ಬಿಗ್​ ಬಾಸ್​ನಲ್ಲಿ ನಿರ್ಮಲಾ ಚೆನ್ನಪ್ಪ ವಿಚಿತ್ರ ವರ್ತನೆಗೆ ಕಾರಣ ತಿಳಿಸಿದ ಪತಿ ಸರ್ದಾರ್​ ಸತ್ಯ!

Nirmala Chennappa: ಬಿಗ್​ ಬಾಸ್​ ಮನೆಯಲ್ಲಿ ಇರುವ ಇತರೆ ಎಲ್ಲ ಸ್ಪರ್ಧಿಗಳಿಗಿಂತಲೂ ನಿರ್ಮಲಾ ಚೆನ್ನಪ್ಪ ಡಿಫರೆಂಟ್​ ಆಗಿ ವರ್ತಿಸುತ್ತಿದ್ದಾರೆ. ಅವರು ಒಬ್ಬರೇ ಮಾತನಾಡಿಕೊಳ್ಳುವುದು ಏಕೆ ಎಂಬುದಕ್ಕೆ ಅವರ ಪತಿ ಕಾರಣ ತಿಳಿಸಿದ್ದಾರೆ.

  • TV9 Web Team
  • Published On - 17:33 PM, 8 Mar 2021
ಬಿಗ್​ ಬಾಸ್​ನಲ್ಲಿ ನಿರ್ಮಲಾ ಚೆನ್ನಪ್ಪ ವಿಚಿತ್ರ ವರ್ತನೆಗೆ ಕಾರಣ ತಿಳಿಸಿದ ಪತಿ ಸರ್ದಾರ್​ ಸತ್ಯ!
ನಿರ್ಮಲಾ ಚೆನ್ನಪ್ಪ - ಸರ್ದಾರ್​ ಸತ್ಯ

ಬಿಗ್​ ಬಾಸ್​ ಕನ್ನಡ ಸೀಸನ್​ 8ರ ಮೊದಲ ವಾರದಲ್ಲಿ ಅತಿ ಹೆಚ್ಚು ಚರ್ಚೆಗೆ ಒಳಗಾದ ಸ್ಪರ್ಧಿ ಎಂದರೆ ಅದು ನಿರ್ಮಲಾ ಚೆನ್ನಪ್ಪ. ಎಲ್ಲ ಸದಸ್ಯರು ಒಂದು ಹಾದಿಯಲ್ಲಿ ಸಾಗಿದರೆ, ನಿರ್ಮಲಾ ಪ್ರತ್ಯೇಕ ಹಾದಿಯಲ್ಲಿ ಹೋಗುತ್ತಿದ್ದಾರೆ. ಅವರ ವರ್ತನೆ ಅನೇಕರಿಗೆ ಅಚ್ಚರಿ ಮೂಡಿಸಿದೆ. ಅದರ ಬಗ್ಗೆ ಅವರ ಪತಿ ಸರ್ದಾರ್ ಸತ್ಯ ಬಾಯಿ ಬಿಟ್ಟಿದ್ದಾರೆ. ದೊಡ್ಮನೆಯೊಳಗೆ ನಿರ್ಮಲಾ ಬಗ್ಗೆ ಇರುವ ಮೊದಲ ಮತ್ತು ಮುಖ್ಯವಾದ ಕಂಪ್ಲೆಂಟ್​ ಎಂದರೆ, ಅವರು ಕ್ಯಾಮರಾ ಎದುರು ಒಬ್ಬೊಬ್ಬರೇ ಮಾತನಾಡಿಕೊಳ್ಳುತ್ತಾರೆ ಎಂಬುದು. ಹಗಲು-ರಾತ್ರಿ ಎನ್ನದೇ ಅವರು ಏನೇನೋ ಮಾತನಾಡುತ್ತ ಇರುತ್ತಾರೆ. ಕ್ಯಾಮರಾ ಮುಂದೆ ನಿಂತುಕೊಂಡು ಒಬ್ಬೊಬ್ಬರೇ ಈ ರೀತಿ ವರ್ತಿಸುವುದಕ್ಕೆ ಒಂದು ಮುಖ್ಯ ಕಾರಣ ಇದೆ. ಆ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಅವರ ಪತಿ  ಕೆಲವು ವಿಷಯ ಹಂಚಿಕೊಂಡಿದ್ದಾರೆ.

