Power star Pawan Kalyan tested Positive : ನಟ ಪವನ್ ಕಲ್ಯಾಣ್‌ಗೆ ಕೊರೊನಾ ಪಾಸಿಟಿವ್

ಪವರ್ ಸ್ಟಾರ್ ಪವನ್ ಕಲ್ಯಾಣ್‌ಗೆ ಕೊರೊನಾ ಸೋಂಕು ತಗುಲಿದೆ. ಈ ಬಗ್ಗೆ ಕೊರೊನಾ ಟೆಸ್ಟ್‌ ಮಾಡಿಸಿದ್ದ ಪವನ್‌ ಕಲ್ಯಾಣ್‌ಗೆ ಈಗ ಕೊರೊನಾ ಪಾಸಿಟಿವ್ ಆಗಿದ್ದು ಕನ್‌ಫರ್ಮ್‌ ಆಗಿದೆ. ಪವನ್ ಕಲ್ಯಾಣ್ ಸುತ್ತ ಮುತ್ತಲಿರುವ ಸಿಬ್ಬಂದಿಗಳಿಗೆ ಈ ಮೊದಲು ಕೊರೊನಾ ಪಾಸಿಟವ್ ಆಗಿತ್ತು. ಹೀಗಾಗಿ ಕಳೆದ ಹತ್ತು ದಿನಗಳಿಂದ ಹೋಮ್ ಕ್ಯಾರಂಟೈನ್‌ನಲ್ಲಿದ್ರು ಪವನ್ ಕಲ್ಯಾಣ್. ಆದ್ರೀಗ ಕಾರ್ಪೋರೇಟ್ ಆಸ್ಪತ್ರೆಯಲ್ಲಿ ಟೆಸ್ಟ್ ಮಾಡಿಸಿದ್ದು, ಕೊರೊನಾ ಪಾಸಿಟಿವ್ ಬಂದಿದೆ. ಸದ್ಯ ಡಾಕ್ಟರ್‌ಗಳು ಪವನ್‌ಗೆ ಚಿಕಿತ್ಸೆ ನೀಡ್ತಿದ್ದು, ಅಭಿಮಾನಿಗಳು ಆತಂಕ ಪಡುವ ಅಗತ್ಯವಿಲ್ಲವೆಂದು ಜನಸೇನಾ ಪತ್ರದಲ್ಲಿ ಪ್ರಕಟಿಸಿದ್ದಾರೆ.

  • TV9 Web Team
  • Published On - 3:44 AM, 17 Apr 2021