ಧ್ರುವ ಸರ್ಜಾ ನಟನೆಯ ಪೊಗರು ಸಿನಿಮಾ ಟಿವಿಯಲ್ಲಿ ಬರೋಕೆ ದಿನಾಂಕ ಫಿಕ್ಸ್​​

ಕನ್ನಡದ ಖ್ಯಾತ ಮನರಂಜನಾ ವಾಹಿನಿ ‘ಉದಯ ಟಿವಿ’ಗೆ ಧ್ರುವ ಸರ್ಜಾ ನಟನೆಯ ‘ಪೊಗರು’ ಸಿನಿಮಾದ ಪ್ರಸಾರ ಹಕ್ಕುಗಳು ಮಾರಾಟ ಆಗಿತ್ತು. ಬಾಕ್ಸ್​ ಆಫೀಸ್​ನಲ್ಲಿ ಭರ್ಜರಿ ಧೂಳೆಬ್ಬಿಸಿರುವ ಈ ಚಿತ್ರಕ್ಕೆ ಟಿವಿಯಲ್ಲೂ ಸಿಕ್ಕಾಪಟ್ಟೆ ಡಿಮ್ಯಾಂಡ್​ ಇದೆ.

  • TV9 Web Team
  • Published On - 19:10 PM, 7 Apr 2021
ಧ್ರುವ ಸರ್ಜಾ ನಟನೆಯ ಪೊಗರು ಸಿನಿಮಾ ಟಿವಿಯಲ್ಲಿ ಬರೋಕೆ ದಿನಾಂಕ ಫಿಕ್ಸ್​​
ಪೊಗರು ಚಿತ್ರದಲ್ಲಿ ಧ್ರುವ ಸರ್ಜಾ

ಫೆಬ್ರವರಿಯಲ್ಲಿ ಧ್ರುವ ಸರ್ಜಾ ನಟನೆಯ ಪೊಗರು ಸಿನಿಮಾ ತೆರೆಗೆ ಬಂದಿತ್ತು. ಈ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಒಳ್ಳೆಯ ಕಲೆಕ್ಷನ್​ ಮಾಡಿತು. ಈಗ ಈ ಸಿನಿಮಾವನ್ನು ಟಿವಿಯಲ್ಲಿ ಕಣ್ತುಂಬಿಕೊಳ್ಳೋಕೆ ದಿನಾಂಕ ಫಿಕ್ಸ್​ ಆಗಿದೆ. ಶೀಘ್ರವೇ ಸಿನಿಮಾ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದೆ.

ಕನ್ನಡದ ಖ್ಯಾತ ಮನರಂಜನಾ ವಾಹಿನಿ ‘ಉದಯ ಟಿವಿ’ಗೆ ಧ್ರುವ ಸರ್ಜಾ ನಟನೆಯ ‘ಪೊಗರು’ ಸಿನಿಮಾದ ಪ್ರಸಾರ ಹಕ್ಕುಗಳು ಮಾರಾಟ ಆಗಿತ್ತು. ಬಾಕ್ಸ್​ ಆಫೀಸ್​ನಲ್ಲಿ ಭರ್ಜರಿ ಧೂಳೆಬ್ಬಿಸಿರುವ ಈ ಚಿತ್ರಕ್ಕೆ ಟಿವಿಯಲ್ಲೂ ಸಿಕ್ಕಾಪಟ್ಟೆ ಡಿಮ್ಯಾಂಡ್​ ಇದೆ. ಪೊಗರು ಚಿತ್ರ ಟಿವಿಯಲ್ಲಿ ಯಾವಾಗ ಪ್ರಸಾರ ಆಗಲಿದೆ ಎನ್ನುವ ಮಾಹಿತಿ ಹೊರ ಬಿದ್ದಿರಲಿಲ್ಲ. ಈಗ ಈ ವಿಚಾರ ಅಧಿಕೃತವಾಗಿದೆ.

ಏಪ್ರಿಲ್​​ 13ರಂದು ಯುಗಾದಿ ಹಬ್ಬ ಇದೆ. ಇಂಥ ವಿಶೇಷ ಸಂದರ್ಭದಲ್ಲಿ ಹೊಸ ಸಿನಿಮಾಗಳನ್ನು ಪ್ರಸಾರ ಮಾಡುವ ಪರಿಪಾಠವನ್ನು ಉದಯ ವಾಹಿನಿ ಮೊದಲಿನಿಂದಲೂ ನಡೆಸಿಕೊಂಡು ಬಂದಿದೆ. ಹಾಗಾಗಿ, ಯುಗಾದಿ ಹಬ್ಬದ ಪ್ರಯಕ್ತ ಪೊಗರು ಪ್ರಸಾರ ಆಗುತ್ತಿದೆ.

ಧ್ರುವ ಸರ್ಜಾ ನಟನೆಯ ಪೊಗರು ಚಿತ್ರಕ್ಕೆ ರಶ್ಮಿಕಾ ಮಂದಣ್ಣ ನಾಯಕಿ. ನಂದಕಿಶೋರ್ ನಿರ್ದೇಶನದಲ್ಲಿ ಮೂಡಿಬಂದ ಈ ಸಿನಿಮಾದಲ್ಲಿ ಕೆಲವು ಆಕ್ಷೇಪಾರ್ಹ ಅಂಶಗಳಿವೆ ಎಂಬ ಕಾರಣಕ್ಕೆ ಸಾಕಷ್ಟು ವಿವಾದ ಕೂಡ ಆಗಿತ್ತು. ಎಲ್ಲರಿಗೂ ಈ ಚಿತ್ರ ನೋಡಲು ಸಾಧ್ಯವಾಗಿರಲಿಲ್ಲ. ಕೊರೊನಾ ವೈರಸ್​ ಹರಡವ ಭೀತಿಯ ಕಾರಣಕ್ಕೆ ಚಿತ್ರಮಂದಿರಕ್ಕೆ ಕಾಲಿಡಲು ಅನೇಕರು ಸಿದ್ಧವಿರಲಿಲ್ಲ. ಆದರೆ ಈಗ ಕಿರುತೆರೆಯಲ್ಲಿ ಪ್ರಸಾರ ಆಗಲಿರುವುದರಿಂದ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರನ್ನು ಈ ಚಿತ್ರ ತಲುಪಲಿದೆ.

ಇದನ್ನೂ ಓದಿ: ‘ಪೊಗರು’ ವಿವಾದ: ಟ್ವೀಟ್ ಮೂಲಕ ಬೇಷರತ್ ಕ್ಷಮೆ ಕೇಳಿದ ನಟ ಧ್ರುವ ಸರ್ಜಾ

ಪೊಗರು ಸುದ್ದಿಗೋಷ್ಠಿ; ನಮ್ಮಿಂದಾದ ತಪ್ಪು ಸರಿಪಡಿಸಿಕೊಂಡಿದ್ದೇವೆ, ಕತ್ತರಿ ಹಾಕಿದ ನಂತರ ಚಿತ್ರದ ಅವಧಿ 8 ನಿಮಿಷ ಕಡಿಮೆಯಾಗಿದೆ