Ranjani Raghavan: ‘ಕನ್ನಡತಿ’ ಧಾರಾವಾಹಿ ನಟಿ ರಂಜನಿ ರಾಘವನ್​ ಫೇಸ್​ಬುಕ್​ ಹ್ಯಾಕ್​; ಯಾರ ಮೇಲಿದೆ ಅನುಮಾನ?

Kannadathi Serial: ‘ನನ್ನ ಫೇಸ್​ಬುಕ್​ ಖಾತೆಯನ್ನು ಈ ವ್ಯಕ್ತಿ ಹ್ಯಾಕ್​ ಮಾಡಿದ್ದಾರೆ. ದಯವಿಟ್ಟು ಇದನ್ನು ರಿಪೋರ್ಟ್​ ಮಾಡಿ ಮತ್ತು ನನ್ನ ಖಾತೆಯನ್ನು ಮರಳಿ ಪಡೆಯಲು ಸಹಾಯ ಮಾಡಿ’ ಎಂದು ರಂಜನಿ ಹೇಳಿದ್ದಾರೆ.

  • TV9 Web Team
  • Published On - 11:23 AM, 4 May 2021
Ranjani Raghavan: ‘ಕನ್ನಡತಿ’ ಧಾರಾವಾಹಿ ನಟಿ ರಂಜನಿ ರಾಘವನ್​ ಫೇಸ್​ಬುಕ್​ ಹ್ಯಾಕ್​; ಯಾರ ಮೇಲಿದೆ ಅನುಮಾನ?
ರಂಜನಿ ರಾಘವನ್​

ಕಿರುತೆರೆಯಲ್ಲಿ ಸಿಕ್ಕಾಪಟ್ಟೆ ಖ್ಯಾತಿ ಗಳಿಸಿರುವವರು ನಟಿ ರಂಜನಿ ರಾಘವನ್​. ಕಲರ್ಸ್​ ಕನ್ನಡದ ‘ಪುಟ್ಟಗೌರಿ ಮದುವೆ’ ಮತ್ತು ‘ಕನ್ನಡತಿ’ ಧಾರಾವಾಹಿಗಳ ಮೂಲಕ ಅವರು ದೊಡ್ಡ ಮಟ್ಟದ ಜನಪ್ರಿಯತೆ ಪಡೆದುಕೊಂಡಿದ್ದಾರೆ. ಹಾಗಾಗಿ ಅವರಿಗೆ ಸೋಶಿಯಲ್​ ಮೀಡಿಯಾದಲ್ಲೂ ದೊಡ್ಡ ಅಭಿಮಾನಿ ಬಳಗ ಇದೆ. ಆದರೆ ಈಗ ರಂಜನಿ ರಾಘವನ್​ ಅವರಿಗೆ ಹ್ಯಾಕರ್​ಗಳ ಕಾಟ ಶುರು ಆಗಿದೆ. ಅವರ ಫೇಸ್​ಬುಕ್​ ಖಾತೆ ಹ್ಯಾಕ್ ಆಗಿದೆ. ಈ ಬಗ್ಗೆ ಇನ್​ಸ್ಟಾಗ್ರಾಂ ಮೂಲಕ ಸ್ವತಃ ರಂಜನಿ ಮಾಹಿತಿ ನೀಡಿದ್ದಾರೆ.

