ನಿಮ್ಮೇಲೆ ಕ್ರಶ್​ ಆಗಿದೆ; ವೈಷ್ಣವಿ ಎದುರು ಫೀಲಿಂಗ್ಸ್​ ಹೇಳಿಕೊಂಡ ರಘು!

ಅಮ್ಮನ ಎದುರು ಹೇಳಿಕೊಳ್ಳಬೇಕು ಎಂದುಕೊಂಡಿದ್ದನ್ನು ಇತ್ತೀಚೆಗೆ ವೈಷ್ಣವಿ ಎದುರು ಹಂಚಿಕೊಂಡಿದ್ದರು ರಘು ಗೌಡ. ಅಷ್ಟೇ ಅಲ್ಲ, ಗಳಗಳನೆ ಅತ್ತಿದ್ದರು. ಇದನ್ನು ನೋಡಿ ವೈಷ್ಣವಿ ಕಣ್ಣಲ್ಲೂ ನೀರು ಬಂದಿತ್ತು.

  • TV9 Web Team
  • Published On - 17:13 PM, 8 Apr 2021
ನಿಮ್ಮೇಲೆ ಕ್ರಶ್​ ಆಗಿದೆ; ವೈಷ್ಣವಿ ಎದುರು ಫೀಲಿಂಗ್ಸ್​ ಹೇಳಿಕೊಂಡ ರಘು!
ರಘು-ವೈಷ್ಣವಿ ಗೌಡ

ಬಿಗ್​ ಬಾಸ್​ ಮನೆಯಲ್ಲಿ ಅತಿ ಸೈಲೆಂಟ್​ ಆಗಿರುವ ಸ್ಪರ್ಧಿ ಎಂದಾಗ ನೆನಪಿಗೆ ಬರೋದು ವೈಷ್ಣವಿ ಗೌಡ. ಅವರು ಸೈಲೆಂಟ್​ ಆಗಿದ್ದುಕೊಂಡೇ ಎಲ್ಲರನ್ನೂ ಆಕರ್ಷಿಸುತ್ತಿದ್ದಾರೆ. ಇದು ಮನೆಯವರ ಗಮನಕ್ಕೂ ಬಂದಿದೆ. ಏಕೆಂದರೆ, ಯಾರೊಬ್ಬರೂ ಈವರೆಗೆ ಅವರ ವಿರುದ್ಧ ತಿರುಗಿಬಿದ್ದಿಲ್ಲ. ಜತೆಗೆ, ಸಮಯ ಸಿಕ್ಕಾಗೆಲ್ಲಾ ಒಬ್ಬಲ್ಲಾ ಒಬ್ಬರು ವೈಷ್ಣವಿ ಅವರನ್ನು ಹೊಗಳುತ್ತಲೇ ಇರುತ್ತಾರೆ. ಈ ಬಾರಿ ರಘು ಗೌಡ ಅವರ ಸರದಿ! ಅವರು ವೈಷ್ಣವಿಯನ್ನು ಕೇವಲ ಹೊಗಳುವುದು ಮಾತ್ರವಲ್ಲ, ಕ್ರಶ್​​ ಆಗಿರುವ ಬಗ್ಗೆಯೂ ಹೇಳಿಕೊಂಡಿದ್ದಾರೆ.

ಆರಂಭದ ವಾರಗಳಲ್ಲಿ ಬಿಗ್​ ಬಾಸ್​ ಜೋಡಿ ಟಾಸ್ಕ್​ ಒಂದನ್ನು ನೀಡಿತ್ತು. ಈ ಟಾಸ್ಕ್​ನಲ್ಲಿ ವೈಷ್ಣವಿ ಹಾಗೂ ರಘು ಗೌಡ ಜೋಡಿ ಆಗಿದ್ದರು. ವೈಷ್ಣವಿ-ರಘು ಟೀಂ ಆದ ನಂತರದಲ್ಲಿ ಇಬ್ಬರೂ ತುಂಬಾನೇ ಕ್ಲೋಸ್​ ಆಗಿದ್ದರು. ಇದಕ್ಕೆ ಕಾರಣ, ಆಲೋಚನೆಗಳು. ರಘು ಹಾಗೂ ವೈಷ್ಣವಿ ಆಲೋಚನೆಗಳು ಹೊಂದಾಣಿಕೆ ಆಗಿದ್ದವು. ಹೀಗಾಗಿ, ಇಬ್ಬರೂ ಪರಸ್ಪರ ಕಷ್ಟ ಸುಖ ಹಂಚಿಕೊಂಡಿದ್ದರು.