‘ನಿರ್ಮಲಾ ಅವರಿಗೆ ಕ್ಯಾಮರಾ ಎಂದರೆ ದೇವರು. ಅದರ ಜೊತೆ ಅವರು ಹೆಚ್ಚಿನ ಸಮಯ ಕಳೆಯುತ್ತಾರೆ. ಯಾಕೆಂದರೆ ಅವರು ಕ್ರಿಯೇಟಿವ್​ ಡೈರೆಕ್ಟರ್​. ಕ್ಯಾಮರಾ ಅವರಿಗೆ ದೇವರ ಸಮಾನ. ತಾಳ್ಮೆ ಎಲ್ಲ ವಿಚಾರವನ್ನು ಬೆಳಕಿಗೆ ತರುತ್ತದೆ’ ಎಂದು ಸರ್ದಾರ್​ ಸತ್ಯ ಪೋಸ್ಟ್​ ಮಾಡಿದ್ದಾರೆ. ಅಲ್ಲದೆ, ತಮ್ಮ ಪತ್ನಿಗೆ ವೋಟ್​ ಮಾಡುವ ಮೂಲಕ ಬೆಂಬಲ ನೀಡುವಂತೆ ಬಿಗ್​ ಬಾಸ್​ ವೀಕ್ಷಕರಲ್ಲಿ ಅವರು ಮನವಿ ಮಾಡಿಕೊಂಡಿದ್ದಾರೆ.

ಮೊದಲ ವಾರ ನಿರ್ಮಲಾ ಚೆನ್ನಪ್ಪ ಅವರು ಎಲಿಮಿನೇಷನ್​ ಭೀತಿ ಅನುಭವಿಸಿದ್ದರು. ಯಾವ ಆಯಾಮದಿಂದ ನೋಡಿದರೂ ಮನೆಯ ಇತರೆ ಸ್ಪರ್ಧಿಗಳಿಗೆ ಅವರ ವರ್ತನೆ ಹಿಡಿಸುತ್ತಿರಲಿಲ್ಲ. ಅವರ ವಿಚಿತ್ರ ವರ್ತನೆಯ ಕಾರಣದಿಂದ ಎಲ್ಲರೂ ಅವರಿಗೆ ಡಿಸ್ಲೈಕ್​ ಬ್ಯಾಡ್ಜ್​ ನೀಡಿದ್ದರು. ಎಲ್ಲಕ್ಕಿಂತ ಮುಖ್ಯವಾಗಿ ಮಧ್ಯರಾತ್ರಿ ಅವರು ಮೇಕಪ್ ಮಾಡಿಕೊಂಡು, ಸೀರೆ ಧರಿಸಿ ಒಬ್ಬರೇ ಮಾತನಾಡುತ್ತ ಕುಳಿತಿದ್ದು ಆತಂಕ ಮೂಡಿಸಿತ್ತು.

ಮೊದಲ ವಾರದಲ್ಲಿ ಧನುಶ್ರೀ ಎಲಿಮಿನೇಟ್​ ಆಗಿದ್ದು, ಸದ್ಯಕ್ಕಂತೂ ನಿರ್ಮಲಾ ಬಚಾವ್​ ಆಗಿದ್ದಾರೆ. ನಿರ್ಮಲಾ ಅವರ ವರ್ತನೆ ಬಗ್ಗೆ ವಾರದ ಪಂಚಾಯಿತಿಯಲ್ಲಿ ಸುದೀಪ್​ ಕೂಡ ಚರ್ಚೆ ಮಾಡಿದರು. ಆಗಲೂ ಸಹ ‘ನಾನು ಕ್ಯಾಮರಾ ಜೊತೆ ಮಾತನಾಡಿಕೊಂಡು ಇರಬಹುದಾ ಅಥವಾ ಇರಬಾರದಾ ಅಣ್ಣಾ..’ ಎಂದು ಸುದೀಪ್​ ಬಳಿ ನಿರ್ಮಲಾ ಸಲಹೆ ಕೇಳಿದರು. ‘ಮನೆಯಲ್ಲಿ ಉಳಿದುಕೊಳ್ಳಲು ಏನು ಬೇಕೋ ಅದೆಲ್ಲವನ್ನೂ ಮಾಡಿ. ನಿಮಗೆ ಇಷ್ಟಬಂದಂತೆ ಇರಬಹುದು. ಅತಿಯಾದರೆ ಅಮೃತವೂ ವಿಷ. ಇದನ್ನು ಹೇಳಬೇಕು ಅಂತ ಅನಿಸಿತು. ಅದಕ್ಕೆ ಹೇಳಿದ್ದೇನೆ’ ಎಂದು ಸುದೀಪ್​ ಸಲಹೆ ನೀಡಿದರು.

ಇದನ್ನೂ ಓದಿ: Bigg Boss Kannada: ಬಿಗ್​ ಬಾಸ್​ನಿಂದ ಧನುಶ್ರೀ ಔಟ್​! ಎಲಿಮಿನೇಟ್​ ಆಗಿದ್ದಕ್ಕೆ ಇಲ್ಲಿದೆ ಬಲವಾದ ಕಾರಣ

Bigg Boss Kannada : ಬಿಗ್​ ಬಾಸ್​ ಮನೆಯಲ್ಲಿ ದರ್ಶನ್​ ಹಾಡು ಯಾಕೆ ಪ್ಲೇ ಆಗಲ್ಲ? ಸುದೀಪ್​ಗೆ ಪ್ರಶ್ನೆ ಎಸೆದ ‘ಡಿ ಬಾಸ್’​ ಫ್ಯಾನ್ಸ್​!