Bigg Boss Kannada: ಬಿಗ್​ ಬಾಸ್​ ಪ್ರಿಯರಿಗೆ ಕಹಿ ಸುದ್ದಿ; ಅರ್ಧಕ್ಕೆ ನಿಂತ ಸೀಸನ್​ 8

Bigg Boss Kannada 8: ಕನ್ನಡ ಬಿಗ್​ ಬಾಸ್​ ಇತಿಹಾಸದಲ್ಲಿ ಈ ರೀತಿ ಶೋ ಅರ್ಧಕ್ಕೆ ನಿಂತಿದ್ದು ಇದೇ ಮೊದಲು. ಈ ಮೊದಲು ಮೊದಲನೇ ಅಲೆ ಕಾಣಿಸಿಕೊಂಡಾಗ ಮಲಯಾಳಂನಲ್ಲಿ ಬಿಗ್​ ಬಾಸ್​ಅನ್ನು ಅರ್ಧಕ್ಕೆ ನಿಂತಿತ್ತು.

Bigg Boss Kannada: ಬಿಗ್​ ಬಾಸ್​ ಪ್ರಿಯರಿಗೆ ಕಹಿ ಸುದ್ದಿ; ಅರ್ಧಕ್ಕೆ ನಿಂತ  ಸೀಸನ್​ 8
ಬಿಗ್​​ಬಾಸ್​​ ಕನ್ನಡ 8


2021ರ ಆರಂಭದಲ್ಲಿ ಕರ್ನಾಟಕದಲ್ಲಿ ಕೊರೊನಾ ವೈರಸ್​ ನಿಯಂತ್ರಣದಲ್ಲಿತ್ತು. ಈ ಕಾರಣಕ್ಕೆ ಕಲರ್ಸ್​ ಕನ್ನಡ ವಾಹಿನಿ ಬಿಗ್​ ಬಾಸ್ ಕನ್ನಡ​ ಸೀಸನ್​ 8  ಆರಂಭಿಸಿತ್ತು. ಫೆಬ್ರವರಿ 28ರಂದು ಸೀಸನ್​ 8 ಗ್ರ್ಯಾಂಡ್​ ಓಪನಿಂಗ್​ ಪಡೆದುಕೊಂಡಿತ್ತು. ಆದರೆ, ಮಾರ್ಚ್​​ ನಂತರದಲ್ಲಿ ಕೊರೊನಾ ಕೇಸ್​ ಮಿತಿಮೀರುತ್ತಿದೆ. ಹೀಗಾಗಿ, ಕಠಿಣ ಲಾಕ್​ಡೌನ್​ ಘೋಷಣೆ ಮಾಡಿದೆ. ಇದರಿಂದ ಬಿಗ್​ ಬಾಸ್​ ಸೀಸನ್​ 8ಅನ್ನು ವಾಹಿನಿ ಅರ್ಧಕ್ಕೆ ನಿಲ್ಲಿಸುವ ನಿರ್ಧಾರ ಕೈಗೊಂಡಿದೆ.

ಬಿಗ್​ ಬಾಸ್​ ಮನೆ ಒಳಗೆ ತೆರಳುವ ಸ್ಪರ್ಧಿಗಳು ಹೋಟೆಲ್​ನಲ್ಲಿ ಕ್ವಾರಂಟೈನ್​ ಆಗಿ ಬಿಗ್​ ಬಾಸ್​ ಮನೆ ಪ್ರವೇಶಿಸಿದ್ದರು.  ಬಿಗ್​ ಬಾಸ್​ ಕೆಲಸಕ್ಕಾಗಿ ನೇಮಕಗೊಂಡ ಸಿಬ್ಬಂದಿ ಕೂಡ ಕೊವಿಡ್​ ನಿಯಮವನ್ನು ಕಡ್ಡಾಯವಾಗಿ ಪಾಲಿಸುತ್ತಿದ್ದರು. ಇಷ್ಟೆಲ್ಲ ಕಷ್ಟಪಟ್ಟರೂ ಶೋ ನಡೆಸಲು ಸಾಧ್ಯವಾಗುತ್ತಿಲ್ಲ. ಸರ್ಕಾರದ ನಿಯಮದಂತೆ ಬಿಗ್​ ಬಾಸ್​ ಬಾಸ್​ ನಿಲ್ಲಿಸಲೇಬೇಕಾದ ಪರಿಸ್ಥಿತಿ ಬಂದೊದಗಿದೆ.

