ದಿವ್ಯಾ ಸುರೇಶ್​ ಬಳಿ ಭವಿಷ್ಯದ ಕನಸಿನ ಗುಟ್ಟು ಬಿಚ್ಚಿಟ್ಟ ಮಂಜು

ಬಿಗ್​ ಬಾಸ್​ ಮನೆಯಲ್ಲಿ ಮಂಜು ಹೆಚ್ಚು ಖ್ಯಾತಿ ಹೊಂದಿದ್ದಾರೆ. ಅವರಿಗೆ ಸಾಕಷ್ಟು ಅಭಿಮಾನಿಗಳು ಇದ್ದಾರೆ. ಹೀಗಾಗಿ, ಬಿಗ್​ ಬಾಸ್​ ಕಾರ್ಯಕ್ರಮದಿಂದ ಅವರ ಕೆರಿಯರ್​ಗೆ ಸಾಕಷ್ಟು ಮೈಲೇಜ್​ ಸಿಗುವ ನಿರೀಕ್ಷೆಇದೆ.

  • TV9 Web Team
  • Published On - 7:27 AM, 30 Apr 2021
ದಿವ್ಯಾ ಸುರೇಶ್​ ಬಳಿ ಭವಿಷ್ಯದ ಕನಸಿನ ಗುಟ್ಟು ಬಿಚ್ಚಿಟ್ಟ ಮಂಜು
ಮಂಜು-ದಿವ್ಯಾ ಸುರೇಶ್​

ದಿವ್ಯಾ ಸುರೇಶ್​ ಹಾಗೂ ಮಂಜು ಪಾವಗಡ ಮನೆಯಲ್ಲಿ ಸದಾ ಒಟ್ಟಾಗಿರುತ್ತಾರೆ. ಬಿಗ್​ ಬಾಸ್​ ಮನೆಯ ವಿಚಾರಗಳನ್ನು ಮಾತ್ರವಲ್ಲ ಮನೆಯ ಹೊರಗಿನ ವಿಚಾರಗಳನ್ನು ಕೂಡ ಹಂಚಿಕೊಳ್ಳುತ್ತಾರೆ. ಬಹುತೇಕ ಸಮಯದಲ್ಲಿ ಇಬ್ಬರೂ ಜೋಕ್​ ಮಾಡುತ್ತಾ ಇರುತ್ತಾರೆ. ಆದರೆ, ಕೆಲವೊಮ್ಮೆ ಇಬ್ಬರೂ ಗಂಭೀರ ವಿಚಾರಗಳನ್ನು ಚರ್ಚೆ ಮಾಡಿದ್ದಿದೆ. ಈಗ ದಿವ್ಯಾ ಎದುರು ಮಂಜು ಪಾವಗಡ ಭವಿಷ್ಯದ ಕನಸಿನ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ.

ಬಿಗ್​ ಬಾಸ್​ ಮನೆಯಲ್ಲಿ ಮಂಜು ಹೆಚ್ಚು ಖ್ಯಾತಿ ಹೊಂದಿದ್ದಾರೆ. ಅವರಿಗೆ ಸಾಕಷ್ಟು ಅಭಿಮಾನಿಗಳು ಇದ್ದಾರೆ. ಹೀಗಾಗಿ, ಬಿಗ್​ ಬಾಸ್​ ಕಾರ್ಯಕ್ರಮದಿಂದ ಅವರ ಕೆರಿಯರ್​ಗೆ ಸಾಕಷ್ಟು ಮೈಲೇಜ್​ ಸಿಗುವ ನಿರೀಕ್ಷೆ ಇದೆ. ಹೀಗಾಗಿ ಅವರಿಗೆ ಸಿನಿಮಾದಲ್ಲಿ ಚಾನ್ಸ್​ ಸಿಗುವ ಸಾಧ್ಯತೆ ಇದೆ. ಮಂಜು ಕನಸು ಕೂಡ ಅದೇ.

