ಮಂಜುನ ಬಾಲ ದಿವ್ಯಾ ಎಂದರೆ ನಾನೇ ಹೊಡೀತಿನಿ; ಸಂಬರಗಿಗೆ ಚಂದ್ರಚೂಡ್​ ಕೊಟ್ರು ಖಡಕ್​ ಎಚ್ಚರಿಕೆ

ಬಿಗ್​ ಬಾಸ್​ ಮನೆಯಲ್ಲಿ ‘ಒಲವಿನ ಉಡುಗೊರೆ ಕೊಡಲೇನು’ ಎಂಬ ಟಾಸ್ಕ್​ ನೀಡಲಾಗಿತ್ತು. ಈ ಟಾಸ್ಕ್​​ನಲ್ಲಿ ತಮ್ಮಿಷ್ಟದವರ ಬಗ್ಗೆ ಹೇಳಿಕೊಳ್ಳಬೇಕು.

  • TV9 Web Team
  • Published On - 7:12 AM, 13 Apr 2021
ಮಂಜುನ ಬಾಲ ದಿವ್ಯಾ ಎಂದರೆ ನಾನೇ ಹೊಡೀತಿನಿ; ಸಂಬರಗಿಗೆ ಚಂದ್ರಚೂಡ್​ ಕೊಟ್ರು ಖಡಕ್​ ಎಚ್ಚರಿಕೆ
ಪ್ರಶಾಂತ್​-ಚಕ್ರವರ್ತಿ

ಬಿಗ್​ ಬಾಸ್ ಮನೆಯಲ್ಲಿ ಮಂಜು ಪಾವಗಡ ಹಾಗೂ ದಿವ್ಯಾ ಸುರೇಶ್​ ತುಂಬಾನೇ ಕ್ಲೋಸ್​ ಆಗಿರುತ್ತಾರೆ. ಇದನ್ನು ನೋಡಿ ಪ್ರಶಾಂತ್​ ಸಂಬರಗಿ ತುಂಬಾನೇ ಉರಿದುಕೊಂಡಿದ್ದರು. ಅಷ್ಟೇ ಅಲ್ಲ, ಮಂಜು ಬಾಲ ದಿವ್ಯಾ ಎಂದು ಹೇಳುತ್ತಲೇ ಬಂದಿದ್ದರು. ಇದಕ್ಕೆ ದಿವ್ಯಾ ಸಾಕಷ್ಟು ಬಾರಿ ಬೇಸರ ಹೊರ ಹಾಕಿದ್ದರು. ಅಚ್ಚರಿ ಎಂದರೆ, ಈ ವಿಚಾರದಲ್ಲಿ ಪ್ರಶಾಂತ್​ ಸಂಬರಗಿಗೆ ಚಕ್ರವರ್ತಿ ಚಂದ್ರಚೂಡ್​ ಖಡಕ್​ ಎಚ್ಚರಿಕೆ ನೀಡಿದ್ದಾರೆ.

