ರಾಧಾ-ಕೃಷ್ಣ ಧಾರಾವಾಹಿಯ ಪಾತ್ರಧಾರಿ ಮಲ್ಲಿಕಾ ಸಿಂಗ್-ಸುಮೇದ್ ಮುದ್ಗಲ್ಕರ್​ ಸಂಭಾವನೆ ಎಷ್ಟು ಗೊತ್ತಾ?

ಸತ್ಯಭಾಮ ಪಾತ್ರ ಮಾಡಿದ್ದ ಅಲಯ ಘೋಶ್ ಅವರ ಸಂಭಾವನೆ 70 ಸಾವಿರ ರೂಪಾಯಿ. ಅಯಾನ್ ಪಾತ್ರ ನಿರ್ವಹಿಸಿರುವ ರುಚಿ ರಾಜ್ ಪವಾರ್ ಒಂದು ದಿನಕ್ಕೆ ₹ 80 ಸಾವಿರ ಚಾರ್ಜ್​ ಮಾಡಿದ್ದಾರೆ.

  • TV9 Web Team
  • Published On - 18:22 PM, 21 Feb 2021
ರಾಧಾ-ಕೃಷ್ಣ ಧಾರಾವಾಹಿಯ ಪಾತ್ರಧಾರಿ ಮಲ್ಲಿಕಾ ಸಿಂಗ್-ಸುಮೇದ್ ಮುದ್ಗಲ್ಕರ್​ ಸಂಭಾವನೆ ಎಷ್ಟು ಗೊತ್ತಾ?
ಕೃಷ್ಣ-ರಾಧೆ

ಕೊರೊನಾ ಸೋಂಕು ನಿಯಂತ್ರಣಕ್ಕೆ ಹೇರಿದ್ದ ಲಾಕ್​ಡೌನ್​ನಿಂದ ಚಿತ್ರರಂಗ ಸಂಪೂರ್ಣ ಸ್ತಬ್ಧವಾಗಿತ್ತು. ಈ ವೇಳೆ ಕನ್ನಡ ವಾಹಿನಿಗಳು ಡಬ್ಬಿಂಗ್​ ಮೊರೆ ಹೋಗಿದ್ದವು. ಹಿಂದಿ ಧಾರಾವಾಹಿಗಳನ್ನು ಕನ್ನಡಕ್ಕೆ ಡಬ್​​ ಮಾಡಿ ಬಿಡುಗಡೆ ಮಾಡಿದ್ದವು. ಈ ರೀತಿ ಡಬ್​ ಆಗಿ ತೆರೆಕಂಡ ಧಾರಾವಾಹಿಗಳಲ್ಲಿ ತುಂಬಾನೇ ಹಿಟ್​ ಆಗಿದ್ದು, ರಾಧಾ-ಕೃಷ್ಣ ಧಾರಾವಾಹಿ. ಈ ಧಾರಾವಾಹಿ ಡಬ್​ ಆಗಿ ಸ್ಟಾರ್​ ಸುವರ್ಣದಲ್ಲಿ ಪ್ರಸಾರವಾಗಿದೆ. ರಾಧಾ-ಕೃಷ್ಣದಲ್ಲಿ ಬರುವ ಕೃಷ್ಣನ ಮಾತು, ಕೃಷ್ಣನ ನಟನೆ, ಕೃಷ್ಣ ಹಾಗೂ ರಾಧೆಯ ನಡುವಿನ ಪ್ರೀತಿಯನ್ನು ತೋರಿಸಿದ ರೀತಿ ಅಭಿಮಾನಿಗಳಿಗೆ ತುಂಬಾನೇ ಇಷ್ಟವಾಗಿತ್ತು.

