Bigg Boss Kannada: ಮಧ್ಯರಾತ್ರಿ ನಾಗವಲ್ಲಿ ರೀತಿ ವರ್ತಿಸಿದ ನಿರ್ಮಲಾ! ವಿಚಿತ್ರ ವೇಷ ಕಂಡು ಬೆಚ್ಚಿ ಬಿತ್ತು ದೊಡ್ಮನೆ

ಬಿಗ್​ ಬಾಸ್​ ಮನೆಯಲ್ಲಿ ಈಗ ಹಾರರ್​ ವಾತಾವರಣ ನಿರ್ಮಾಣ ಆಗಿದೆ. ನಿರ್ಮಲಾ ಚೆನ್ನಪ್ಪ ಅವರ ವರ್ತನೆ ನೋಡಿ ಎಲ್ಲರೂ ಕಂಗಾಲಾಗಿದ್ದಾರೆ.

  • TV9 Web Team
  • Published On - 20:22 PM, 5 Mar 2021
Bigg Boss Kannada: ಮಧ್ಯರಾತ್ರಿ ನಾಗವಲ್ಲಿ ರೀತಿ ವರ್ತಿಸಿದ ನಿರ್ಮಲಾ! ವಿಚಿತ್ರ ವೇಷ ಕಂಡು ಬೆಚ್ಚಿ ಬಿತ್ತು ದೊಡ್ಮನೆ
ನಿರ್ಮಲಾ ಚೆನ್ನಪ್ಪ

ಬಿಗ್ ಬಾಸ್​ಗೆ ಹಲವು ಬಗೆಯ ವ್ಯಕ್ತಿತ್ವದವರು ಎಂಟ್ರಿ ನೀಡುತ್ತಾರೆ. ಅದರಲ್ಲೂ ಕೆಲವರ ವರ್ತನೆ ವಿಚಿತ್ರವಾಗಿರುತ್ತೆದೆ. ಈಗ ನಿರ್ಮಲಾ ಚೆನ್ನಪ್ಪ ಅವರು ಅದೇ ಹಾದಿ ಹಿಡಿದಿದ್ದಾರೆ. ನಡುರಾತ್ರಿಯಲ್ಲಿ ಅವರು ನಾಗವಲ್ಲಿ ರೀತಿ ಮಾಡುತ್ತಿರುವುದು ಎಲ್ಲರ ಆತಂಕಕ್ಕೆ ಕಾರಣ ಆಗಿದೆ. ಕ್ಯಾಪ್ಟನ್​ ಶಮಂತ್​ ಬ್ರೋ ಗೌಡ ಕೂಡ ಹೆದರಿಕೊಂಡಿದ್ದಾರೆ.

ದಿನವಿಡೀ ತುಂಬಾ ಸಿಂಪಲ್​ ಆಗಿ ಬಟ್ಟೆ ಧರಿಸಿದ್ದ ನಿರ್ಮಲಾ ಚೆನ್ನಪ್ಪ ಅವರು ಮಧ್ಯರಾತ್ರಿ ಆಗುತ್ತಿದ್ದಂತೆಯೇ ಸೀರೆ ಧರಿಸಿದ್ದಾರೆ. ಅಷ್ಟೇ ಅಲ್ಲ, ಮೇಕಪ್​ ಮಾಡಿಕೊಂಡು ಕನ್ನಡಿ ಮುಂದೆ ನಿಂತಿದ್ದಾರೆ. ಅದೂ ಸಾಲದೆಂಬಂತೆ ಮೂಲೆಯಲ್ಲಿ ಕುಳಿತು ಒಬ್ಬೊಬ್ಬರೇ ಮಾತನಾಡಿಕೊಳ್ಳುತ್ತಿದ್ದಾರೆ! ಇದನ್ನು ನೋಡಿದ ಎಲ್ಲರೂ ಅಚ್ಚರಿಗೆ ಒಳಗಾಗಿದ್ದಾರೆ. ಮುಂದೇನಾಗುತ್ತೋ ಅಂತ ಭಯದ ವಾತಾವರಣ ನಿರ್ಮಾಣ ಆಗಿದೆ.

