ಎರಡನೇ ವಾರವೂ ಎರಡಂಕಿ ಟಿಆರ್ಪಿ ಪಡೆದ ‘ಕರ್ಣ’; ಟಾಪ್ ಐದು ಧಾರಾವಾಹಿಗಳಿವು
Karna Serial: ಜೀ ಕನ್ನಡ ವಾಹಿನಿಯ "ಕರ್ಣ" ಧಾರಾವಾಹಿ ಟಿಆರ್ಪಿ ರೇಟಿಂಗ್‌ನಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ. ಕಿರಣ್ ರಾಜ್, ಭವ್ಯಾ ಗೌಡ ಮತ್ತು ನಮ್ರತಾ ಗೌಡ ಅವರ ಅಭಿನಯ ಈ ಯಶಸ್ಸಿಗೆ ಕಾರಣ.ಈ ಧಾರಾವಾಹಿಯಲ್ಲಿ ಹಾಡು ಹಾಗೂ ಫೈಟ್ಗಳು ಕೂಡ ಇದ್ದು, ವಿಶೇಷ ಎನಿಸಿಕೊಂಡಿದೆ.

ಜೀ ಕನ್ನಡದಲ್ಲಿ ಹೊಸದಾಗಿ ಆರಂಭ ಆದ ‘ಕರ್ಣ’ ಧಾರಾವಾಹಿಯನ್ನು (Karna Serial) ಜನರು ಮೆಚ್ಚಿಕೊಂಡಿದ್ದಾರೆ. ಕಿರಣ್ ರಾಜ್, ಭವ್ಯಾ ಗೌಡ ಹಾಗೂ ನಮ್ರತಾ ಗೌಡ ಅವರು ಈ ಧಾರಾವಾಹಿಯಲ್ಲಿ ಮುಖ್ಯಭೂಮಿಕೆ ನಿರ್ವಹಿಸಿದ್ದಾರೆ. ಈ ಧಾರಾವಾಹಿ ಈಗ ಟಿಆರ್ಪಿಯಲ್ಲಿ ಪ್ರಥಮ ಸ್ಥಾನ ಪಡೆದಿದೆ. ಅಷ್ಟೇ ಅಲ್ಲ ಈ ಧಾರಾವಾಹಿಗೆ ಎರಡಂಕಿ ಟಿಆರ್ಪಿ ಸಿಕ್ಕಿದೆ ಅನ್ನೋದು ವಿಶೇಷ. ಟಾಪ್ ಐದು ಧಾರಾವಾಹಿಗಳ ವಿವರ ಇಲ್ಲಿದೆ.
‘ಕರ್ಣ’ ಧಾರಾವಾಹಿ ಆರಂಭಕ್ಕೆ ಕೆಲವು ಅಡೆತಡೆಗಳು ಎದುರಾದವು. ಇದೆಲ್ಲವನ್ನೂ ಮೆಟ್ಟಿ ನಿಂತು ಈ ಧಾರಾವಾಹಿ ಪ್ರಸಾರ ಆರಂಭಿಸಿತು. ಈಗ ಧಾರಾವಾಹಿ ಎಲ್ಲ ಕಡೆಗಳಲ್ಲೂ ಮೆಚ್ಚುಗೆಯನ್ನು ಪಡೆದಿದೆ. ಈ ಧಾರಾವಾಹಿ 10+ ಟಿಆರ್ಪಿ ಪಡೆದುಕೊಂಡಿದೆ. ಈ ಮೂಲಕ ಪ್ರಸಾರ ಆರಂಭಿಸಿದ ಎರಡನೇ ವಾರವೂ ಧಾರಾವಾಹಿ ತನ್ನ ಪಾರುಪತ್ಯ ಸಾಧಿಸಿದೆ. ಇದು ತಂಡದ ಖುಷಿ ಹೆಚ್ಚಿಸಿದೆ.
ಹೊಸ ಧಾರಾವಾಹಿ ಆದ ಕಾರಣ ಆರಂಭದಲ್ಲಿ ಒಳ್ಳೆಯ ಟಿಆರ್ಪಿ ಬರುತ್ತದೆ. ಆದರೆ, ಅದನ್ನು ಮುಂದಿನ ದಿನಗಳಲ್ಲಿ ಕಾಪಾಡಿಕೊಂಡು ಹೋಗೋದು ದೊಡ್ಡ ಚಾಲೆಂಜ್. ಆ ಲಾಚೆಂಜ್ನ ‘ಕರ್ಣ’ ಧಾರಾವಾಹಿ ತಂಡ ಹೇಗೆ ನಿಭಾಯಿಸುತ್ತದೆ ಅನ್ನೋದು ಮುಖ್ಯವಾಗುತ್ತದೆ.
ಎರಡನೇ ಸ್ಥಾನದಲ್ಲಿ ‘ಅಣ್ಣಯ್ಯ’ ಧಾರಾವಾಹಿ ಇದೆ. ವಿಕಾಶ್ ಉತ್ತಯ್ಯ, ನಿಶಾ ರವಿಕೃಷ್ಣನ್ ಮೊದಲಾದವರು ನಟಿಸಿದ್ದಾರೆ. ಈ ಧಾರವಾಹಿಯನ್ನು ಜನರು ಮೆಚ್ಚಿಕೊಂಡಿದ್ದಾರೆ. ಮೂರನೇ ಸ್ಥಾನದಲ್ಲಿ ‘ಲಕ್ಷ್ಮೀ ನಿವಾಸ’ ಧಾರಾವಾಹಿ ಇದೆ. ಈ ಧಾರಾವಾಹಿ ಕೂಡ ಒಳ್ಳೆಯ ರೇಟಿಂಗ್ ಪಡೆದು ಮುಂದೆ ಸಾಗುತ್ತಿದೆ.
ಇದನ್ನೂ ಓದಿ: ಕಿರಣ್ ರಾಜ್ ಸಿನಿಮಾ ಜೊತೆ ‘ಕರ್ಣ’ ಧಾರಾವಾಹಿ ಮಾಡ್ತಿರೋದೇಕೆ? ಆ ವಿಶೇಷ ವ್ಯಕ್ತಿಯೇ ಕಾರಣ
ನಾಲ್ಕನೇ ಸ್ಥಾನದಲ್ಲಿ ‘ನಾನಿನ್ನ ಬಿಡಲಾರೆ’ ಧಾರಾವಾಹಿ ಇದೆ. ಈ ಧಾರಾವಾಹಿ ಹಾರರ್ ಶೈಲಿಯಲ್ಲಿ ಮೂಡಿ ಬಂದಿದ್ದು, ಜನರಿಂದ ಮೆಚ್ಚುಗೆ ಪಡೆಯುತ್ತಿದೆ. ಮಾಟ-ಮಂತ್ರಗಳ ವಿಚಾರಗಳನ್ನೂ ಇಲ್ಲಿ ಹೇಳಲಾಗುತ್ತಿದೆ. ಐದನೇ ಸ್ಥಾನದಲ್ಲಿ ‘ಅಮೃತಧಾರೆ’ ಧಾರಾವಾಹಿ ಇದೆ. ಈ ಧಾರಾವಾಹಿ ಇತ್ತೀಚೆಗೆ ಸಾಕಷ್ಟು ಟ್ವಿಸ್ಟ್ಗಳನ್ನು ಪಡೆದು ಸಾಗುತ್ತಿದೆ. ಟಾಪ್ ಐದರಲ್ಲಿರುವ ಎಲ್ಲಾ ಧಾರಾವಾಹಿಗಳು ಜೀ ಕನ್ನಡದವೇ ಅನ್ನೋದು ವಿಶೇಷ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








