ದಿವ್ಯಾ ಸುರೇಶ್​ಗೆ ಮಗಳು ಎಂದಿದ್ದು ಫೇಕ್​! ಚಕ್ರವರ್ತಿ ಚಂದ್ರಚೂಡ್​ ಅಸಲಿ ಮುಖ ಬಯಲು

ಬಿಗ್​ ಬಾಸ್​ ಮನೆಯಲ್ಲಿ ಪ್ರಶಾಂತ್​-ಚಕ್ರವರ್ತಿ ಕೂತು ಮಾತನಾಡುತ್ತಿದ್ದರು. ಆಗ, ಚಕ್ರವರ್ತಿ ತಮ್ಮ ಅಸಲಿ ಮುಖವನ್ನು ಬಹಿರಂಗ ಮಾಡಿದ್ದಾರೆ.

  • TV9 Web Team
  • Published On - 7:17 AM, 18 Apr 2021
ದಿವ್ಯಾ ಸುರೇಶ್​ಗೆ ಮಗಳು ಎಂದಿದ್ದು ಫೇಕ್​! ಚಕ್ರವರ್ತಿ ಚಂದ್ರಚೂಡ್​ ಅಸಲಿ ಮುಖ ಬಯಲು
(ಬಿಗ್​ ಬಾಸ್​ ಮನೆಯಲ್ಲಿ ದಿವ್ಯಾ ಸುರೇಶ್​ - ಚಕ್ರವರ್ತಿ ಚಂದ್ರಚೂಡ್​)

ದಿವ್ಯಾ ಸುರೇಶ್ ನನ್ನ ಮಗಳಿದ್ದಂತೆ. ನಮ್ಮಿಬ್ಬರದು ಒಂದೇ ರೀತಿಯ ಹಾದಿ ಎಂದು ಚಕ್ರವರ್ತಿ ಚಂದ್ರಚೂಡ್​ ಇತ್ತೀಚೆಗೆ ಬಿಕ್ಕಿ ಬಿಕ್ಕಿ ಅತ್ತಿದ್ದರು. ಇದನ್ನು ನೋಡಿ ಅನೇಕರ ಕಣ್ಣಲ್ಲಿ ನೀರು ಬಂದಿತ್ತು. ಇದು ಗೇಮ್ನ​ ಒಂದು ಭಾಗ​ ಅಷ್ಟೇ! ಅವರು ಮಗಳು ಎಂದು ಹೇಳಿದ್ದು ಸಂಪೂರ್ಣ ಫೇಕ್​ ಎನ್ನುವ ವಿಚಾರ ಬಿಗ್​ ಬಾಸ್​ ಮನೆಯಲ್ಲಿ ಬಟಾ ಬಯಲಾಗಿದೆ.

ಬಿಗ್​ ಬಾಸ್​ ಮನೆಯಲ್ಲಿ ಟಾಸ್ಕ್​ ಒಂದನ್ನು ನೀಡಲಾಗಿತ್ತು. ಈ ಟಾಸ್ಕ್​ನಲ್ಲಿ ಯಾರ ಮೇಲೆ ಯಾವ ಫೀಲಿಂಗ್​ ಇದೆ ಎಂಬುದನ್ನು ಹೇಳಬೇಕಿತ್ತು. ಆಗ ದಿವ್ಯಾ ಸುರೇಶ್​ ನನ್ನ ಮಗಳು ಎಂದು ಚಕ್ರವರ್ತಿ ಹೇಳಿಕೊಂಡಿದ್ದರು. ದಿವ್ಯಾ ಮತ್ತು ನನ್ನ ಮಧ್ಯೆ ಹೋಲಿಕೆ ಇದೆ. ಇಬ್ಬರೂ ಒಂದೇ ರೀತಿಯ ಹಾದಿಯಲ್ಲಿ ಸಾಗಿ ಬಂದಿದ್ದೇವೆ. ಅವಳು ಮೇಲ್ನೋಟಕ್ಕೆ ರಫ್​ ಆಗಿ ಕಾಣುತ್ತಾಳೆ.  ಆದರೆ, ಮನಸ್ಸು ತುಂಬಾ ಚೈಲ್ಡ್​. ಮಗುವಿನ ಥರ ಹಠ ಮಾಡ್ತಾಳೆ. ಪ್ರೀತಿಸುವವರಿಗೆ ಈ ಲಕ್ಷಣ ಇರುತ್ತದೆ. ದಿವ್ಯಾ ಸುರೇಶ್​ನ ನೋಡಿದಾಗ ನನಗೆ ನನ್ನ ಮಗಳು ನೆನಪಾಗ್ತಾಳೆ ಎಂದು ಚಂದ್ರಚೂಡ್​ ಸಿಕ್ಕಾಪಟ್ಟೆ ಅತ್ತುಬಿಟ್ಟಿದ್ದರು. ಆದರೆ, ಇದು ಫೇಕ್​ ಎಂಬುದು ಬಿಗ್​ ಬಾಸ್​ ಮನೆಯಲ್ಲಿ ಪ್ರೂವ್​ ಆಗಿದೆ.