‘ನನಗೆ ತುಂಬ ಟೆನ್ಷನ್​ ಆಗ್ತಾ ಇದೆ. ತಲೆ ಕೆಡ್ತಾ ಇದೆ. ಸಡನ್​ ಆಗಿ ಅವರು ಸೀರೆ ಉಟ್ಟುಕೊಂಡಾಗ ನನಗೆ ಭಯ ಆಗಿಹೋಯ್ತು. ಮಲಗುವಾಗ ಡ್ರೆಸ್​ ಚೇಂಜ್​ ಮಾಡುತ್ತೇನೆ ಎಂದಿದ್ದರು. ಆದರೆ ಚೇಂಜ್​ ಮಾಡದೇ ಹಾಗೆಯೇ ಮಲಗಿದ್ದಾರೆ. ಅದಕ್ಕೆ ನನಗೆ ತುಂಬ ಭಯ ಆಗ್ತಾ ಇದೆ. ಎಲ್ಲರೂ ಆತಂಕಪಟ್ಟುಕೊಂಡಿದ್ದಾರೆ. ನನಗೆ ಏನು ಮಾಡಬೇಕು ಎಂಬುದು ಗೊತ್ತಾಗದೇ ಟೆನ್ಷನ್​ ಆಗುತ್ತಿದೆ’ ಎಂದು ಬಿಗ್​ ಬಾಸ್​ ಬಳಿ ಶಮಂತ್​ ಬ್ರೋ ಗೌಡ ಆತಂಕ ತೋಡಿಕೊಂಡಿದ್ದಾರೆ.

‘ನನಗೆ ಸೀರೆಯೇ ಇಷ್ಟ. ಇದರಲ್ಲೇ ಇರುತ್ತೇನೆ. ಚೆನ್ನಾಗಿ ಕಾಣುತ್ತಿದ್ದೇನೆ. ಮೂರು ದಿನದಿಂದ ಹೆಂಗೆಂಗೂ ಬಿದ್ದುಕೊಂಡಿದ್ದೆ’ ಎಂದು ಶಮಂತ್​ಗೆ ನಿರ್ಮಲಾ ಸಮಜಾಯಿಷಿ ನೀಡಿದ್ದಾರೆ. ಈ ಉತ್ತರದಿಂದ ಶಮಂತ್​ ಸಮಾಧಾನ ಆದಂತೆ ಕಾಣುತ್ತಿಲ್ಲ. ‘ದಿನದ 24 ಗಂಟೆ ಒಬ್ಬೊಬ್ಬರೆ ಮಾತನಾಡುತ್ತಾರೆ. ವೀಕ್ಷಕರ ಕಣ್ಣು ತನ್ನ ಕಡೆಗೆ ಬೀಳಲಿ ಎಂದು ರಾತ್ರಿ ಮೇಕಪ್​ ಮಾಡಿಕೊಂಡು ಬಂದಿದ್ದಾರೆ’ ಎಂದೆಲ್ಲ ಇತರೆ ಸ್ಪರ್ಧಿಗಳು ಗುಸುಗುಸು ಮಾತನಾಡಿಕೊಂಡಿದ್ದಾರೆ. ಮೂಲೆಯಲ್ಲಿ ಕುಳಿತುಕೊಂಡು, ‘ಇಲ್ಲಿ ನಾನು ಯಾರನ್ನೂ ಗೆಲ್ಲಲು ಬಂದಿಲ್ಲ. ನನ್ನನ್ನು ನಾನು ಗೆಲ್ಲಲು ಬಂದಿದ್ದೇನೆ’ ಎಂದು ನಿರ್ಮಲಾ ಒಬ್ಬರೇ ಮಾತನಾಡಿಕೊಂಡಿರುವುದರಿಂದ ಭಯದ ವಾತಾವರಣ ನಿರ್ಮಾಣ ಆಗಿದೆ.

ಇದನ್ನೂ ಓದಿ: Bigg Boss Kannada: ನಿರ್ಮಲಾಗೋಸ್ಕರ ಮನಸ್ಸು ಬದಲಾಯಿಸಿಕೊಂಡ ಪ್ರಶಾಂತ್​ ಸಂಬರಗಿ! ಇದು ಸಖತ್​ ಅನಿರೀಕ್ಷಿತ

Bigg Boss Kannada: ಎರಡನೇ ವಾರವೂ ಶಮಂತ್​ ಬ್ರೋ ಗೌಡ ಕ್ಯಾಪ್ಟನ್​ ಆಗಿದ್ದು ಹೇಗೆ? ಹೊತ್ತಿಕೊಂಡಿದೆ ಅಸಮಾಧಾನದ ಬೆಂಕಿ!