ಕಳೆದ ಬಾರಿ ಕೊರೊನಾ ಕರ್ಫ್ಯೂ ವೇಳೆ ಬೆಳಗ್ಗೆ 6-12 ಗಂಟೆವರೆಗೆ ಅಗತ್ಯ ವಸ್ತು ಖರೀದಿಗೆ ಅವಕಾಶ ಕಲ್ಪಿಸಿತ್ತು. ಅಲ್ಲದೆ, ಜನರ ಓಡಾಟಕ್ಕೂ ಅಷ್ಟಾಗಿ ಕಠಿಣ ನಿರ್ಬಂಧ ಇರಲಿಲ್ಲ. ಹೀಗಾಗಿ, ಒಳಾಂಗಣದಲ್ಲಿ ಧಾರಾವಾಹಿಗಳ  ಶೂಟಿಂಗ್​ ನಡೆಸಲಾಗುತ್ತಿತ್ತು. ಶುಕ್ರವಾರ ಮಾತನಾಡಿದ್ದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್, ಒಳಾಂಗಣ ಹಾಗೂ ಹೊರಾಂಗಣ ಯಾವುದೇ ರೀತಿಯ ಶೂಟಿಂಗ್​ಗೆ  ಅವಕಾಶ ಇಲ್ಲ ಎಂದು ಹೇಳಿದ್ದರು. ಹೀಗಾಗಿ ಕಲರ್ಸ್​ ವಾಹಿನಿ ಅರ್ಧಕ್ಕೆ ಶೋ ನಿಲ್ಲಿಸುವು ಅನಿವಾರ್ಯವಾಗಿದೆ. ಈ ಬಗ್ಗೆ ಕಲರ್ಸ್​ ಕನ್ನಡ ವಾಹಿನಿ ಬ್ಯುಸಿನೆಸ್​ ಹೆಡ್​ ಈ ಬಗ್ಗೆ ಪೋಸ್ಟ್​ ಮಾಡಿದ್ದಾರೆ.

ಬಿಗ್​ ಬಾಸ್​ ಮನೆಯಲ್ಲಿ ಅರವಿಂದ್ ಕೆ.ಪಿ., ಮಂಜು ಪಾವಗಡ, ಶಮಂತ್​ ಬ್ರೋ ಗೌಡ, ಚಕ್ರವರ್ತಿ ಚಂದ್ರಚೂಡ್​, ರಘು ಗೌಡ, ಶುಭಾ ಪೂಂಜಾ, ವೈಷ್ಣವಿ ಗೌಡ, ದಿವ್ಯಾ ಸುರೇಶ್​, ಪ್ರಿಯಾಂಕಾ ತಿಮ್ಮೇಶ್​, ನಿಧಿ ಸುಬ್ಬಯ್ಯ ಇದ್ದರು. ಇವರೆಲ್ಲರಿಗೂ ಈಗ ನಿರಾಸೆ ಉಂಟಾಗಿದೆ.

ಬಿಗ್​ ಬಾಸ್​ ಕನ್ನಡದ ಇತಿಹಾಸದಲ್ಲಿ ಈ ರೀತಿ ಒಂದು ಸೀಸನ್​ ಅರ್ಧಕ್ಕೆ ನಿಂತಿದ್ದು ಇದೇ ಮೊದಲು.  ಕಳೆದ ವರ್ಷ ಮಲಯಾಳಂ ಬಿಗ್​ ಬಾಸ್​ ಶೋವನ್ನು ಕೂಡ ಇದೇ ರೀತಿ ಕೋವಿಡ್​ ಕಾರಣಕ್ಕಾಗಿ ಅರ್ಧಕ್ಕೆ ಸ್ಥಗಿತಗೊಳಿಸಲಾಗಿತ್ತು. ಇದು ಈಗ ಕನ್ನಡದಲ್ಲೂ ಅದು ಮರುಕಳಿಸಿದೆ. ಏಪ್ರಿಲ್​​ನಲ್ಲಿ ಆರಂಭಗೊಂಡಿದ್ದ ಐಪಿಎಲ್​ ಸೀಸನ್​ 14  ಕೂಡ  ಕೊರೊನಾ ಕಾರಣದಿಂದ ರದ್ದಾಗಿತ್ತು. ಈಗ ಬಿಗ್​ ಬಾಸ್​ ಕೂಡ ಅದೇ ಹಾದಿ ಹಿಡಿದಿದೆ.

Karnataka Lockdown: ಕರ್ನಾಟಕ ಲಾಕ್​ಡೌನ್​; ಕೊರೊನಾ ತಡೆಗೆ ಮೇ 10ರಿಂದ 24ರ ವರೆಗೆ ಸಂಪೂರ್ಣ ರಾಜ್ಯ ಸ್ತಬ್ಧ