Bigg Boss Kannada 8: ಕನ್ನಡ ಬಿಗ್​ ಬಾಸ್​ ನೋಡೋದೆಲ್ಲಿ? ಮನೆ ಒಳಗೆ ಹೋಗೋವವರು ಯಾರು? ಇಲ್ಲಿದೆ ಮಾಹಿತಿ

ನಾಳೆ ಸಂಜೆ 6 ಗಂಟೆಗೆ ವೇದಿಕೆ ಮೇಲೆ ಸುದೀಪ್​ ಬರಲಿದ್ದಾರೆ. ಕಂಟೆಸ್ಟೆಂಟ್​ಗಳು ವೇದಿಕೆ ಏರುವುದಕ್ಕೂ ಮೊದಲು ಸಾಕಷ್ಟು ಮನರಂಜನಾ ಕಾರ್ಯಕ್ರಮಗಳು ಇರುವ ಸಾಧ್ಯತೆ ಇದೆ.

  • TV9 Web Team
  • Published On - 17:54 PM, 27 Feb 2021
Bigg Boss Kannada 8: ಕನ್ನಡ ಬಿಗ್​ ಬಾಸ್​ ನೋಡೋದೆಲ್ಲಿ? ಮನೆ ಒಳಗೆ ಹೋಗೋವವರು ಯಾರು? ಇಲ್ಲಿದೆ ಮಾಹಿತಿ
ಸುದೀಪ್​

ಕೊರೊನಾ ವೈರಸ್​ನಿಂದ ಕನ್ನಡ ಬಿಗ್​ ಬಾಸ್​ ಸೀಸನ್​ 8 ತಡವಾಗಿ ಆರಂಭಗೊಳ್ಳುತ್ತಿದೆ. ಈ ಬಾರಿ ಬಿಗ್​ ಬಾಸ್​ ಮನೆ ಒಳಗೆ ಹೋಗುವುದಕ್ಕೂ ಮೊದಲು ಅಭ್ಯರ್ಥಿಗಳು ಕ್ವಾರಂಟೈನ್​ ಆಗುವುದು ಕಡ್ಡಾಯ. ಅಂತೆಯೇ, ಬಿಗ್​ ಬಾಸ್​ ಮನೆಗೆ ತೆರಳುವ 17 ಅಭ್ಯರ್ಥಿಗಳು ಹೋಟೆಲ್​ನಲ್ಲಿ ಕ್ವಾರಂಟೈನ್​ ಆಗಿದ್ದಾರೆ. ಈ ವಿಚಾರವನ್ನು ಖುದ್ದು ಕಲರ್ಸ್​ ಕನ್ನಡದ ಮುಖ್ಯಸ್ಥ ಪರಮೇಶ್ವರ್​ ಗುಂಡ್ಕಲ್​ ಖಚಿತಪಡಿಸಿದ್ದಾರೆ. ಬಿಗ್​ ಬಾಸ್​ 8 ಎಲ್ಲಿ ಪ್ರಸಾರವಾಗುತ್ತದೆ? ಲೈವ್​ ನೋಡೋದು ಹೇಗೆ ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.

ಭಾನುವಾರ ಸಂಜೆ 6 ಗಂಟೆಗೆ ಬಿಗ್​ ಬಾಸ್​ 8ಕ್ಕೆ ಅದ್ದೂರಿಯಾಗಿ ಚಾಲನೆ ಸಿಗಲಿದೆ. ಈ ವರ್ಷವೂ ಕಿಚ್ಚ ಸುದೀಪ್​ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಈ ಬಾರಿ ರಾತ್ರಿ 9:30ರಿಂದ ಬಿಗ್​ ಬಾಸ್​ ಕಾರ್ಯಕ್ರಮ ಪ್ರಸಾರವಾಗಲಿದೆ.

ನಾಳೆ ಸಂಜೆ 6 ಗಂಟೆಗೆ ವೇದಿಕೆ ಮೇಲೆ ಸುದೀಪ್​ ಬರಲಿದ್ದಾರೆ. ಕಂಟೆಸ್ಟೆಂಟ್​ಗಳು ವೇದಿಕೆ ಏರುವುದಕ್ಕೂ ಮೊದಲು ಸಾಕಷ್ಟು ಮನರಂಜನಾ ಕಾರ್ಯಕ್ರಮಗಳು ಇರುವ ಸಾಧ್ಯತೆ ಇದೆ. ರಾತ್ರಿ 11 ಗಂಟೆ ಸುಮಾರಿಗೆ ಕಾರ್ಯಕ್ರಮ ಪೂರ್ಣಗೊಳ್ಳಲಿದೆ.

ಬಿಗ್​ ಬಾಸ್​ ವೀಕ್ಷಣೆ ಮಾಡೋದು ಎಲ್ಲಿ?