ಅಮ್ಮನ ಎದುರು ಹೇಳಿಕೊಳ್ಳಬೇಕು ಎಂದುಕೊಂಡಿದ್ದನ್ನು ಇತ್ತೀಚೆಗೆ ವೈಷ್ಣವಿ ಎದುರು ಹಂಚಿಕೊಂಡಿದ್ದರು ರಘು ಗೌಡ. ಅಷ್ಟೇ ಅಲ್ಲ, ಗಳಗಳನೆ ಅತ್ತಿದ್ದರು. ಇದನ್ನು ನೋಡಿ ವೈಷ್ಣವಿ ಕಣ್ಣಲ್ಲೂ ನೀರು ಬಂದಿತ್ತು. ಇದಾದ ಮೇಲೆ ಇಬ್ಬರ ಬಾಂಡ್​ ಮತ್ತಷ್ಟು ಗಟ್ಟಿಯಾಗಿದೆ. ಈಗ ರಘು ಗೌಡ ಅಚ್ಚರಿಯ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ.

ರಘುಗೆ ವೈಷ್ಣವಿ ಮೇಲೆ ಆರಂಭದಲ್ಲೇ ಕ್ರಶ್​​ ಆಗಿತ್ತಂತೆ. ಅದನ್ನು ಒಂದು ತಿಂಗಳಾದ ನಂತರದಲ್ಲಿ ಹೇಳಿಕೊಂಡಿದ್ದಾರೆ. ರಘು, ನಿಧಿ ಸುಬ್ಬಯ್ಯ ಹಾಗೂ ವೈಷ್ಣವಿ ಕೂತು ಮಾತನಾಡುತ್ತಿದ್ದರು. ಈ ವೇಳೆ ರಘು, ಮೊದಲ ಹಾಗೂ ಕೊನೆಯ ಕ್ರಶ್​ ನೀವೇನೆ ಎಂದು ವೈಷ್ಣವಿ ಬಳಿ ಹೇಳಿಕೊಂಡಿದ್ದಾರೆ. ಆದರೆ, ವೈಷ್ಣವಿ ಇದನ್ನು ನಂಬಿಯೇ ಇಲ್ಲ.

ವೈಷ್ಣವಿ ಅವರು ಬೆಳಗ್ಗೆ ಬೇಗ ಎಳುತ್ತಾರೆ ಎನ್ನುವುದು ಗೊತ್ತು. ಹೀಗಾಗಿ, ನಾನು ಕೂಡ ಬೇಗ ಏಳುತ್ತೇನೆ. ಅವರ ಜತೆ ಮಾತನಾಡುತ್ತೇನೆ. ಇದರಿಂದ ನನ್ನ ದಿನ ಉತ್ತಮವಾಗಿ ಆರಂಭವಾಗುತ್ತದೆ. ಇದಕ್ಕೆ ಕಾರಣ ಗೊತ್ತಿಲ್ಲ. ಆದರೆ, ನಿಮ್ಮ ಜತೆ ಮಾತನಾಡುವುದು ಖುಷಿ ನೀಡುತ್ತದೆ ಎಂದರು.

ಇದನ್ನೂ ಓದಿ: ಒಮ್ಮೊಮ್ಮೆ ಹುಟ್ಟಲೇ ಬಾರದಿತ್ತು ಅನಿಸುತ್ತೆ; ವೈಷ್ಣವಿಯಲ್ಲಿ ತಾಯಿಯನ್ನು ಕಂಡು ಅತ್ತ ರಘು!