ ಪ್ರಶಾಂತ್​ ಸಂಬರಗಿ ಸುಳ್ಳು ಹೇಳುತ್ತಾರೆ ಎಂಬುದು ಈಗಾಗಲೇ ಸಾಬೀತಾಗಿದೆ. ಇದು ನಿಧಿಗೆ ಕಿಂಚಿತ್ತೂ ಇಷ್ಟ ಆಗುತ್ತಿಲ್ಲ. ಹಾಗಾಗಿ ಪ್ರಶಾಂತ್​ಗೆ ‘ಕಳ್ಳ ನನ್ಮಗ’ ಎಂದು ಅವರು ಬೈಯ್ದಿದ್ದಾರೆ.

  • TV9 Web Team
  • Published On - 15:47 PM, 7 Apr 2021
Bigg Boss Kannada: ಕಳ್ಳ​ ನನ್ಮಗ ಎಂದು ಪ್ರಶಾಂತ್​ಗೆ ಬೈಯ್ದ ನಿಧಿ! ಅಚ್ಚರಿ ಹುಟ್ಟಿಸಿದ ಸಂಬರಗಿ ಪ್ರತಿಕ್ರಿಯೆ
ನಿಧಿ ಸುಬ್ಬಯ್ಯ - ಪ್ರಶಾಂತ್​ ಸಂಬರಗಿ

ಬಿಗ್​ ಬಾಸ್​ ಮನೆಯಲ್ಲೀಗ ಆಟ ತೀವ್ರವಾಗಿದೆ. ತಮ್ಮ ಉಳಿವಿಗಾಗಿ ಎಲ್ಲರೂ ಸಿಕ್ಕಾಪಟ್ಟೆ ಹಣಾಹಣಿ ನಡೆಸುತ್ತಿದ್ದಾರೆ. ಟಾಸ್ಕ್​ನಲ್ಲಿ ಗೆಲ್ಲುವುದು ಮಾತ್ರವಲ್ಲದೆ ಕಿರಿಕ್​ಗಳನ್ನೂ ನಿಭಾಯಿಸಬೇಕಾದ ಅನಿವಾರ್ಯತೆ ಇದೆ. ಈ ಸಂದರ್ಭದಲ್ಲಿ ಪ್ರಶಾಂತ್​ ಸಂಬರಗಿ ಅವರ ನಡೆ ಅಚ್ಚರಿ ಮೂಡಿಸುತ್ತಿದೆ. ಅವರನ್ನು ಎಲ್ಲರೂ ಟಾರ್ಗೆಟ್​ ಮಾಡುತ್ತಿದ್ದಾರೆ. ಹಾಗೆ ಟಾರ್ಗೆಟ್​ ಆಗುವ ರೀತಿಯಲ್ಲೇ ಪ್ರಶಾಂತ್​ ನಡೆದುಕೊಳ್ಳುತ್ತಿದ್ದಾರೆ. ಇತ್ತೀಚೆಗೆ ನಟಿ ನಿಧಿ ಸುಬ್ಬಯ್ಯ ಅವರು ಮುಖಕ್ಕೆ ಹೊಡೆದಂತೆ ಪ್ರಶಾಂತ್​ ಸಂಬರಗಿಗೆ ಬೈಯ್ದಿದ್ದಾರೆ!

ಹೆಜ್ಜೆ ಹೆಜ್ಜೆಗೂ ಪ್ರಶಾಂತ್​ ಸಂಬರಗಿ ಸುಳ್ಳು ಹೇಳುತ್ತಾರೆ ಎಂಬುದು ಈಗಾಗಗಲೇ ಸಾಬೀತಾಗಿದೆ. ವೀಕ್ಷಕರ ಗಮನಕ್ಕೂ ಅದು ಬಂದಿದೆ. ಮೊದಲು ತಪ್ಪು ಮಾಡಿ, ಆಮೇಲೆ ತನ್ನಿಂದ ತಪ್ಪೇ ಆಗಿಲ್ಲ ಎಂದು ವಾದಿಸುವ ಚಾಳಿ ಪ್ರಶಾಂತ್​ ಅವರದ್ದು. ಇದು ನಿಧಿಗೆ ಕಿಂಚಿತ್ತೂ ಇಷ್ಟ ಆಗಿಲ್ಲ. ಇದೇ ವಿಚಾರವಾಗಿ ಅಡುಗೆ ಮನೆಯಲ್ಲಿ ಚರ್ಚೆ ಆಗುತ್ತಿತ್ತು. ಈ ವೇಳೆ ಪ್ರಶಾಂತ್​ಗೆ ‘ಕಳ್ಳ ನನ್ಮಗ’ ಎಂದು ನಿಧಿ ಬೈಯ್ದರು.

