KP Choudhary: ಗೋವಾದಲ್ಲಿ ಆತ್ಮಹತ್ಯೆ ಮಾಡಿಕೊಂಡ ನಿರ್ಮಾಪಕ ಕೆ.ಪಿ. ಚೌಧರಿ
ಟಾಲಿವುಡ್ನ ನಿರ್ಮಾಪಕ ಕೆ.ಪಿ. ಚೌಧರಿ ಆತ್ಯಹತ್ಯೆಗೆ ಶರಣಾಗಿದ್ದಾರೆ. ಗೋವಾದಲ್ಲಿ ಅವರ ಶವ ಪತ್ತೆ ಆಗಿದೆ. ‘ಕಬಾಲಿ’ ಸಿನಿಮಾವನ್ನು ತೆಲುಗಿನಲ್ಲಿ ಬಿಡುಗಡೆ ಮಾಡುವ ಮೂಲಕ ಕೆ.ಪಿ. ಚೌಧರಿ ಸುದ್ದಿ ಆಗಿದ್ದರು. ಬಳಿಕ ಡ್ರಗ್ಸ್ ಕೇಸ್ನಲ್ಲಿ ಅವರ ಹೆಸರು ತಳುಕುಹಾಕಿಕೊಂಡಿತ್ತು. ಸೆಲೆಬ್ರಿಟಿಗಳಿಗೆ ಮಾದಕ ದ್ರವ್ಯ ಪೂರೈಕೆ ಮಾಡಿದ್ದ ಆರೋಪ ಅವರ ಮೇಲಿತ್ತು.

ತೆಲುಗು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದ ನಿರ್ಮಾಪಕ ಕೆ.ಪಿ. ಚೌಧರಿ ಅವರು ನಿಧನರಾಗಿದ್ದಾರೆ. ಗೋವಾದಲ್ಲಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೋಮವಾರ (ಫೆಬ್ರವರಿ 3) ಈ ದುರ್ಘಟನೆ ನಡೆದಿದೆ. ಸುಂಕರ ಕೃಷ್ಣ ಪ್ರಸಾದ್ ಚೌಧರಿ ಎಂಬುದು ಅವರ ಪೂರ್ಣ ಹೆಸರು. ಆದರೆ ಕೆ.ಪಿ. ಚೌಧರಿ ಎಂದು ಅವರು ಪರಿಚಿತರಾಗಿದ್ದರು. ವೈಯಕ್ತಿಕ ಜೀವನದ ಮತ್ತು ವೃತ್ತಿ ಬದುಕಿನಲ್ಲಿ ಅವರು ಹಲವು ವಿವಾದಗಳನ್ನು ಮಾಡಿಕೊಂಡಿದ್ದರು. ಈಗ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ಕಾರಣ ಏನು ಎಂಬುದು ತಿಳಿದು ಬಂದಿಲ್ಲ. ತನಿಖೆ ಬಳಿಕ ಸತ್ಯ ಹೊರಬರಬೇಕಿದೆ.
ರಜನಿಕಾಂತ್ ನಟನೆಯ ‘ಕಬಾಲಿ’ ಸಿನಿಮಾ 2016ರಲ್ಲಿ ಬಿಡುಗಡೆ ಆಗಿತ್ತು. ತಮಿಳಿನ ಈ ಸಿನಿಮಾದ ತೆಲುಗು ವರ್ಷನ್ ಅನ್ನು ಕೆ.ಪಿ. ಚೌಧರಿ ಅವರು ಬಿಡುಗಡೆ ಮಾಡಿದ್ದರು. ಭಾರಿ ಮೊತ್ತದ ಹಣ ನೀಡಿ ಅವರು ವಿತರಣೆ ಹಕ್ಕುಗಳನ್ನು ಖರೀದಿಸಿದ್ದರು. ಆ ಮೂಲಕ ಸೆನ್ಸೇಷನ್ ಸೃಷ್ಟಿ ಮಾಡಿದ್ದರು. ಚಿತ್ರರಂಗದಲ್ಲಿ ಕೆ.ಪಿ. ಚೌಧರಿ ಅವರು ಸಾಕಷ್ಟು ಏಳು-ಬೀಳುಗಳನ್ನು ಕಂಡಿದ್ದರು.
ಡ್ರಗ್ಸ್ ಪ್ರಕರಣದಲ್ಲಿ ಕೂಡ ಕೆ.ಪಿ. ಚೌಧರಿ ಅವರು ಕುಖ್ಯಾತಿ ಪಡೆದಿದ್ದರು. ಟಾಲಿವುಡ್ನ ಡ್ರಗ್ಸ್ ಜಾಲದ ಜೊತೆ ಅವರು ನಂಟು ಹೊಂದಿದ್ದರು ಎಂಬ ಆರೋಪ ಇತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 2023ರಲ್ಲಿ ಅವರನ್ನು ಬಂಧಿಸಲಾಗಿತ್ತು. ತೆಲುಗು ಚಿತ್ರರಂಗ ಮತ್ತು ತಮಿಳು ಚಿತ್ರರಂಗದ ಹಲವು ಸೆಲೆಬ್ರಿಟಿಗಳಿಗೆ ಅವರು ಮಾದಕ ದ್ರವ್ಯ ಪೂರೈಕೆ ಮಾಡಿದ್ದರು ಎಂಬುದು ತನಿಖೆ ಮೂಲಕ ಬೆಳಕಿಗೆ ಬಂದಿತ್ತು.
ಇದನ್ನೂ ಓದಿ: ‘ಒಲವಿನ ಉಡುಗೊರೆ ಕೊಡಲೇನು..’ ಹಾಡಿನ ಗಾಯಕ ಪಿ. ಜಯಚಂದ್ರನ್ ನಿಧನ
ಬೇರೆ ಉದ್ಯಮದ ವ್ಯಕ್ತಿಗಳಿಗೆ ಕೂಡ ಕೆ.ಪಿ. ಚೌಧರಿ ಡ್ರಗ್ಸ್ ಪೂರೈಕೆ ಮಾಡಿದ್ದರು. ಇಷ್ಟೆಲ್ಲ ಅನೈತಿಕ ವ್ಯವಹಾರಗಳಲ್ಲಿ ತೊಡಗಿಕೊಂಡಿದ್ದರೂ ಕೂಡ ಅವರ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದರು. ಎಲ್ಲ ಕಡೆಗಳಲ್ಲಿ ಸಾಲ ಮಾಡಿಕೊಂಡಿದ್ದರು. ಸಾಲ ಕೊಟ್ಟವರಿಂದ ಒತ್ತಡ ಬರುತ್ತಿತ್ತು. ಚಿತ್ರರಂಗದಲ್ಲಿ ಲಾಭ ಕಾಣದೇ ಇದ್ದಾಗ ಅವರು ಗೋವಾದಲ್ಲಿ ಪಬ್ ಶುರು ಮಾಡಿದ್ದರು. ಅದೇ ಪಬ್ನಲ್ಲಿ ಸೆಲೆಬ್ರಿಟಿಗಳಿಗೆ ಡ್ರಗ್ಸ್ ನೀಡುತ್ತಿದ್ದರು ಎಂಬ ಆರೋಪ ಕೇಳಿಬಂದಿತ್ತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.