ಗೀತಾ ಧಾರಾವಾಹಿಯ ವಿಲನ್ ಶರ್ಮಿತಾ ಗೌಡ ವಯಸ್ಸು ಕೇಳಿದ್ರೆ ನೀವು ಅಚ್ಚರಿ ಪಡ್ತೀರಾ

ಧಾರಾವಾಹಿಯ ಪ್ರಮುಖ ಪಾತ್ರಧಾರಿ ಗೀತಾಗೆ ತೊಂದರೆ ಕೊಡುವುದು ಭಾನುಮತಿಯ ಕೆಲಸ. ಎಲ್ಲರ ಎದುರಿಗೆ ಒಳ್ಳೆಯವರಂತೆ ಕಾಣುವ ಭಾನುಮತಿ, ಪಕ್ಕಾ ವಿಲ್ಲನ್​. ಭಾನುಮತಿ ಪಾತ್ರದಲ್ಲಿ ಮಿಂಚುತ್ತಿರುವ ಶರ್ಮಿತಾ ಗೌಡ.

  • TV9 Web Team
  • Published On - 21:32 PM, 22 Feb 2021
ಗೀತಾ ಧಾರಾವಾಹಿಯ ವಿಲನ್ ಶರ್ಮಿತಾ ಗೌಡ ವಯಸ್ಸು ಕೇಳಿದ್ರೆ ನೀವು ಅಚ್ಚರಿ ಪಡ್ತೀರಾ
ಶರ್ಮಿತಾ ಗೌಡ

ಕಲರ್ಸ್​ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಗೀತಾ’ ಧಾರಾವಾಹಿ ಪ್ರೇಕ್ಷಕರಿಗೆ ಮೆಚ್ಚುಗೆ ಪಡೆಯುತ್ತಿರುವ ಧಾರಾವಾಹಿಗಳಲ್ಲಿ ಒಂದು. ಈ ಧಾರಾವಾಹಿಯಲ್ಲಿ ಗೀತಾ ಲೀಡ್​ರೋಲ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಇವರಿಗೆ ತೊಂದರೆ ಕೊಡುವ ಅತ್ತೆಯಾಗಿ ಭಾನುಮತಿ ಇದ್ದಾರೆ. ಭಾನುಮತಿ ಪಾತ್ರ ಮಾಡುತ್ತಿರುವುದು ಶರ್ಮಿತಾ ಗೌಡ. ಇವರ ವಯಸ್ಸಿನ ಬಗ್ಗೆ ಅಚ್ಚರಿಯ ಮಾಹಿತಿಯೊಂದು ಇಲ್ಲಿದೆ.

ಧಾರಾವಾಹಿಯ ಪ್ರಮುಖ ಪಾತ್ರಧಾರಿ ಗೀತಾಗೆ ತೊಂದರೆ ಕೊಡುವುದು ಭಾನುಮತಿಯ ಕೆಲಸ. ಎಲ್ಲರ ಎದುರಿಗೆ ಒಳ್ಳೆಯವರಂತೆ ಕಾಣುವ ಭಾನುಮತಿ, ಪಕ್ಕಾ ವಿಲ್ಲನ್​. ಭಾನುಮತಿ ಪಾತ್ರದಲ್ಲಿ ಮಿಂಚುತ್ತಿರುವ ಶರ್ಮಿತಾ ಗೌಡ. ಮೂಲತಃ ಚಿಕ್ಕಮಗಳೂರಿನವರು. ಮೊದಲಿನಿಂದಲೂ ಮಾಡೆಲಿಂಗ್​ನಲ್ಲಿ ಅವರು ಆಸಕ್ತಿ ಹೊಂದಿದ್ದಾರೆ. ಅಷ್ಟೇ ಅಲ್ಲ ಅನೇಕ ಇವರು 2016ರಲ್ಲಿ ಮಿಸ್​ ಚಿಕ್ಕಮಗಳೂರು ಆಗಿ ಹೊರ ಹೊಮ್ಮಿದ್ದರು. 2017ರಲ್ಲಿ ಮಿಸ್​ ಕರ್ನಾಟಕ ಸ್ಪರ್ಧೆಯಲ್ಲಿ ರನ್ನರ್​ ಅಪ್​ ಆಗಿದ್ದರು.

ಶರ್ಮಿತಾ ವಯಸ್ಸು 30. ಶರ್ಮಿತಾ ಗೌಡಾಗೆ ಈಗಾಗಲೇ ಮದುವೆ ಆಗಿದೆ. ಒಂದು ಮಗು ಕೂಡ ಇದೆ. ಇವರು ಶಿಕ್ಷಣದ ಬಗ್ಗೆ ಹೇಳುವುದಾದರೆ ಜೀವ ರಸಾಯನ ಶಾಸ್ತ್ರದಲ್ಲಿ (Bio Chemistry) ಎಂಎಸ್​​ಸಿ ಪದವಿ ಪಡೆದಿದ್ದಾರೆ.

ಧಾರಾವಾಹಿಗಾಗಲೀ ಅಥವಾ ಸಿನಿಮಾ ಖ್ಯಾತಿ ಹೆಚ್ಚಬೇಕು ಎಂದರೆ ಅಲ್ಲಿ ವಿಲನ್​ ಕೂಡ ಮುಖ್ಯವಾಗುತ್ತಾರೆ. ವಿಲನ್​ ಉತ್ತಮವಾಗಿದ್ದರೆ ಸಿನಿಮಾ/ಧಾರಾವಾಹಿ ಮೈಲೇಜ್​ ಪಡೆದುಕೊಳ್ಳುತ್ತದೆ. ಗೀತಾ ಧಾರಾವಾಹಿ ಖ್ಯಾತಿ ಹೆಚ್ಚಲು ಶರ್ಮಿತಾ ಪಾತ್ರ ತುಂಬಾನೇ ದೊಡ್ಡದಿದೆ. ಅಲ್ಲದೆ, ಇವರು ಸ್ಟೈಲಿಸ್ಟ್​ ವಿಲನ್ ಎನ್ನುವ ಖ್ಯಾತಿಯೂ ಇವರಿಗಿದೆ. 2018ರ ಮನೆಯೇ ಮಂತ್ರಾಲಯ ಧಾರಾವಾಹಿಯಲ್ಲಿ ವಿಲನ್​ ಆಗಿ ಇವರು ಖ್ಯಾತಿ ಹೆಚ್ಚಿಸಿಕೊಂಡಿದ್ದಾರೆ.

ಇದನ್ನೂ ಓದಿ:  ಒಬ್ಬರ ಲೈಫಲ್ಲಿ ಹೀರೋ ಆಗ್ಬೇಕಂದ್ರೆ ಇನ್ನೊಬ್ಬರ ಲೈಫಲ್ಲಿ ವಿಲನ್ ಆಗ್ಲೇ ಬೇಕು, ರಾಬರ್ಟ್​ನಲ್ಲಿ ಅಬ್ಬರಿಸಿದ ದರ್ಶನ್