‘ನನ್ನ ಫೇಸ್​ಬುಕ್​ ಖಾತೆಯನ್ನು ಈ ವ್ಯಕ್ತಿ ಹ್ಯಾಕ್​ ಮಾಡಿದ್ದಾರೆ. ದಯವಿಟ್ಟು ಇದನ್ನು ರಿಪೋರ್ಟ್​ ಮಾಡಿ ಮತ್ತು ನನ್ನ ಖಾತೆಯನ್ನು ಮರಳಿ ಪಡೆಯಲು ಸಹಾಯ ಮಾಡಿ’ ಎಂದು ಇನ್​ಸ್ಟಾಗ್ರಾಮ್​ನಲ್ಲಿ ರಂಜನಿ ಪೋಸ್ಟ್​ ಮಾಡಿದ್ದು, ಅನುಮಾನ ವ್ಯಕ್ತವಾಗಿರುವ ಹ್ಯಾಕರ್​ ಫೋಟೋವನ್ನೂ ಕೂಡ ಅವರು ಶೇರ್​ ಮಾಡಿಕೊಂಡಿದ್ದಾರೆ. ನಕಲಿ ಖಾತೆಯನ್ನು ಬಳಸಿಕೊಂಡು ಹ್ಯಾಕ್ ಮಾಡಲಾಗಿರುತ್ತದೆ ಎಂದು ಅದಕ್ಕೆ ಹಲವು ಕಮೆಂಟ್​ ಮಾಡಿದ್ದಾರೆ. ಕೆಲವೇ ದಿನಗಳ ಹಿಂದೆ ಫೇಸ್​ಬುಕ್​ನಲ್ಲಿ ನಿಂಬೆರಸದ ಕುರಿತಂತೆ ರಂಜನಿ ರಾಘವನ್​ ಒಂದು ಪೋಸ್ಟ್ ಮಾಡಿದ್ದರು. ಅದು​ ಸಾಕಷ್ಟು ಚರ್ಚೆಗೆ ಕಾರಣ ಆಗಿತ್ತು.

‘ಮೂಗಿನ ಹೊಳ್ಳೆಗಳಿಗೆ ನಿಂಬೆರಸ ಹಾಕಿದರೆ ಉಸಿರಾಟದ ತೊಂದರೆ ಆಗಲ್ಲ ಅಥವಾ ಕಫ ಕರಗುತ್ತೆ ಅನ್ನೋದು ಸಹ ಸರಿಯಾದ ಮಾಹಿತಿಯಲ್ಲ. ಯಾರು ಹೇಳಿದ್ರು, ಏಕೆ ಹೇಳಿದ್ರು ಅನ್ನೋಕ್ಕಿಂತ ಪರಿಣಾಮದ ಬಗ್ಗೆ ಮಾತಾಡೋದು ಉತ್ತಮ. ಮೂಗಿಗೆ ನಿಂಬೆ ರಸ ಹಾಕಿ ನನ್ನ ಸ್ನೇಹಿತರೊಬ್ಬರಿಗೆ ಇನ್​ಫೆಕ್ಷನ್​ ಆಗಿ ಮೂಗು ಬ್ಲಾಕ್ ಆಗಿದೆ’ ಎಂದು ರಂಜನಿ ಬರೆದುಕೊಂಡಿದ್ದರು.

‘ಸಿಟ್ರಿಕ್ ಆಸಿಡ್​ನ ಮೂಗಿಗೆ ಯಾಕೆ ಹಾಕಿದ್ರಿ ಅಂತ ಡಾಕ್ಟರ್ ಬೈದ್ರು. ನನ್ನ ಮಾಹಿತಿಯಿಂದ ಇನ್ನೊಬ್ಬರಿಗೆ ತೊಂದರೆ ಆಗೋದನ್ನ ತಡೀಬಹುದು ಅನ್ನೋ ಕಾಳಜಿಯಿಂದ ಹಂಚಿಕೊಂಡಿದ್ದೇನೆ’ ಎಂದು ರಂಜನಿ ಹೇಳಿದ್ದರು. ಅದಾಗಿ ಕೆಲವೇ ದಿನಗಳ ಬಳಿಕ ಅವರ ಫೇಸ್​ಬುಕ್​ ಖಾತೆಯೇ ಹ್ಯಾಕ್ ಆಗಿದೆ.

ಇದನ್ನೂ ಓದಿ: ನೀರಿನಲ್ಲಿ ಹರ್ಷ-ಭುವಿ ರೊಮ್ಯಾನ್ಸ್​: ಟಾಕ್​ ಆಫ್​ ದಿ ಟೌನ್​ ಆದ ಕನ್ನಡತಿ ಜೋಡಿ