ನಮ್ಮಪ್ಪನ ಬಗ್ಗೆ ಮಾತನಾಡೋಕೆ ನೀನ್ಯಾರೋ? ಪ್ರಶಾಂತ್​-ಮಂಜು ಜಗಳದಿಂದ ರಣರಂಗವಾದ ಮನೆ

ಮಂಜು ಹೀಗೆ ಹೇಳುವುದನ್ನೇ ಕಾಯುತ್ತಿದ್ದ ಪ್ರಶಾಂತ್​ ಸಂಬರಗಿ, ನಿನ್ನ ಡವ್​ಗೆ ಹೇಳಬೇಕಿತ್ತು ಎಂದಿದ್ದಾರೆ. ಇದಕ್ಕೆ ದಿವ್ಯಾ ಸುರೇಶ್​ ತಿರುಗಿ ಬಿದ್ದಿದ್ದಾರೆ.

  • TV9 Web Team
  • Published On - 15:44 PM, 7 Apr 2021
ನಮ್ಮಪ್ಪನ ಬಗ್ಗೆ ಮಾತನಾಡೋಕೆ ನೀನ್ಯಾರೋ? ಪ್ರಶಾಂತ್​-ಮಂಜು ಜಗಳದಿಂದ ರಣರಂಗವಾದ ಮನೆ
ಬಿಗ್​ ಬಾಸ್​ ಮನೆಯಲ್ಲಿ ಮಂಜು ಪಾವಗಡ-ಪ್ರಶಾಂತ್​ ನಡುವಿನ ಜಗಳ

ಬಿಗ್​ ಬಾಸ್​ ಮನೆಯಲ್ಲಿ ಸ್ಪರ್ಧಿಗಳು ಕಡಿಮೆ ಆಗುತ್ತಿದ್ದಾರೆ. ಇದರ ಜತೆಗೆ ಸ್ಪರ್ಧಿಗಳ ನಡುವೆ ಕಾಂಪಿಟೇಷನ್​ ಕೂಡ ಹೆಚ್ಚುತ್ತಿದೆ. ಯಾರನ್ನು ಹೇಗೆ ಮಣಿಸಬೇಕು ಎನ್ನುವ ಬಗ್ಗೆ ಲೆಕ್ಕಾಚಾರಗಳು ನಡೆಯುತ್ತಿವೆ. ಹೀಗಿರುವಾಗಲೇ ಮನೆಯಲ್ಲಿ ಜಗಳಗಳು ಕೂಡ ಹೆಚ್ಚುತ್ತಿದೆ. ಪ್ರಶಾಂತ್​ ಸಂಬರಗಿ ಹಾಗೂ ಮಂಜು ಪಾವಗಡ ನಡುವೆ ಘನಘೋರ ವಾಕ್​ಸಮರ ನಡೆದು ಹೋಗಿದೆ.

ಬಿಗ್ ಬಾಸ್​ ಮನೆಗೆ ವೈಲ್ಡ್​ ಕಾರ್ಡ್​ ಮೂಲಕ ಚಕ್ರವರ್ತಿ ಚಂದ್ರಚೂಡ್​ ಎಂಟ್ರಿ ಕೊಟ್ಟ ನಂತರದಲ್ಲಿ ಪ್ರಶಾಂತ್​ ಸಂಬರಗಿ ಶಕ್ತಿ ಹೆಚ್ಚಿದೆ. ಇಬ್ಬರೂ ಸೇರಿ ಮನೆಯ ಎಲ್ಲಾ ಸದಸ್ಯರ ಫೇವರಿಟ್​ ಆಗಿರುವ ಮಂಜು ಶಕ್ತಿ ಕುಗ್ಗಿಸಲು ಪ್ಲ್ಯಾನ್​ ರೂಪಿಸುತ್ತಿದ್ದಾರೆ. ಇತ್ತೀಚೆಗೆ, ಮಂಜು ಆಪ್ತೆ ಎನಿಸಿಕೊಂಡಿರುವ ದಿವ್ಯಾ ಸುರೇಶ್​ ಬಳಿ ಪ್ರಶಾಂತ್​ ಹೋಗಿ ಇಲ್ಲದ್ದನ್ನು ಇದ್ದ ರೀತಿಯಲ್ಲಿ ಹೇಳಿದ್ದರು. ಕೊನೆಗೆ ಶಮಂತ್ ಬಳಿ ಹೋಗಿ, ದಿವ್ಯಾ ವಿರುದ್ಧವೇ ಮಾತನಾಡಿದ್ದರು.

ಈಗ ದಿವ್ಯಾ ಹಾಗೂ ಮಂಜು ಇಬ್ಬರನ್ನೂ ಕುಗ್ಗಿಸುವ ಪ್ರಯತ್ನವನ್ನು ಪ್ರಶಾಂತ್​ ಮಾಡಿದ್ದಾರೆ. ಕಲರ್ಸ್​ ಕನ್ನಡ ವಾಹಿನಿ ಸಾಮಾಜಿಕ ಜಾಲತಾಣದಲ್ಲಿ ಹೊಸ ಪ್ರೋಮೋ ಒಂದನ್ನು ಹಂಚಿಕೊಂಡಿದೆ. ಈ ಪ್ರೋಮೋದಲ್ಲಿ ದಿವ್ಯಾ ವಿಚಾರವಾಗಿ ಪ್ರಶಾಂತ್​ ಹಾಗೂ ಮಂಜು ನಡುವೆ ಜಗಳ ನಡೆದಿರುವುದು ಕಂಡು ಬಂದಿದೆ.