ಬಿಗ್​ ಬಾಸ್​ ಎಲ್ಲಿ ವೀಕ್ಷಣೆ ಮಾಡಬೇಕು ಎನ್ನುವುದು ಅನೇಕರ ಪ್ರಶ್ನೆ. ಟಿವಿಯಲ್ಲಿ ನೀವು ಬಿಗ್ ಬಾಸ್​ ನೋಡಬೇಕು ಎಂದಾದರೆ ಕಲರ್ಸ್​ ಕನ್ನಡ ವಾಹಿನಿಯಲ್ಲಿ ನೋಡಬೇಕು. ಆನ್​ಲೈನ್​ನಲ್ಲಿ ಬಿಗ್​ ಬಾಸ್​ ನೋಡಬೇಕು ಎಂದಾದರೆ ನೀವು ವೂಟ್​ ಆ್ಯಪ್​ ಡೌನ್​ಲೋಡ್​ ಮಾಡಿಕೊಳ್ಳಬೇಕು. ಜಿಯೋ ಟಿವಿಯಲ್ಲಿ ಕೂಡ ನೀವು ಬಿಗ್​ ಬಾಸ್​ ವೀಕ್ಷಣೆ ಮಾಡಬಹುದಾಗಿದೆ. ಜಿಯೋ ಟಿವಿಗೆ ತೆರಳಿ ಕಲರ್ಸ್​ ಕನ್ನಡ ಎಂದು ಸರ್ಚ್​ ಮಾಡಿದರೆ ನಿಮಗೆ ಬಿಗ್​ ಬಾಸ್​ ಸಿಗಲಿದೆ.

ಸ್ಪರ್ಧಿಗಳ ಸಂಭಾವ್ಯ ಪಟ್ಟಿ

ಪ್ರತಿಬಾರಿಯೂ ಬಿಗ್​ಬಾಸ್​ ಶುರುವಾಗುತ್ತದೆ ಎಂಬ ಸುದ್ದಿ ಹೊರಬಿದ್ದ ತಕ್ಷಣ ಸ್ಪರ್ಧಿಗಳು ಯಾರು ಎಂಬ ಕುತೂಹಲ ಸಹಜವಾಗಿ ಹುಟ್ಟಿಕೊಳ್ಳುತ್ತದೆ. ಇನ್ನು ಬಿಗ್​ಬಾಸ್​ಗೆ ಹೋಗುವವರು ಯಾರೂ ಆ ಬಗ್ಗೆ ಮಾಹಿತಿಯನ್ನು ಬಹಿರಂಗವಾಗಿ ಹಂಚಿಕೊಳ್ಳುವಂತಿಲ್ಲ. ಹೀಗಾಗಿ ಬಹುತೇಕರು ಹೋಗುವುದು ನಿಕ್ಕಿಯಾಗಿದ್ದರೂ ಕೇಳಿದರೆ ಇಲ್ಲಪ್ಪಾ, ನಾನು ಹೋಗ್ತಿಲ್ಲ ಎಂದು ನಿರಾಕರಿಸುತ್ತಾರೆ. ಹಾಗಾದರೆ, ಈ ಬಾರಿ ಬಿಗ್​ ಬಾಸ್​ ಮನೆಗೆ ತೆರಳಲಿರುವವರು ಯಾರು ಎನ್ನುವ ಸಂಭಾವ್ಯ ಪಟ್ಟಿ ಇಲ್ಲಿದೆ.

-ಆಶಿಕಾ ರಂಗನಾಥ್ ಸಹೋದರಿ ಅನುಶಾ ರಂಗನಾಥ್
-ಕಾಮಿಡಿ ಕಿಲಾಡಿ ನಯನಾ
-ನಿರ್ದೇಶಕ ರವಿ ಶ್ರೀವತ್ಸ
-ಬ್ರಹ್ಮಗಂಟು ಖ್ಯಾತಿಯ ಗುಂಡಮ್ಮ
-ರಘು ವೈನ್ ಸ್ಟೋರ್​ನ ರಘು ಗೌಡ
-ಕಿರಣ್ ಶ್ರೀನಿವಾಸ್
-ಸುನಿಲ್ ರಾವ್
-‘ಲವ್ ಗುರು’ ರಾಜೇಶ್
-ಕಿರುತೆರೆ ನಟಿ ಸಮೀಕ್ಷಾ
-ಅಗ್ನಿಸಾಕ್ಷಿಯ ಸುಕೃತಾ
-ಅಮೃತವರ್ಷಿಣಿಯ ರಜಿನಿ
-ತಬಲಾ ನಾಣಿ
-ತರಂಗ ವಿಶ್ವ
-ಸರಿಗಮಪ.. ಹನುಮಂತ
-ನಿರೂಪಕ ಅಮರ್ ಪ್ರಸಾದ್

ಇದನ್ನೂ ಓದಿ: Bigg Boss Kannada 8: ಈ ಬಾರಿ ಕನ್ನಡ ಬಿಗ್​ಬಾಸ್​ನಲ್ಲಿ​ ಇವರೆಲ್ಲಾ ಕಾಣಿಸಿಕೊಳ್ಳುವುದು ಬಹುತೇಕ ಖಚಿತ!