ನನ್ನನ್ನು ಮದುವೆ ಆಗಲ್ವ?; ಮಂಜುಗೆ ಕಣ್ಣಲ್ಲಿ ಕಣ್ಣಿಟ್ಟು ಕೇಳಿದ ದಿವ್ಯಾ

ಮಂಜು-ದಿವ್ಯಾ ನಡುವೆ ಇರೋದು ನಿಜವಾದ ಪ್ರೀತಿಯಾ ಅಥವಾ ಗೆಳೆತನವೋ ಎನ್ನುವ ವಿಚಾರ ಅವರಿಗೇ ಗೊತ್ತಾಗಿಲ್ಲ. ಇದು ಪ್ರೇಕ್ಷಕರಿಗೆ ಒಂದಷ್ಟು ಮನರಂಜನೆ ಕೊಡುತ್ತಿರುವುದಂತೂ ಸುಳ್ಳಲ್ಲ.

  • TV9 Web Team
  • Published On - 7:03 AM, 9 Apr 2021
ನನ್ನನ್ನು ಮದುವೆ ಆಗಲ್ವ?; ಮಂಜುಗೆ ಕಣ್ಣಲ್ಲಿ ಕಣ್ಣಿಟ್ಟು ಕೇಳಿದ ದಿವ್ಯಾ
ದಿವ್ಯಾ ಸುರೇಶ್ ಹಾಗೂ ಮಂಜು ಪಾವಗಡ ಬಿಗ್ ಬಾಸ್ ಮನೆಯಲ್ಲಿ

ಬಿಗ್​ ಬಾಸ್​ ಮನೆಯಲ್ಲಿ ಮಂಜು ಪಾವಗಡ ಹಾಗೂ ದಿವ್ಯಾ ಸುರೇಶ್​ ನಡುವಣ ಪ್ರೀತಿ ವಿಚಾರ ಸಾಕಷ್ಟು ಚರ್ಚೆ ಆಗುತ್ತಿದೆ. ಇವರಿಬ್ಬರ ನಡುವೆ ಇರೋದು ನಿಜವಾದ ಪ್ರೀತಿಯಾ ಅಥವಾ ಗೆಳೆತನವೋ ಎನ್ನುವ ವಿಚಾರ ಅವರಿಗೇ ಗೊತ್ತಾಗಿಲ್ಲ. ಇದು ಪ್ರೇಕ್ಷಕರಿಗೆ ಒಂದಷ್ಟು ಮನರಂಜನೆ ಕೊಡುತ್ತಿರುವುದಂತೂ ಸುಳ್ಳಲ್ಲ. ಈಗ ದಿವ್ಯಾ ಕೇಳಿರುವ ಪ್ರಶ್ನೆ ಕೇಳಿ ಮಂಜು ಅಚ್ಚರಿಗೆ ಒಳಗಾಗಿದ್ದಾರೆ.

ಇತ್ತೀಚೆಗೆ ಶುಭಾ ಜತೆ ಮಾತನಾಡುತ್ತಾ ದಿವ್ಯಾ ಬಗ್ಗೆ ಮಂಜು ಮಾತನಾಡಿದ್ದರು. ದಿವ್ಯಾ ಜೀವನದಲ್ಲಿ ತುಂಬಾ ನೊಂದಿದ್ದಾಳೆ. ಅವರಿಗೆ ನಾನು ಉತ್ತಮ ಗೆಳೆಯ. ಅದನ್ನು ಅವರೂ ಹೇಳಿದ್ದಾರೆ. ಅವರನ್ನು ಮದುವೆ ಆಗೋಕೆ ಸಾಧ್ಯವೋ ಇಲ್ಲವೋ ಅನ್ನೋದನ್ನ ಹೇಳೋಕೆ ಆಗಲ್ಲ ಅರ್ಥದಲ್ಲಿ ಮಂಜು ಹೇಳಿದ್ದರು.

