ಸುನೇತ್ರಾ ಪಂಡಿತ್ ಅವರ ಬಗ್ಗೆ ಇನ್ನಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ
ಬಸವನಗುಡಿ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅಪಘಾತ ನಡೆದಿದೆ. ರಾಜ್ಯ ರಾಜಧಾನಿ ಬೆಂಗಳೂರಿನ ರಸ್ತೆಗಳ ದುಸ್ಥಿತಿ ಬಗ್ಗೆ ಇರುವ ದೂರುಗಳಿಗೆ ಲೆಕ್ಕವಿಲ್ಲ. ಅವೈಜ್ಞಾನಿಕ ಹಂಪ್, ಎಲ್ಲೆಂದರಲ್ಲಿ ಕಾಣಿಸುವ ಹೊಂಡಗಳು, ಕಾಮಗಾರಿಗಳ ಕಾರಣದಿಂದಾದ ಗುಂಡಿಗಳು ಎಲ್ಲ ಕಡೆ ಕಾಣಸಿಗುತ್ತವೆ. ಸಾವಿನ ಮನೆಯ ಬಾಗಿಲಿನಂತೆ ಎದುರಾಗುವ ಇಂಥ ರಸ್ತೆಗಳಲ್ಲಿ ವಾಹನ ಸವಾರರು ಜೀವ ಬಿಗಿ ಹಿಡಿದುಕೊಂಡು ಸಾಗಬೇಕಾದ ಸ್ಥಿತಿ ಇದೆ. ಪ್ರತಿ ದಿನ ಒಂದಿಲ್ಲೊಂದು ಅಪಘಾತ ಪ್ರಕರಣ ವರದಿ ಆಗುತ್ತಲೇ ಇರುತ್ತದೆ. ಈಗ ಪೋಷಕ ಕಲಾವಿದೆ ಸುನೇತ್ರಾ ಪಂಡಿತ್ ಅವರಿಗೆ ಆ್ಯಕ್ಸಿಡೆಂಟ್ ಆಗಿರುವ ಸುದ್ದಿ ಕೇಳಿ ಅವರ ಆಪ್ತರು ಮತ್ತು ಅಭಿಮಾನಿಗಳು ಮರುಗುವಂತಾಗಿದೆ.
ಕನ್ನಡದ ಕಿರುತೆರೆಯಲ್ಲಿ ಸುನೇತ್ರಾ ಪಂಡಿತ್ ಹೆಚ್ಚು ಖ್ಯಾತಿ ಹೊಂದಿದ್ದಾರೆ. ‘ಸಿಲ್ಲಿ ಲಲ್ಲಿ’ ಧಾರಾವಾಹಿಯಲ್ಲಿ ಅವರು ನಿಭಾಯಿಸಿದ ವಿಶಾಲು ಎಂಬ ಪಾತ್ರವನ್ನು ಫ್ಯಾನ್ಸ್ ಮರೆಯುವಂತಿಲ್ಲ. ಕಾಮಿಡಿ ಪಾತ್ರಗಳಲ್ಲಿ ಅವರು ಭರಪೂರ ಮನರಂಜನೆ ನೀಡಿದ್ದಾರೆ. ಎಲ್ಲ ಬಗೆಯ ಪಾತ್ರಗಳಿಗೂ ಜೀವ ತುಂಬವ ಮೂಲಕ ಜನಮನ ಗೆದ್ದಿದ್ದಾರೆ. ಹಲವು ವರ್ಷಗಳಿಂದ ಬಣ್ಣದ ಲೋಕದಲ್ಲಿ ಇರುವ ಅವರು, ಈಗಲೂ ಸಕ್ರಿಯರಾಗಿದ್ದಾರೆ. ಅನೇಕ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಡಬ್ಬಿಂಗ್ ಕಲಾವಿದೆ ಕೂಡ ಆಗಿರುವ ಸುನೇತ್ರಾ ಪಂಡಿತ್ ಅವರು ಹಲವು ನಟಿಯರಿಗೆ ಕಂಠದಾನ ಮಾಡಿದ್ದಾರೆ. ಅವರ ಪತಿ ರಮೇಶ್ ಪಂಡಿತ್ ಕೂಡ ಚಿತ್ರರಂಗದಲ್ಲಿ ಬಹುಬೇಡಿಕೆಯ ನಟನಾಗಿ ಗುರುತಿಸಿಕೊಂಡಿದ್ದಾರೆ.
ಸದ್ಯ ಬಸವನಗುಡಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸುನೇತ್ರಾ ಪಂಡಿತ್ ಅವರ ಆರೋಗ್ಯದ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ. ವೈದ್ಯರು ಅಥವಾ ಕುಟುಂಬದವರು ಹೆಲ್ತ್ ಅಪ್ಡೇಟ್ ನೀಡಬೇಕಿದೆ. ಸುನೇತ್ರಾ ಪಂಡಿತ್ ಅವರು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಅಭಿಮಾನಿಗಳು ಮತ್ತು ಆಪ್ತರು ಪ್ರಾರ್ಥಿಸುತ್ತಿದ್ದಾರೆ.
ಕೊರೊನಾದಿಂದ ಸಹೋದರಿಯನ್ನು ಕಳೆದುಕೊಂಡಿದ್ದ ಸುನೇತ್ರಾ ಪಂಡಿತ್
2021ರಲ್ಲಿ ಕೊರೊನಾ ರಣಕೇಕೆ ಹಾಕಿದಾಗ ಸುನೇತ್ರಾ ಪಂಡಿತ್ ಅವರ ಕುಟುಂಬದಲ್ಲೂ ದುಃಖ ಆವರಿಸಿತ್ತು. ಕೊರೊನಾ ವೈರಸ್ನಿಂದಾಗಿ ಅವರ ಸಹೋದರಿ ಸರಿತಾ ಅಸುನೀಗಿದರು. ಆ್ಯಂಬುಲೆನ್ಸ್ಗಳ ಅಸಮರ್ಪಕತೆ ಹಾಗೂ ಜನರ ನಿರ್ಲಕ್ಷ್ಯದ ಬಗ್ಗೆ ಸುನೇತ್ರಾ ಪಂಡಿತ್ ಹಾಗೂ ರಮೇಶ್ ಪಂಡಿತ್ ಅವರು ಬೇಸರ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ: ಕೊರೊನಾ ಇಲ್ಲ ಅನ್ನೋವ್ರಿಗೆ ಕಪಾಳಕ್ಕೆ ಹೊಡೆಯಿರಿ; ಅಕ್ಕನ ಕಳೆದುಕೊಂಡು ಕಣ್ಣೀರಿಟ್ಟ ನಟಿ ಸುನೇತ್ರಾ ಪಂಡಿತ್
ಇದನ್ನೂ ಓದಿ: ಬೆಳಗ್ಗೆ ಮಗನ ‘ಕಥೆಗೆ ಸಾವಿಲ್ಲ’ ಕೃತಿ ಬಿಡುಗಡೆ, ಸಂಜೆ ಕೊರೊನಾದಿಂದ ತಂದೆಯ ಸಾವು