ರಾತ್ರಿ ಸಮಯದಲ್ಲಿ ಪ್ರಶಾಂತ್​ ಸಂಬರಗಿ, ಚಕ್ರವರ್ತಿ ಚಂದ್ರಚೂಡ್​ ಸ್ವಿಮ್ಮಿಂಗ್​ಪೂಲ್​ನಲ್ಲಿ ಸ್ನಾನ ಮಾಡುತ್ತಿದ್ದರು. ಆಗ ಸೌಂಡ್​ ಸ್ವಲ್ಪ ಕಡಿಮೆ ಇದ್ದರೆ ಉತ್ತಮವಾಗಿರುತ್ತದೆ ಎಂದು ದಿವ್ಯಾ ಸುರೇಶ್​ ಹೇಳಿದ್ದಾರೆ. ಆಗ, ಮಂಜು ಪಾವಗಡ ಬೆಡ್​ರೂಂನಲ್ಲಿ ಗಲಾಟೆ ಮಾಡಿದ ವಿಚಾರವನ್ನು ಪರೋಕ್ಷವಾಗಿ ತೆಗೆದುಕೊಂಡು ಚಂದ್ರಚೂಡ್​ ಮಾತನಾಡಿದ್ದಾರೆ. ಬೆಡ್​ರೂಂನಲ್ಲಿ ಗಲಾಟೆ ಮಾಡಿದರೆ ಹೇಳಬೇಕು, ಇಲ್ಲಲ್ಲ ಎಂದು ಚಂದ್ರಚೂಡ್​ ಮಂಜುಗೆ ಟಾಂಗ್ ಕೊಟ್ಟಿದ್ದಾರೆ. ಆಗ, ಮಂಜು, ನಾನೇನಾದರೂ ಹೇಳಿದ್ದೀನಾ ಎಂದು ಪ್ರಶ್ನೆ ಮಾಡಿದ್ದಾರೆ.

ಮಂಜು ಹೀಗೆ ಹೇಳುವುದನ್ನೇ ಕಾಯುತ್ತಿದ್ದ ಪ್ರಶಾಂತ್​ ಸಂಬರಗಿ, ನಿನ್ನ ಡವ್​ಗೆ ಹೇಳಬೇಕಿತ್ತು ಎಂದಿದ್ದಾರೆ. ಇದಕ್ಕೆ ದಿವ್ಯಾ ಸುರೇಶ್​ ತಿರುಗಿ ಬಿದ್ದಿದ್ದಾರೆ. ಆಗ ಪ್ರಶಾಂತ್​, ಡವ್​ ಅಂತಾನೂ ಹೇಳ್ತೀನಿ, ಲವರ್​ ಅಂತಾನೂ ಹೇಳ್ತೀನಿ ಎಂದು ಆವಾಜ್​ ಹಾಕಿದ್ದಾರೆ.

ಇದಕ್ಕೆ ಸಿಟ್ಟಾದ ಮಂಜು, ಮಾವ ಎಂದು ಪ್ರಶಾಂತ್​ ಅವರನ್ನು ಸಂಬೋಧಿಸುತ್ತಿದ್ದಂತೆ ಅವರು ಸಿಟ್ಟಾಗಿದ್ದಾರೆ. ಯಾರು ಮಾವ? ನಿಮ್ಮಪ್ಪ ಮಾವ ಎಂದು ಸಂಬರಗಿ ಕೂಗಾಡಿದ್ದಾರೆ. ನಮ್ಮಪ್ಪನ ಬಗ್ಗೆ ಮಾತನಾಡೋಕೆ ನೀನ್ಯಾರೋ ಎಂದು ಮಂಜು ಪ್ರಶ್ನೆ ಮಾಡಿದ್ದಾರೆ. ಇವರ ನಡುವೆ ಏನೆಲ್ಲ ಆಯ್ತು ಎಂಬುದನ್ನು ತಿಳಿದುಕೊಳ್ಳೋಕೆ ಇಂದಿನ (ಏಪ್ರಿಲ್​ 7) ಎಪಿಸೋಡ್​ ನೋಡಬೇಕು.

ಇದನ್ನೂ ಓದಿ: ಪ್ರಶಾಂತ್​ ಸಂಬರಗಿ ಎದುರು ತಪ್ಪು ಒಪ್ಪಿಕೊಂಡ ನಿಧಿ; ದ್ವೇಷ ಕಳೆದುಕೊಂಡು ಒಂದಾದರು!

ದಿವ್ಯಾ ಉರುಡುಗ ನನಗೆ ತಂಗಿ ಇದ್ದಂತೆ; ಎಲ್ಲರೆದುರು ಒಪ್ಪಿಕೊಂಡ ಪ್ರಶಾಂತ್​ ಸಂಬರಗಿ