ಬಿಗ್​ ಬಾಸ್​ ಮನೆಯಲ್ಲಿ ‘ಒಲವಿನ ಉಡುಗೊರೆ ಕೊಡಲೇನು’ ಟಾಸ್ಕ್​ ನೀಡಲಾಗಿತ್ತು. ಈ ಟಾಸ್ಕ್​​ನಲ್ಲಿ ಬಿಗ್​ ಬಾಸ್​ ಮನೆಯಲ್ಲಿ ಹತ್ತಿರವಾದವರ ಬಗ್ಗೆ ಹೇಳಿಕೊಳ್ಳಬೇಕು. ಆಗ, ವೇದಿಕೆ ಮೇಲೆ ಬಂದು ಮಾತನಾಡಿದ ಮಂಜು, ನಂಗೆ ಫ್ರೆಂಡ್ಸ್​ ಅಂದ್ರೆ ತುಂಬಾ ಗೌರವ, ಪ್ರೀತಿ. ನನಗೆ ಇಬ್ಬರು ಮೂವರು ಬೆಸ್ಟ್​ ಫ್ರೆಂಡ್​ ಇದಾರೆ. ಆ ಜಾಗಕ್ಕೆ ದಿವ್ಯಾ ಆ್ಯಡ್​ ಆಗಿದ್ದಾಳೆ. ನಾನು ಅವಳ ಜತೆ ಮಕ್ಕಳ ತರ ಆಟ ಆಡ್ತೀನಿ. ನನಗೆ ತಮ್ಮ ಇದಾನೆ. ಆದರೆ, ಅಷ್ಟು ಕನೆಕ್ಟ್​ ಆಗಿಲ್ಲ. ಜಗಳವೇ ಆಗ್ಲಿ ಅಥವಾ ಏನೇ ಆಗಲಿ ನಾನು ಫ್ರೆಂಡ್ಸ್​ ಅನ್ನು ಬಿಟ್ಟುಕೊಡಲ್ಲ. ಈ ಸ್ಥಾನಕ್ಕೆ ಬಂದಿದ್ದಕ್ಕೆ ಕಾರಣ ಫ್ರೆಂಡ್ಸ್ ಎಂದು ಮಾತು ಆರಂಭಿಸಿದರು.

ದಿವ್ಯಾ ಸುರೇಶ್ ಮಂಜುನ ಬಾಲ ಎಂದಾಗ ತುಂಬಾ ಬೇಜಾರ್​ ಆಗ್ತಾ ಇತ್ತು. ಇಲ್ಲಿ ಒಂದು ಮಾತು ಸ್ಪಷ್ಟಪಡಿಸುತ್ತೇನೆ. ನಾನು ಅವಳ ಬಾಲ. ಅವಳು ಎಲ್ಲಿದ್ದಾಳೆ ಎಂದು ನಾನೇ ಹುಡುಕಿಕೊಂಡು ಹೋಗ್ತೇನೆ. ಅವಳಿಗೆ ಯಾರಾದರೂ ಏನಾದರೂ ಹೇಳಿದ್ರೆ ಬೇಸರ ಆಗುತ್ತೆ ಎಂದರು ಮಂಜು.

ಮಂಜು ವೇದಿಕೆ ಇಳಿದು ಬರುತ್ತಿದ್ದಂತೆ, ಮಂಜು ಬಾಲ ದಿವ್ಯಾ ಎಂದು ಯಾರಾದರೂ ಹೇಳಿದರೆ ನಾನೇ ಹೊಡೆಯುತ್ತೇನೆ ಎಂದು ಚಂದ್ರಚೂಡ್​ ಎಚ್ಚರಿಕೆ ನೀಡಿದರು. ನಂತರ, ನನ್ನನ್ನು ಕೆಲವರು ದಾರಿ ತಪ್ಪಿಸಿದ್ದರು. ಹೀಗಾಗಿ, ನಿನ್ನ ಬಗ್ಗೆ ತಪ್ಪಾಗಿ ತಿಳಿದುಕೊಂಡೆ ಎಂದು ದಿವ್ಯಾ ಸುರೇಶ್​ಗೆ ಹೇಳಿದರು. ಈ ಮೂಲಕ ಅವರು ಪ್ರಶಾಂತ್​ ಹೆಸರನ್ನು ಉಲ್ಲೇಖಿಸದೆ ಮಾತನಾಡಿದ್ದಾರೆ.

ಇದನ್ನೂ ಓದಿ: ವೈಜಯಂತಿಗೆ ಈ ಭಯ ತುಂಬಾನೇ ಕಾಡಿತ್ತಂತೆ; ಚಂದ್ರಚೂಡ್​ ಬಿಚ್ಚಿಟ್ರು ರಹಸ್ಯ

ಬಿಗ್​ ಬಾಸ್ ಹೆಸರು ದುರ್ಬಳಕೆ ಮಾಡಿಕೊಂಡ ಪ್ರಶಾಂತ್​ ಸಂಬರಗಿ; ಸುದೀಪ್ ಛೀಮಾರಿ