BBK 8 Wild Card Entry: ಬಿಗ್​ಬಾಸ್​ಗೆ ಮತ್ತೊಂದು ವೈಲ್ಡ್​ ಕಾರ್ಡ್​ ಎಂಟ್ರಿ: ಆದ್ರೆ ಈ ನಟಿ ಮನೆಗೆ ಕಾಲಿಡುತ್ತಿದ್ದಂತೆ ಮಂಜು ನಾಪತ್ತೆ!

Bigg Boss Kannada, Wild Card Entry: ಮೂಲಗಳ ಪ್ರಕಾರ ಈ ನೂತನ ಸ್ಪರ್ಧಿ ಪ್ರಿಯಾಂಕಾ ತಿಮ್ಮೇಶ್ ಎಂದು ಗೊತ್ತಾಗಿದೆ. ಭೀಮಸೇನ ನಳಮಹಾರಾಜ ಚಿತ್ರದ ನಾಯಕಿ ಇದೀಗ ಬಿಗ್​ಬಾಸ್​ ಮನೆಗೆ ಕಾಲಿಟ್ಟಿರುವುದು ಭಾರೀ ಕುತೂಹಲ ಮೂಡಿಸಿದೆ.

  • TV9 Web Team
  • Published On - 11:38 AM, 8 Apr 2021
BBK 8 Wild Card Entry: ಬಿಗ್​ಬಾಸ್​ಗೆ ಮತ್ತೊಂದು ವೈಲ್ಡ್​ ಕಾರ್ಡ್​ ಎಂಟ್ರಿ: ಆದ್ರೆ ಈ ನಟಿ ಮನೆಗೆ ಕಾಲಿಡುತ್ತಿದ್ದಂತೆ ಮಂಜು ನಾಪತ್ತೆ!
ಬಿಗ್​ಬಾಸ್​ ಮನೆಗೆ ಪ್ರಿಯಾಂಕಾ ತಿಮ್ಮೇಶ್​

ಕನ್ನಡದ ಬಿಗ್​ಬಾಸ್ 8ನೇ ಆವೃತ್ತಿ ಕುತೂಹಲಕಾರಿಯಾಗಿ ಮೂಡಿಬರುತ್ತಿದೆ. ದೊಡ್ಮನೆ ದಿನಕ್ಕೊಂದು ರೀತಿಯ ಬೆಳವಣಿಗೆ ಸಾಕ್ಷಿಯಾಗುತ್ತಿದ್ದು, ಈ ಬಾರಿಯ ಸ್ಪರ್ಧಿಗಳು ವೀಕ್ಷಕರಿಗೆ ಭರಪೂರ ಮನರಂಜನೆ ಒದಗಿಸುತ್ತಿದ್ದಾರೆ. ಕಳೆದ ವಾರವಷ್ಟೇ ಬಿಗ್​ಬಾಸ್​ ಮನೆಗೆ ಚಕ್ರವರ್ತಿ ಚಂದ್ರಚೂಡ್ ವೈಲ್ಡ್​ಕಾರ್ಡ್​ ಮೂಲಕ ಹೆಜ್ಜೆ ಇಟ್ಟಿದ್ದು, ಮನೆಯ ವಾತಾವರಣ ಕೊಂಚ ಬದಲಾಗಲು ಕಾರಣರಾಗಿದ್ದರು. ಹೀಗಾಗಿಯೇ ಕೆಲ ಸ್ಪರ್ಧಿಗಳು ಹೊಸಬರ ಆಗಮನದ ಬಗ್ಗೆ ಅಸಮಾಧಾನವನ್ನೂ ಹೊರಹಾಕಿದ್ದರು. ಆದರೆ ವೈಲ್ಡ್​ಕಾರ್ಡ್​ ಎಂಟ್ರಿ ಬಗ್ಗೆ ಮಾತನಾಡಿದ್ದ ಕಿಚ್ಚ ಸುದೀಪ್​, ಇದಿನ್ನೂ ಆರಂಭವಷ್ಟೇ ಎಂದು ಹೇಳುವ ಮೂಲಕ ಇನ್ನಷ್ಟು ಮಂದಿ ಮನೆಗೆ ಬರಲಿದ್ದಾರೆ ಸುಳಿವು ನೀಡಿದ್ದರು. ಇದೀಗ ನಿಜವಾಗಿದ್ದು, ದೊಡ್ಮನೆಗೆ ಹೊಸ ಸ್ಪರ್ಧಿಯೊಬ್ಬರು ಕಾಲಿಟ್ಟಿದ್ದಾರೆ.