ರಾಧೆ ಹಾಗೂ ಕೃಷ್ಣನ ಪಾತ್ರದಲ್ಲಿ ನಟಿಸಿರುವ ಕಲಾವಿದರು ಹಾಗೂ ಪೋಷಕ ಪಾತ್ರಗಳಲ್ಲಿ  ಅಭಿನಯಿಸಿರುವವರ ನಟನೆ, ಧಾರಾವಾಹಿ ಡಬ್ಬಿಂಗ್ ಕ್ವಾಲಿಟಿ ಉತ್ತಮವಾಗಿರುವುದು ಧಾರಾವಾಹಿಯ ಖ್ಯಾತಿ ಹೆಚ್ಚುವಿಕೆಗೆ ಪ್ರಮುಖ ಕಾರಣವಾಗಿದೆ. ರಾಧೆಯ ಪಾತ್ರದಲ್ಲಿ ಮಲ್ಲಿಕಾ ಸಿಂಗ್ ಕಾಣಿಸಿಕೊಂಡಿದ್ದಾರೆ, ಕೃಷ್ಣನ ಪಾತ್ರದಲ್ಲಿ ಸುಮೇದ್ ಮುದ್ಗಲ್ಕರ್ ನಟಿಸಿದ್ದಾರೆ. ಇವರಿಬ್ಬರೂ ಸಾಮಾಜಿಕ ಜಾಲತಾಣದಲ್ಲಿ ತುಂಬಾನೇ ಖ್ಯಾತಿ ಗಳಿಸಿಕೊಂಡಿದ್ದಾರೆ. ಇವರ ಸಂಭಾವನೆ ಎಷ್ಟು ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.

ಚಂದ್ರವಳ್ಳಿ ಪಾತ್ರದಲ್ಲಿ ಪ್ರೀತಿ ನಟಿಸಿದ್ದಾರೆ. ಇವರು ಒಂದು ದಿನಕ್ಕೆ 30+ ಸಾವಿರ ರೂಪಾಯಿ ಸಂಭಾವನೆ ಪಡೆದಿದ್ದಾರೆ. ಇನ್ನು, ವೃಷಬಾನು ಪಾತ್ರದಲ್ಲಿ ನಟಿಸಿರುವ ರಾಕೇಶ್​ ಕುಕ್ರಟಿ ಒಂದು ದಿನಕ್ಕೆ ಪಡೆಯೋ ಸಂಭಾವನೆ ಬರೋಬ್ಬರಿ 50 ಸಾವಿರ ರೂಪಾಯಿ. ಜಟಿಲನ ಪಾತ್ರಕ್ಕೆ ಜೀವ ತುಂಬಿರುವ ಮಾಲಿನಿ ಸೇನ್​ ಗುಪ್ತ ಒಂದು ದಿನದ ಸಂಭಾವನೆ 40 ಸಾವಿರ ರೂಪಾಯಿ ಎನ್ನಲಾಗಿದೆ. ಮಹಾಪಂಡಿತ್ ಉಗ್ರಪತ್ ಪಾತ್ರವನ್ನು ನಿಮೈ ಬಲಿ ಅವರು ನಿರ್ವಹಿಸಿದ್ದಾರೆ. ಇವರು ದಿನಕ್ಕೆ 35 ಸಾವಿರ ರೂಪಾಯಿ ಸಂಭವಾನೆ ಪಡೆದುಕೊಂಡಿದ್ದಾರೆ.

ಸತ್ಯಭಾಮ ಪಾತ್ರ ಮಾಡಿದ್ದ ಅಲಯ ಘೋಶ್ ಅವರ ಸಂಭಾವನೆ 70 ಸಾವಿರ ರೂಪಾಯಿ. ಅಯಾನ್ ಪಾತ್ರ ನಿರ್ವಹಿಸಿರುವ ರುಚಿ ರಾಜ್ ಪವಾರ್ ಒಂದು ದಿನಕ್ಕೆ 80 ಸಾವಿರ ಚಾರ್ಜ್​ ಮಾಡಿದ್ದಾರೆ. ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ರಾಧೆಯನ್ನು ಮಾಡಿರುವ ಮಲ್ಲಿಕಾ ಸಿಂಗ್​ ಹಾಗೂ ಕೃಷ್ಣನ ಪಾತ್ರದಲ್ಲಿ ಮಿಂಚಿರುವ ಸುಮೇದ್ ಮುದ್ಗಲ್ಕರ್ ಒಂದು ದಿನಕ್ಕೆ ಲಕ್ಷದ ಮೇಲೆ ಸಂಭಾವನೆ ಪಡೆಯುತ್ತಾರೆ.

ಇದನ್ನೂ ಓದಿ: ಮಾಲ್ಡೀವ್ಸ್​ನಲ್ಲಿ ಮಿಲನಾ-ಕೃಷ್ಣ ಹನಿಮೂನ್​