‘ಅರ್ಧ ಚಮಚ ತುಪ್ಪದ ವಿಚಾರಕ್ಕೆ ಮನೆಯವರನ್ನು ನೋಡಿ ಇಡೀ ಕರ್ನಾಟಕ ನಗುವಂತೆ ಮಾಡಿದ್ರಲ್ಲ ಅಂತ ಸುದೀಪ್​ ಹೇಳಿದ್ರು’ ಎಂದು ಅಡುಗೆ ಮನೆಯಲ್ಲಿ ಚಂದ್ರಚೂಡ್​ಗೆ ಪ್ರಶಾಂತ್​ ಹೇಳುತ್ತಿದ್ದರು. ಆ ಮಾತಿಗೆ ನಿಧಿ ವಿರೋಧ ವ್ಯಕ್ತಪಡಿಸಿದರು. ಸುದೀಪ್​ ಆ ರೀತಿ ಹೇಳಿಯೇ ಇಲ್ಲ ಎಂದು ನಿಧಿ ವಾದಿಸಿದರು. ಆದರೂ ಹಠ ಬಿಡಿದೇ ಪ್ರಶಾಂತ್​ ಮಾತು ಮುಂದುವರಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ನಿಧಿ, ‘ಯಾಕೆ ಸುಳ್ಳು ಹೇಳುತ್ತೀರಿ? ಮಾತು ಮಾತಿಗೆ ತಾಯಾಣೆ ಹಾಕೋದು. ಕಳ್​ ನನ್ಮಗ’ ಎಂದು ಹೇಳಿದರು.

‘ಕಳ್​ ನನ್ಮಗ’ ಎಂದು ನಿಧಿ ಹೇಳಿದ್ದು ಪ್ರಶಾಂತ್​ಗೆ ಸ್ಪಷ್ಟವಾಗಿ ಕೇಳಿಸಿತು. ಅವರು ಅರ್ಧ ಸೆಕೆಂಡ್​ ಮೌನವಾದರೇ ಹೊರತು ಹೆಚ್ಚಿನ ಪ್ರತಿಕ್ರಿಯೆ ನೀಡಲಿಲ್ಲ. ಇದು ಎಲ್ಲರಿಗೂ ಅಚ್ಚರಿ ಮೂಡಿಸುತ್ತಿದೆ. ಚಿಕ್ಕ ಪುಟ್ಟ ವಿಚಾರಗಳಿಗೆ ನೇರಾನೇರ ಜಗಳ ಮಾಡುವ ಪ್ರಶಾಂತ್​ ಸಂಬರಗಿ ಅವರು ‘ಕಳ್​ ನನ್ಮಗ’ ಎಂಬ ಬೈಯ್ಗುಳವನ್ನು ಕೇಳಿಸಿಕೊಂಡು ಯಾಕೆ ಸುಮ್ಮನಾದರೂ? ಈ ಪ್ರಶ್ನೆ ವೀಕ್ಷಕರ ತಲೆಯಲ್ಲಿ ಕೊರೆಯುತ್ತಿದೆ.

ನಿಧಿ ಹೀಗೆ ಹೀನಾಮಾನ ಬೈಯ್ದಿದ್ದನ್ನು ಕೇಳಿಸಿಕೊಂಡು ಸುಮ್ಮನಿರುವ ವ್ಯಕ್ತಿತ್ವ ಪ್ರಶಾಂತ್​ ಸಂಬರಗಿ ಅವರದ್ದು ಅಲ್ಲವೇ ಅಲ್ಲ. ಆದರೂ ಅವರು ಸೈಲೆಂಟ್​ ಆಗಿದ್ದಾರೆ ಎಂದರೆ ಅದರ ಹಿಂದೆ ಏನೋ ಸ್ಟ್ರಾಟಜಿ ಇದೆ ಎಂಬುದು ಖಂಡಿತ. ‘ನಿಧಿ ಕಳ್ ನನ್ಮಗ ಎಂದು ಬೈಯ್ದಳು. ನನಗೆ ಸ್ಪಷ್ಟವಾಗಿ ಕೇಳಿಸಿತು’ ಎಂದು ಚಕ್ರವರ್ತಿ ಚಂದ್ರಚೂಡ್​ ಕೂಡ ಆ ಘಟನೆಯನ್ನು ಪ್ರಶಾಂತ್​ಗೆ ಮತ್ತೆ ನೆನಪಿಸಿದರು. ಆದರೂ ಪ್ರಶಾಂತ್​ ಹೆಚ್ಚೇನೂ ಕೆರಳಿಲ್ಲ. ಇದು ನಿಜಕ್ಕೂ ಅಚ್ಚರಿ ಮೂಡಿಸುತ್ತಿದೆ. ಮನೆ ಹೊರಗೆ ಇದ್ದಾಗ ತಮಗೆ ಸಂಬಂಧವೇ ಇಲ್ಲದ ವಿಚಾರಗಳಲ್ಲಿ ತಲೆಹಾಕಿ ಕೂಗಾಡುತ್ತಿದ್ದ ಸಂಬರಗಿ, ಈಗ ತಾವೇ ಬೈಯ್ಸಿಕೊಂಡರೂ ಸೈಲೆಂಟ್​ ಆಗಿದ್ದಾರೆ!

ಇದನ್ನೂ ಓದಿ: ಬಿಗ್​ ಬಾಸ್​ ಮನೆಯಲ್ಲಿ ನಮಗೆ ಒತ್ತಡ ಹೇರುತ್ತಾರೆ! ಶಂಕರ್​ ಅಶ್ವತ್ಥ್​ ಹೀಗೆ ಹೇಳಿದ್ದು ಯಾಕೆ?

ಬಿಗ್​ ಬಾಸ್​ನಲ್ಲಿ ಗುಟ್ಟಾಗಿ ನಡೆಯುತ್ತಿದ್ದ ನಾಮಿನೇಷನ್​ ಈಗ ಬಟಾಬಯಲು! ಯಾರಿಗೆಲ್ಲ ಕಾದಿದೆ ಅಪಾಯ?

 

(Bigg Boss Kannada: Nidhi Subbaiah makes derogatory comment on Prashanth Sambargi in BBK8)