ಎಪ್ರಿಲ್​ 29ರ ಎಪಿಸೋಡ್​ನಲ್ಲಿ ಮಂಜು ಹಾಗೂ ದಿವ್ಯಾ ಸುರೇಶ್​ ಕೂತು ಮಾತನಾಡುತ್ತಿದ್ದರು. ಆಗ ಮಂಜು ಎದುರು ದಿವ್ಯಾ ಪ್ರಶ್ನೆ ಒಂದನ್ನು ಇಟ್ಟರು. 2 ವರ್ಷಗಳ ನಂತರ ನಿನ್ನನ್ನು ನೀನು ಎಲ್ಲಿ ನೋಡಿಕೊಳ್ಳೋಕೆ ಬಯಸುತ್ತೀಯಾ ಎಂದು ಕೇಳಿದರು. ಆಗ ಮಂಜು ಇದಕ್ಕೆ ಸವಿಸ್ತಾರವಾಗಿ ಉತ್ತರಿಸಿದ್ದಾರೆ.

ನಾನು ಒಳ್ಳೆಯ ಕ್ಯಾರೆಕ್ಟರ್​ ಆರ್ಟಿಸ್ಟ್​ ಆಗಬೇಕು. ಕ್ಯಾರೆಕ್ಟರ್​ ಆರ್ಟಿಸ್ಟ್​ ಎಂದರೆ ತಪ್ಪಾಗಬಹುದು. ಹೀಗಾಗಿ, ನಾನೋರ್ವ ಒಳ್ಳೆ ನಟ ಆಗಬೇಕು. ಯಾವ ಪಾತ್ರ ಕೊಟ್ಟರೂ ಜೀವಿಸಬೇಕು ಎಂದು ಕನಸನ್ನು ಬಿಚ್ಚಿಟ್ಟರು ಮಂಜು.

ಅನಂತ್​ನಾಗ್​, ಪ್ರಕಾಶ್ ರೈ, ಸುದೀಪ್​ ಅವರಿಗೆ ಯಾವ ಪಾತ್ರ ಕೊಟ್ಟರೂ ಅದಕ್ಕೆ ನ್ಯಾಯ ಒದಗಿಸುತ್ತಾರೆ. ಅವರ ತರ ಆಗಬೇಕು. ಕಥೆ ಬರೆಯುವವನು ಪಾತ್ರ ಸೃಷ್ಟಿ ಮಾಡುವಾಗ 20 ಪರ್ಸಂಟ್​ ಮಾತ್ರ ಕಲ್ಪನೆ ಮಾಡಿಕೊಂಡಿರುತ್ತಾನೆ. ಆ ಪಾತ್ರಕ್ಕೆ ಜೀವ ತುಂಬೋದು ನಟನ ಕೆಲಸ. ಮಂಜುಗೆ ಪಾತ್ರ ಕೊಟ್ಟರೆ ಸಾಕು ಅದನ್ನು ಸರಿಯಾಗಿ ನಿರ್ವಹಿಸುತ್ತಾನೆ ಎನ್ನುವ ಭರವಸೆ ನಿರ್ದೇಶಕರಿಗೆ ಬರಬೇಕು ಎಂದರು ಮಂಜು.

ಇದನ್ನೂ ಓದಿ: ನಿಂಗೆ ಮರ್ಯಾದೆ ಇಲ್ವಾ, ನನ್ ಹಿಂದೆ ಬರಬೇಡ; ಬಿಗ್​ ಬಾಸ್​ ಚೆಲುವೆಗೆ ಮಂಜು ಹೀಗೆ ಹೇಳಿದ್ದೇಕೆ?

ಜೀವನದಲ್ಲಿ ಜಿಗುಪ್ಸೆ ಬಂದಿದೆ; ವೈಷ್ಣವಿ ಮುಂದೆ ಅಳಲು ತೋಡಿಕೊಂಡ ಮಂಜು