ಬೆಂಗಳೂರು: ಜೀ ಕನ್ನಡದ ಜನಪ್ರಿಯ ಧಾರಾವಾಹಿ ಈ ವ್ಯಾಲೆಂಟೈನ್ಸ್ ದಿನಕ್ಕೆ ವೀಕ್ಷಕರಿಗೆ ಪ್ರೀತಿಯನ್ನು ಸಂಭ್ರಮಿಸಲು ಒಂದು ಕುತೂಹಲಕಾರಿ ಸರ್ಪ್ರೈಸ್ ತರುತ್ತಿದೆ. ಪ್ರೇಮಿಗಳ ದಿನದಂದು “ಗಟ್ಟಿಮೇಳ”ದಲ್ಲಿ ಚಿತ್ರದ ನಾಯಕ ವೇದಾಂತ್, ನಾಯಕಿ ಅಮೂಲ್ಯಾಗೆ ತಾಜ್ ಮಹಲ್ ಬಳಿಯಲ್ಲಿ ತನ್ನ ಪ್ರೇಮ ನಿವೇದಿಸುತ್ತಾನೆ. ಕನ್ನಡ ಕಿರುತೆರೆಯಲ್ಲಿಯೇ ವಿನೂತನವಾದ ಈ ಪ್ರಯತ್ನ ವೀಕ್ಷಕರನ್ನು ಗೆಲ್ಲಲಿದೆ ಎಂಬ ವಿಶ್ವಾಸವನ್ನು ಧಾರಾವಾಹಿ ತಂಡ ವ್ಯಕ್ತಪಡಿಸಿದೆ.
ಈ ಯೋಜನೆಯ ಹಿಂದಿನ ಪ್ಲಾನ್ ವೇದಾಂತ್ ತಮ್ಮನದು. ಅವನು ವೇದಾಂತ್ ತಮ್ಮ ಬ್ಯುಸಿನೆಸ್ ಟ್ರಿಪ್ ಎಂದು ಪ್ಲಾನ್ ಮಾಡಿ ದೆಹಲಿಗೆ ಕರೆದುಕೊಂಡು ಹೋಗುತ್ತಾನೆ. ಪ್ರೇಮಿಗಳ ದಿನದಂದು ವೇದಾಂತ್ ತನ್ನ ಪ್ರೀತಿಯನ್ನು ಅಮೂಲ್ಯಾಗೆ ಪ್ರೇಮ ನಿವೇದಿಸುತ್ತಾನೆ.
ಕೋರಮಂಗಲ ಅನಿಲ್ ನಿರ್ದೇಶನದ ಈ ಧಾರಾವಾಹಿಯನ್ನು ಜೋನಿ ಹರ್ಷ ನಿರ್ಮಾಣ ಮಾಡಿದ್ದಾರೆ. ಗಟ್ಟಿಮೇಳ ಮೂರು ಕುಟುಂಬಗಳ ಕಥೆಯಾಗಿದೆ. ಶ್ರೀಧರ್ ಮತ್ತು ಸುಹಾಸಿನಿ ವಸಿಷ್ಠ ಕುಟುಂಬ, ಮಂಜುನಾಥ್ ಮತ್ತು ಪರಿಮಳಾ ಕುಟುಂಬ ಮತ್ತು ಅಶ್ವಥ್ ಮತ್ತು ಪದ್ಮಾ ಅಶ್ವಥ್ ಅವರ ಕುಟುಂಬಗಳ ಸುತ್ತಲೂ ಸುತ್ತುತ್ತದೆ.
ಇದನ್ನೂ ಓದಿ: ಪ್ರೇಮಿಗಳ ದಿನ 2021; ಪ್ರೇಮದ ಪಾತ್ರ ಮಾಡುತ್ತಲೇ ಸಪ್ತಪದಿ ತುಳಿದ ಸ್ಯಾಂಡಲ್ವುಡ್ ಜೋಡಿಗಳು..
ಅಮೂಲ್ಯ, ವೇದಾಂತ್ ಈ ಮೊದಲು ಶತ್ರುಗಳಾಗಿದ್ದರು. ನಂತರ ಅವರು ಪ್ರೇಮಿಗಳಾದರು. ಈಗ ತಾಜ್ ಮಹಲ್ ಬಳಿಗೆ ಬರುವವರೆಗೂ ಧಾರಾವಾಹಿ ಕುತೂಹಲಕಾರಿ ತಿರುವುಗಳನ್ನು ಕಾಯ್ದುಕೊಂಡಿದೆ. ಕನ್ನಡದ ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾದ ಗಟ್ಟಿಮೇಳ ಇದೀಗ ಕನ್ನಡ ಕಿರುತೆರೆಯಲ್ಲಿಯೇ ಮೊಟ್ಟಮೊದಲ ಬಾರಿಗೆ ತಾಜ್ ಮಹಲ್ ಬಳಿ ಚಿತ್ರೀಕರಿಸಿದ ಹೆಗ್ಗಳಿಕೆಗೆ ಪಾತ್ರವಾಗಿದೆ. ವೇದಾಂತ್ ವಸಿಷ್ಠ ಆಗಿ ರಕ್ಷಿತ್ ಗೌಡ, ಅಮೂಲ್ಯ ಮಂಜುನಾಥ್ ಆಗಿ ನಿಷಿಕಾ ರವಿಕೃಷ್ಣನ್ ನಟಿಸಿದ್ದಾರೆ.