ಚಕ್ರವರ್ತಿ ತೆಗೆದುಕೊಂಡ ಆ ಒಂದು ನಿರ್ಧಾರ ಅವರ ಬಿಗ್​ ಬಾಸ್​ ಜರ್ನಿಯನ್ನೇ ಬದಲಾಯಿಸಿತು

ಪ್ರಶಾಂತ್ ಸಂಬರಗಿಗೆ ಮೋಸವಾಗಿದೆ. ಇದಕ್ಕಾಗಿ ತಾವು ಕ್ಯಾಪ್ಟನ್ಸಿ ಟಾಸ್ಕ್ ಆಡುವುದಿಲ್ಲ ಎನ್ನುವ ನಿರ್ಧಾರಕ್ಕೆ ಬಂದಿದ್ದರು ಚಕ್ರವರ್ತಿ.

  • TV9 Web Team
  • Published On - 15:26 PM, 2 May 2021
ಚಕ್ರವರ್ತಿ ತೆಗೆದುಕೊಂಡ ಆ ಒಂದು ನಿರ್ಧಾರ ಅವರ ಬಿಗ್​ ಬಾಸ್​ ಜರ್ನಿಯನ್ನೇ ಬದಲಾಯಿಸಿತು
ಚಕ್ರವರ್ತಿ ಹಾಗೂ ಪ್ರಶಾಂ್​ ಸಂಬರಗಿ

ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳು ತೆಗೆದುಕೊಳ್ಳುವ ಒಂದು ನಿರ್ಧಾರ ಅವರ ಬದುಕನ್ನು ಮಾತ್ರ ಅಲ್ಲ ಉಳಿದು ಸ್ಪರ್ಧಿಗಳ ಬದುಕನ್ನೂ ಬದಲಾಯಿಸಿ ಬಿಡುತ್ತದೆ. ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟ ವೈಜಯಂತಿ  ಅಡಿಗ ಅವರು ಶಮಂತ್ ಬ್ರೋ ಗೌಡ ಅವರನ್ನು ಉಳಿಸಿ ತಾವು ಮನೆಯಿಂದ ಹೊರ ಹೋಗಿದ್ದರು. ಈ ಮೂಲಕ ಶಮಂತ್ ಬದುಕು ಬದಲಾಗಿತ್ತು. ಈಗ ಚಕ್ರವರ್ತಿ ತೆಗೆದುಕೊಂಡು ಒಂದು ನಿರ್ಧಾರದಿಂದ ಬಿಗ್ ಬಾಸ್ ಮನೆಯಲ್ಲಿ ಅವರ ಅದೃಷ್ಟವೇ ಬದಲಾಗಿದೆ.

ಬಿಗ್ ಬಾಸ್ ಮನೆಯಲ್ಲಿ ಈ ವಾರ ಕ್ಯಾಪ್ಟನ್ಸಿ ಟಾಸ್ಕ್​ಗೆ ಮಂಜು ಪಾವಗಡ, ಅರವಿಂದ್ ಕೆ.ಪಿ. ಹಾಗೂ ಚಕ್ರವರ್ತಿ ಚಂದ್ರಚೂಡ್ ಆಯ್ಕೆ ಆಗಿದ್ದರು. ಆದರೆ, ಈ ಆಟದಲ್ಲಿ ಪ್ರಶಾಂತ್ ಸಂಬರಗಿಗೆ ಮೋಸವಾಗಿದೆ. ಇದಕ್ಕಾಗಿ ತಾವು ಕ್ಯಾಪ್ಟನ್ಸಿ ಟಾಸ್ಕ್ ಆಡುವುದಿಲ್ಲ ಎನ್ನುವ ನಿರ್ಧಾರಕ್ಕೆ ಬಂದಿದ್ದರು ಚಕ್ರವರ್ತಿ. ಕೊನೆಯ ಕ್ಷಣದವರೆಗೂ ಆಟದಿಂದ ಹಿಂದೆ ಸರಿಯುವ ಆಲೋಚನೆಯಲ್ಲಿದ್ದ ಚಕ್ರವರ್ತಿ ಕೊನೆಯ ಕ್ಷಣದಲ್ಲಿ ಮನಸ್ಸು ಬದಲಾಯಿಸಿ ಅದೃಷ್ಟ ಪರೀಕ್ಷೆ ಮುಂದಾಗಿದ್ದರು.

