ಕಿಚ್ಚ ಸುದೀಪ್​ ಕಿಚನ್​ನಿಂದ ಬಿಗ್​ ಬಾಸ್​ ಸ್ಪರ್ಧಿಗಳಿಗೆ ಬಂತು ವಿಶೇಷ ಅಡುಗೆ

ಕಿಚ್ಚ ಸುದೀಪ್​ ಕಿಚನ್​ನಿಂದ ಬಿಗ್​ ಬಾಸ್​ ಸ್ಪರ್ಧಿಗಳಿಗೆ ಬಂತು ವಿಶೇಷ ಅಡುಗೆ
ಕಿಚ್ಚ ಸುದೀಪ್

ಬಿಗ್​ ಬಾಸ್​ ಮನೆಯ ಗಾರ್ಡನ್​ ಏರಿಯಾದಲ್ಲಿ ಕಿವಿ ಒಂದನ್ನು ಇರಿಸಲಾಗಿತ್ತು. ಆ ಕಿವಿ ಬಳಿ ಹೋಗಿ ಸ್ಪರ್ಧಿಗಳು ತಮ್ಮಿಚ್ಛೆಯನ್ನು ಕೋರಬೇಕು. ಅದು ಈಡೇರಿಸುವಂತಿದ್ದರೆ ಬಿಗ್​ ಬಾಸ್​ ಅದನ್ನು ಪೂರ್ಣಗೊಳಿಸುತ್ತಾರೆ.

TV9kannada Web Team

| Edited By: Rajesh Duggumane

Aug 04, 2021 | 2:31 PM

ಬಿಗ್​ ಬಾಸ್​ ಮನೆಯಲ್ಲಿ ಎಲ್ಲಾ ಸ್ಪರ್ಧಿಗಳಿಗೆ ಸರ್​ಪ್ರೈಸ್​ ಸಿಕ್ಕಿದೆ. ಮನೆಯಲ್ಲಿರುವ ಆರು ಸ್ಪರ್ಧಿಗಳು ಕಿಚ್ಚ ಸುದೀಪ್​ ಅವರು ಮಾಡಿದ ವಿಶೇಷ ಅಡುಗೆಯನ್ನು ಸವಿದಿದ್ದಾರೆ. ಇದಕ್ಕೆ ಅದೃಷ್ಟ ಮಾಡಿರಬೇಕು ಎಂದು ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಇನ್ನು, ಕಿಚ್ಚ ಸುದೀಪ್​ ಮಾಡಿದ ಅಡುಗೆಯನ್ನು ತಿಂದ ಮನೆ ಮಂದಿಯ ಸಂತಸ ಮುಗಿಲುಮುಟ್ಟಿತ್ತು.

ಕನ್ನಡ ಬಿಗ್​ ಬಾಸ್​ ಸೀಸನ್​ 8 ಕೊನೆಯ ಹಂತ ತಲುಪಿದೆ. ಮನೆಯಲ್ಲಿ 6 ಸ್ಪರ್ಧಿಗಳಿದ್ದು ಓರ್ವ ಸ್ಪರ್ಧಿ ವಾರದ ಮಧ್ಯದಲ್ಲಿ ಮನೆಯಿಂದ ಹೊರ ಹೋಗುತ್ತಿದ್ದಾರೆ. ಆ ಸ್ಪರ್ಧಿ ಯಾರು ಅನ್ನೋದು ಇನ್ನೂ ತಿಳಿದು ಬಂದಿಲ್ಲ. ಈ ಮಧ್ಯೆ ಮನೆಯ ಸದಸ್ಯರಿಗೆ ವಿಶೇಷ ಆಯ್ಕೆ ನೀಡಲಾಗಿತ್ತು.

ಬಿಗ್​ ಬಾಸ್​ ಮನೆಯ ಗಾರ್ಡನ್​ ಏರಿಯಾದಲ್ಲಿ ಕಿವಿ ಒಂದನ್ನು ಇರಿಸಲಾಗಿತ್ತು. ಆ ಕಿವಿ ಬಳಿ ಹೋಗಿ ಸ್ಪರ್ಧಿಗಳು ತಮ್ಮಿಚ್ಛೆಯನ್ನು ಕೋರಬೇಕು. ಅದು ಈಡೇರಿಸುವಂತಿದ್ದರೆ ಬಿಗ್​ ಬಾಸ್​ ಅದನ್ನು ಪೂರ್ಣಗೊಳಿಸುತ್ತಾರೆ. ಮನೆಯ ಎಲ್ಲಾ ಸ್ಪರ್ಧಿಗಳು ತಮ್ಮಿಷ್ಟದ್ದನ್ನು ಕೋರಿದ್ದಾರೆ. ಈ ವೇಳೆ ದಿವ್ಯಾ ಉರುಡುಗ ವಿಶೇಷ ಬೇಡಿಕೆ ಒಂದನ್ನು ಇಟ್ಟಿದ್ದರು.