ಬಿಗ್​ಬಾಸ್​ ಹೊರಬಿಟ್ಟಿರುವ ಪ್ರೋಮೊದಲ್ಲಿ ಹೊಸ ಸ್ಪರ್ಧಿಯೊಬ್ಬರ ಆಗಮನ ಆಗಿರುವುದನ್ನು ತೋರಿಸಲಾಗಿದೆ. ಮೂಲಗಳ ಪ್ರಕಾರ ಈ ನೂತನ ಸ್ಪರ್ಧಿ ಪ್ರಿಯಾಂಕಾ ತಿಮ್ಮೇಶ್ ಎಂದು ಗೊತ್ತಾಗಿದೆ. ಭೀಮಸೇನ ನಳಮಹಾರಾಜ ಚಿತ್ರದ ನಾಯಕಿ ಇದೀಗ ಬಿಗ್​ಬಾಸ್​ ಮನೆಗೆ ಕಾಲಿಟ್ಟಿರುವುದು ಭಾರೀ ಕುತೂಹಲ ಮೂಡಿಸಿದೆ. 2015ರಲ್ಲಿ ಗಣಪ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಪ್ರಿಯಾಂಕಾ ತಿಮ್ಮೇಶ್ ಕೆಲ ಅನ್ಯ ಭಾಷೆ ಸಿನಿಮಾಗಳಲ್ಲೂ ನಟಿಸಿದ್ದಾರೆ.

ಪ್ರಿಯಾಂಕಾ ತಿಮ್ಮೇಶ್ ಬಿಗ್​ಬಾಸ್ ಮೂಲಕ ಹೇಗೆ ಮನರಂಜಿಸಲಿದ್ದಾರೆ ಎಂಬ ಕುತೂಹಲ ಎಲ್ಲರಿಗೂ ಇದೆ. ಎಲ್ಲಕ್ಕಿಂತ ಮಿಗಿಲಾಗಿ ಮನೆಗೆ ಯಾರಾದರೂ ಹೊಸ ಹುಡುಗಿ ಬರಲಿ ಎಂದು ಕಾಯುತ್ತಿದ್ದ ಮಂಜುಗೆ ಇದು ಖುಷಿ ಕೊಟ್ಟಿರುತ್ತದೆ ಎಂದು ಕೆಲವರು ಕಾಲೆಳೆದಿದ್ದಾರೆ. ಆದರೆ, ವಾಹಿನಿ ಬಿಟ್ಟಿರುವ ಪ್ರೊಮೊದಲ್ಲಿ ಮಾತ್ರ ಮಂಜು ಕಾಣೆಯಾಗಿದ್ದಾರೆ. ಪ್ರಿಯಾಂಕಾ ತಿಮ್ಮೇಶ್ ಮನೆಗೆ ಬಂದ ಕೆಲ ಕ್ಷಣದಲ್ಲೇ ಮಂಜುರನ್ನು ಕನ್ಫೆಶನ್​ ರೂಮ್​ಗೆ ಕರೆದ ಬಿಗ್​ಬಾಸ್ ನಂತರ ಅವರನ್ನು ಅಲ್ಲಿಂದ ಹೊರಗೆ ಕಳುಹಿಸಿಲ್ಲ. ಮನೆಯವರು ಕೂಡಾ ಮಂಜು ಎಲ್ಲಿ ಹೋದ್ರು ಎಂದು ಅಚ್ಚರಿಯಿಂದ ಹುಡುಕಿದ್ದಾರೆ. ಒಟ್ಟಿನಲ್ಲಿ ಹೊಸ ಸ್ಪರ್ಧಿಯೊಬ್ಬರ ಆಗಮನದ ಮೂಲಕ ಬಿಗ್​ಬಾಸ್​ನಲ್ಲಿ ಮತ್ತೊಂದಷ್ಟು ಬದಲಾವಣೆ ಕಾಣಬಹುದಾಗಿದ್ದು ವೀಕ್ಷಕರ ಕುತೂಹಲ ಹೆಚ್ಚಾಗಿದೆ.

ಇದನ್ನೂ ಓದಿ:
ಬಿಗ್​ ಬಾಸ್​ ಮನೆಗೆ ಮತ್ತೊಂದಷ್ಟು ವೈಲ್ಡ್​ ಕಾರ್ಡ್​ ಎಂಟ್ರಿ; ಸುದೀಪ್​ ಕೊಟ್ರು ಸೂಚನೆ

ದಿವ್ಯಾ ಉರುಡುಗ-ಅರವಿಂದ್​ ಪ್ರೀತಿಯ ಉತ್ಕಟತೆ ನೋಡಿ ಮನೆಯವರೇ ಕಂಗಾಲು; ಅಂಥದ್ದೇನಾಯ್ತು?