ಏಪ್ರಿಲ್​ 8ರ ಎಪಿಸೋಡ್​ನಲ್ಲೂ ಇದೇ ವಿಚಾರ ಚರ್ಚೆಗೆ ಬಂದಿದೆ. ದಿವ್ಯಾ, ಮಂಜು ಹಾಗೂ ಶುಭಾ ಒಂದೇ ಕಡೆಯಲ್ಲಿ ಕುಳಿತು ಮಾತನಾಡುತ್ತಿದ್ದರು. ಆಗ ಮಾತನಾಡಿದ ದಿವ್ಯಾ, ನನ್ನ ಕೂದಲು ತುಂಬಾನೇ ಉದುರಿ ಹೋಗುತ್ತಿದೆ. ಅದಕ್ಕೆ ಆರೈಕೆ ಸರಿಯಾಗಿ ಆಗುತ್ತಿಲ್ಲ ಎನ್ನುವ ಅಭಿಪ್ರಾಯ ಹೊರ ಹಾಕಿದರು. ಆಗ ಮಾತನಾಡಿದ ಶುಭಾ, ಗಡಸು ನೀರಿಗೆ ಮತ್ತಷ್ಟು ಬೇಗ ಕೂದಲು ಉದುರುತ್ತದೆ ಎಂದರು.

ಆಗ ಮಂಜು ತಮ್ಮ ಕಷ್ಟ ಹೇಳಿಕೊಂಡರು. ನನ್ನ ಕೂದಲು ಬೆಳ್ಳಗೆ ಆಗುತ್ತಿದೆ. ಇಲ್ಲಿಂದ ಹೊರ ಹೋದ ತಕ್ಷಣ ಯಾರನ್ನಾದರೂ ನೋಡಿ ಮದುವೆ ಆಗಿಬಿಡಬೇಕು ಎಂದರು. ಇದನ್ನು ಕೇಳಿದ ದಿವ್ಯಾ ಅವರು ಮಂಜು ಕಣ್ಣನ್ನೇ ದಿಟ್ಟಿಸಿ ನೋಡಿದರು. ಮಂಜು ಮನೆಯಿಂದ ಹೊರ ಹೋದ ತಕ್ಷಣ ನನ್ನನ್ನು ಮದುವೆ ಆಗುವುದಿಲ್ಲವೇ ಎಂದು ಕೇಳಿದರು. ಈ ಮಾತನ್ನು ನಿರೀಕ್ಷಿಸದ ಮಂಜು, ಸ್ವಲ್ಪ ತಡವರಿಸಿದರು.

ದಿವ್ಯಾ ನೀನು ಮದುವೆ ಆಗೋದಕ್ಕೆ ಇನ್ನೂ 3-4 ವರ್ಷ ತಡವಿದೆ ಎಂದು ಹೇಳಿದ್ದೀಯಾ. ನನಗೆ ವಯಸ್ಸಾಯ್ತು. ಮನೆಯಿಂದ ಹೊರ ಹೋದ ತಕ್ಷಣ ಮದುವೆ ಆಗಬೇಕು ಎಂದು ನಕ್ಕರು. ಈ ಮಾತು ಕೇಳಿ ಶುಭಾ ಹಾಗೂ ದಿವ್ಯಾ ಕೂಡ ನಕ್ಕು ಮಾತು ನಿಲ್ಲಿಸಿದರು.

ಮಂಜುನ ಪ್ರೀತಿಸ್ತೀನಿ ಎನ್ನುತ್ತ ಸುದೀಪ್​ ಎದುರಲ್ಲೇ ಟ್ವಿಸ್ಟ್​ ಕೊಟ್ಟ ದಿವ್ಯಾ! ಅಬ್ಬಬ್ಬಾ ಸಖತ್​ ಚಾಲಾಕಿ

ದಿವ್ಯಾ ಉರುಡುಗ-ಅರವಿಂದ್​ ಪ್ರೀತಿಯ ಉತ್ಕಟತೆ ನೋಡಿ ಮನೆಯವರೇ ಕಂಗಾಲು; ಅಂಥದ್ದೇನಾಯ್ತು?