ಬಿಗ್​ ಬಾಸ್​ ಮನೆಯಲ್ಲಿ ಪ್ರಶಾಂತ್​ ಸಂಬರಗಿ ಮತ್ತು ಚಕ್ರವರ್ತಿ ಕೂತು ಮಾತನಾಡುತ್ತಿದ್ದರು. ಆಗ ಚಕ್ರವರ್ತಿ, ದಿವ್ಯಾ ಸುರೇಶ್​ ಬಗ್ಗೆ ಒಂದು ಸರಿಯಾದ ನಿಲುವು​ ತೆಗೆದುಕೋ. ಒಮ್ಮೆ ಬಯ್ಯುತ್ತೀಯಾ, ಮತ್ತೊಮ್ಮೆ ಹೋಗಿ ಪ್ಯಾಂಪರ್​ ಮಾಡ್ತೀಯಾ ಎಂದರು. ಇದಕ್ಕೆ ಉತ್ತರಿಸಿದ ಪ್ರಶಾಂತ್​, ಅವಳು ಟೊಳ್ಳು. ನಾನು ಸ್ಟ್ರಾಂಗ್​ ಅಂತಾಳೆ. ಆದರೆ ಅವಳು ಸ್ಟ್ರಾಂಗ್​ ಅಲ್ಲ ಎಂದರು. ಇದನ್ನು ಚಕ್ರವರ್ತಿ ಕೂಡ ಒಪ್ಪಿಕೊಂಡರು.

ಕಳೆದ ಬಾರಿ ದಿವ್ಯಾ ಬಗ್ಗೆ ಯಾರಾದರೂ ಏನಾದರೂ ಹೇಳಿದರೆ ನಾನು ಸುಮ್ಮನಿರುವುದಿಲ್ಲ ಎಂದು ಚಕ್ರವರ್ತಿ ಹೇಳಿದ್ದರು. ಅಂದು ಮಗಳು ಎಂದು ಕಣ್ಣೀರು ಹಾಕಿದ್ದ ಅವರು ಈಗ ತಮ್ಮ ಹಳೆಯ ಚಾಳಿಯನ್ನು ಮುಂದುವರಿಸಿದ್ದಾರೆ.

ಇದನ್ನೂ ಓದಿ: Kichcha Sudeep: ಬಿಗ್​ ಬಾಸ್​ ನಿರೂಪಣೆ ಬಗ್ಗೆ ಹರಡಿದ ಅಂತೆಕಂತೆಗೆ ಸುದೀಪ್​ ಸ್ಪಷ್ಟನೆ

Kannada Bigg Boss 8 Elimination: ಈ ವಾರ ಬಿಗ್​ ಬಾಸ್​ ಮನೆಯಿಂದ ಹೊರ ಹೋಗುವವರು ಇವರೇ?