‘ನಮಗೆ ಕಿಚ್ಚ ಸುದೀಪ್​ ಅಡುಗೆ ಊಟ ಮಾಡಬೇಕು. ಹೀಗಾಗಿ, ಮನೆ ಮಂದಿಗೆ ಕಿಚ್ಚ ಸುದೀಪ್ ಅಡುಗೆ ಮಾಡಿ ಕಳಿಸೋಕೆ ಹೇಳಿ. ಪ್ಲೀಸ್ ದಯವಿಟ್ಟು ಕೊಟ್ಟು ಕಳಿಸಿ ಬಿಗ್​ ಬಾಸ್​’ ಎಂದು ಮನವಿ ಮಾಡಿದ್ದರು.

ಈ ಮನವಿಯನ್ನು ಕಿಚ್ಚ ಸುದೀಪ್​ ಪ್ರೀತಿಯಿಂದ ಸ್ವೀಕರಿಸಿದ್ದಾರೆ. ಎಲ್ಲಾ ಸ್ಪರ್ಧಿಗಳಿಗೆ ಸುದೀಪ್​ ಪ್ರೀತಿಯಿಂದ ಅಡುಗೆ ಮಾಡಿ ಕಳುಹಿಸಿದ್ದಾರೆ. ಬಿರಿಯಾನಿ, ಕೇಕ್​ ಸೇರಿ ಅನೇಕ ರೀತಿಯ ಖಾದ್ಯಗಳು ಕಿಚ್ಚ ಸುದೀಪ್​ ಕಿಚನ್​ನಿಂದ ಬಿಗ್​ ಬಾಸ್​ ಮನೆ ತಲುಪಿದೆ. ಅಲ್ಲದೆ, ಪ್ರತಿಯೊಬ್ಬರಿಗೂ ಕಿವಿಮಾತನ್ನು ಸುದೀಪ್​ ಹೇಳಿದ್ದು ವಿಶೇಷವಾಗಿತ್ತು. ಸುದೀಪ್​ ಮಾಡಿದ ಅಡುಗೆ ಅದ್ಭುತವಾಗಿತ್ತು ಎಂದು ಮನೆ ಮಂದಿ ಕೊಂಡಾಡಿದ್ದಾರೆ. ಅಲ್ಲದೆ, ಸುದೀಪ್​ಗೆ ಮನಃಪೂರ್ವಕವಾಗಿ ಧನ್ಯವಾದ ಹೇಳಿದ್ದಾರೆ.

ಮೊದಲ ಇನ್ನಿಂಗ್ಸ್​ ವೇಳೆ ಕಿಚ್ಚ ಸುದೀಪ್​ಗೆ ಅನಾರೋಗ್ಯ ಕಾಡಿತ್ತು. ಈ ಕಾರಣಕ್ಕೆ ಅವರು ಕೆಲವು ವಾರ ಶೋ ನಡೆಸಿಕೊಡೋಕೆ ಬಂದಿರಲಿಲ್ಲ. ಈ ವೇಳೆ ಮನೆ ಮಂದಿ ಎಲ್ಲರೂ ಸುದೀಪ್​ಗೆ ಅಡುಗೆ ಮಾಡಿ ಕೊಟ್ಟಿದ್ದರು. ಈಗ ಸುದೀಪ್​ ಮನೆ ಮಂದಿಗೆ ಅಡುಗೆ ಮಾಡಿ ಕಳುಹಿಸಿದ್ದಾರೆ.

ಇದನ್ನೂ ಓದಿ: ಬಿಗ್​ ಬಾಸ್​ ಫಿನಾಲೆಗೂ ಮೊದಲು ಮಿಡ್​ವೀಕ್​ ಎಲಿಮಿನೇಷನ್​; ಇಂದು ಹೊರ ಹೋಗುವ ಸ್ಪರ್ಧಿ ಇವರೇನಾ?

Follow us on

Related Stories

Most Read Stories

Click on your DTH Provider to Add TV9 Kannada