ಈ ವಾರ ಟಾಸ್ಕ್ ಭಿನ್ನವಾಗಿತ್ತು. ವೋಟಿಂಗ್ ರೀತಿಯಲ್ಲಿ ಕ್ಯಾಪ್ಟನ್ ಆಯ್ಕೆ ಮಾಡಬೇಕಿತ್ತು. ಮೂರು ಕ್ಯಾಪ್ಟನ್ಸಿ ಅಭ್ಯರ್ಥಿಗೆ ತಲಾ ಮೂರು ಮೂರು ಮತಗಳು ಬಿದ್ದು ಟೈ ಆಗಿತ್ತು. ಕೊನೆಗೆ ಡಿಸ್ಕಶನ್ ಮೂಲಕ ಕ್ಯಾಪ್ಟನ್ಸಿ ಅಭ್ಯರ್ಥಿ ಆಯ್ಕೆ ಮಾಡುವ ನಿರ್ಧಾರ ತೆಗೆದುಕೊಳ್ಳುವಂತೆ ಬಿಗ್ ಬಾಸ್ ಆದೇಶಿಸಿದರು.

ಮಂಜು, ಅರವಿಂದ್ ಹಾಗೂ ಚಕ್ರವರ್ತಿ ಚರ್ಚೆ ನಡೆಸಿ ಒಂದು ನಿರ್ಧಾರಕ್ಕೆ ಬಂದರು. ಚಕ್ರವರ್ತಿ ಅವರನ್ನು ಕ್ಯಾಪ್ಟನ್ ಮಾಡಲು ನಿರ್ಧರಿಸಲಾಯಿತು. ಈ ಮೂಲಕ 10ನೇ ವಾರಕ್ಕೆ ಅವರು ಕ್ಯಾಪ್ಟನ್ ಆದರು. ಈ ವಾರದ ಎಲಿಮಿನೇಷ್​ನಿಂದ ಅವರು ಬಚಾವ್ ಆದಲ್ಲಿ ಮುಂದಿನ ವಾರದ ನಾಮಿನೇಷನ್​ಗೆ ಅವರ ಹೆಸರು ತೆಗೆದುಕೊಳ್ಳುವಂತಿಲ್ಲ.

ಈ ಮೂಲಕ ಅವರು ಎರಡು ವಾರ ಮನೆಯಲ್ಲಿ ಉಳಿದುಕೊಳ್ಳಬಹುದು. ಈ ಮೂಲಕ ತಮ್ಮ ಸಾಮರ್ಥ್ಯವನ್ನು ಅವರು ಹೊರ ಜಗತ್ತಿಗೆ ತೋರಿಸೋಕೆ ಅವಕಾಶ ಸಿಗಲಿದೆ. ಹೀಗಾಗಿ, ಅವರು ಕೊನೇ ಕ್ಷಣದಲ್ಲಿ ಕ್ಯಾಪ್ಟನ್ಸಿ ಟಾಸ್ಕ್​ನಲ್ಲಿ ಆಡೋಕೆ ತೆಗೆದುಕೊಂಡ ನಿರ್ಧಾರ ಅವರ ಬಿಗ್ ಬಾಸ್ ಜರ್ನಿಯಲ್ಲಿ ಸಾಕಷ್ಟು ಬದಲಾವಣೆ ತರುವ ನಿರೀಕ್ಷೆ ಇದೆ.

ಇದನ್ನೂ ಓದಿ: ಇದಿನ್ನೂ ಕೆಟ್ಟದಾಗಿ ಕಾಣಿಸುತ್ತಿದೆ; ಪ್ರಶಾಂತ್​ ಸಂಬರಗಿ ಗುಣಗಳು ಚಕ್ರವರ್ತಿಗೆ ಅಸಹ್ಯ ಮೂಡಿಸುತ್ತಿವೆ