‘ಎಲ್ಲಿ ಮುಟ್ಟಿದ ಅಂತ ಹೇಳಲೂ ಅಸಹ್ಯವಾಗುತ್ತೆ’; ಸಿನಿಮಾ ಪ್ರಚಾರಕ್ಕೆ ತೆರಳಿದ ನಟಿಯರ ಮೇಲೆ ಅಭಿಮಾನಿಯಿಂದ ಲೈಂಗಿಕ ದೌರ್ಜನ್ಯ

ಮಂಗಳವಾರ (ಸೆಪ್ಟೆಂಬರ್ 28) ನಟಿಯರು ಕೋಯಿಕ್ಕೋಡ್​ನ ಮಾಲ್​ ಒಂದಕ್ಕೆ ತೆರಳಿದ್ದರು. ಇವರು ಸಿನಿಮಾ ಪ್ರಚಾರ ಮಾಡುತ್ತಿದ್ದಾಗ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದರು. ಅಲ್ಲಿ ಅಹಿತಕರ ಘಟನೆ ನಡೆದಿದೆ.

‘ಎಲ್ಲಿ ಮುಟ್ಟಿದ ಅಂತ ಹೇಳಲೂ ಅಸಹ್ಯವಾಗುತ್ತೆ’; ಸಿನಿಮಾ ಪ್ರಚಾರಕ್ಕೆ ತೆರಳಿದ ನಟಿಯರ ಮೇಲೆ ಅಭಿಮಾನಿಯಿಂದ ಲೈಂಗಿಕ ದೌರ್ಜನ್ಯ
ನಿಮಾ ಪ್ರಚಾರಕ್ಕೆ ತೆರಳಿದ ನಟಿಯರ ಮೇಲೆ ಅಭಿಮಾನಿಯಿಂದ ಲೈಂಗಿಕ ದೌರ್ಜನ್ಯ
TV9kannada Web Team

| Edited By: Rajesh Duggumane

Sep 28, 2022 | 3:21 PM

ನಟ-ನಟಿಯರು ಸಿನಿಮಾ ಪ್ರಚಾರಕ್ಕೆ (Film Promotion) ಸಾರ್ವಜನಿಕ ಸ್ಥಳಗಳಿಗೆ ತೆರಳಿದಾಗ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಸೇರುತ್ತಾರೆ. ಅಭಿಮಾನಿಗಳನ್ನು ಕಂಟ್ರೋಲ್ ಮಾಡುವುದು ಅಷ್ಟು ಸುಲಭದ ಮಾತಲ್ಲ. ಈ ರೀತಿ ಗುಂಪು ಸೇರಿದಾಗ ಕೆಲವೊಮ್ಮೆ ಅಹಿತಕರ ಘಟನೆ ನಡೆದ ಉದಾಹರಣೆಯೂ ಇದೆ. ಈಗ ಇದೇ ಮಾದರಿಯ ಘಟನೆ ನಡೆದಿದೆ. ಸಿನಿಮಾ ಪ್ರಚಾರಕ್ಕೆ ತೆರಳಿದ ಮಲಯಾಳಂನ ಇಬ್ಬರು ನಟಿಯರ ಮೇಲೆ ಲೈಂಗಿಕ ದೌರ್ಜನ್ಯ  ನಡೆದಿದೆ. ಅಭಿಮಾನಿಯೋರ್ವ ನಟಿಯನ್ನು ಎಳೆದುಕೊಂಡು ಖಾಸಗಿ ಭಾಗಗಳನ್ನು ಮುಟ್ಟಿದ್ದಾನೆ. ಈ ಬಗ್ಗೆ ನಟಿಯರು ಸೋಶಿಯಲ್ ಮೀಡಿಯಾದಲ್ಲಿ (Social Media) ಬರೆದುಕೊಂಡಿದ್ದಾರೆ.

ಮಂಗಳವಾರ (ಸೆಪ್ಟೆಂಬರ್ 28) ನಟಿಯರು ಕೋಯಿಕ್ಕೋಡ್​ನ ಮಾಲ್​ ಒಂದಕ್ಕೆ ತೆರಳಿದ್ದರು. ಇವರು ಸಿನಿಮಾ ಪ್ರಚಾರ ಮಾಡುತ್ತಿದ್ದಾಗ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದರು. ಅಲ್ಲಿ ಅಹಿತಕರ ಘಟನೆ ನಡೆದಿದೆ. ಈ ಕೆಟ್ಟ ಅನುಭವದ ಬಗ್ಗೆ ನಟಿಯರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಬೇಸರ ಹೊರಹಾಕಿದ್ದಾರೆ. ‘ಅಭಿಮಾನಿ ಎಲ್ಲಿ ಮುಟ್ಟಿದ ಎಂದು ಹೇಳಲೂ ಅಸಹ್ಯವಾಗುತ್ತದೆ’ ಎಂದು ನಟಿ ಬೇಸರ ಹೊರಹಾಕಿದ್ದಾರೆ.

‘ಕೋಯಿಕ್ಕೋಡ್ ನಾನು ಅತಿಯಾಗಿ ಪ್ರೀತಿಸುವ ನಗರ. ಆದರೆ ಇಂದು ರಾತ್ರಿ ಕಾರ್ಯಕ್ರಮ ಮುಗಿಸಿ ಬರುವಾಗ ಗುಂಪಿನಲ್ಲಿದ್ದ ವ್ಯಕ್ತಿಯೋರ್ವ ನನ್ನನ್ನು ಎಳೆದುಕೊಂಡ. ಎಲ್ಲಿ ಮುಟ್ಟಿದ ಎಂದು ಹೇಳಲು ಅಸಹ್ಯವಾಗುತ್ತದೆ. ನಮ್ಮ ಸುತ್ತ ಇರುವ ವ್ಯಕ್ತಿಗಳು ಫ್ರಸ್ಟ್ರೇಟ್​ ಆಗಿದ್ದಾರಾ? ನಾವು ಪ್ರಮೋಷನ್​​ಗಾಗಿ ಹಲವು ನಗರಗಳಿಗೆ ತೆರಳಿದ್ದೆವು. ಆದರೆ, ಈ ರೀತಿಯ ಅನುಭವ ಆಗಿರಲಿಲ್ಲ. ನನ್ನ ಸಹ ಕಲಾವಿದೆಗೂ ಇದೇ ರೀತಿಯ ಅನುಭವ ಆಗಿದೆ. ಆಕ್ಷಣ ಏನು ಮಾಡಬೇಕು ಎನ್ನುವುದೇ ನನಗೆ ಗೊತ್ತಾಗಲಿಲ್ಲ’ ಎಂದು ನಟಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಬಿ.ಕಾಂ ವಿದ್ಯಾರ್ಥಿನಿ ಮೇಲೆ ಸಹಾಯಕ ಪ್ರಾಧ್ಯಾಪಕನಿಂದ ಲೈಂಗಿಕ ದೌರ್ಜನ್ಯ ಆರೋಪ; ಮೂರು ತಿಂಗಳ ಗರ್ಭಿಣಿ ಆದ ಯುವತಿ, ಕೇಸ್ ದಾಖಲು

ಮತ್ತೊಂದು ನಟಿ ಕೂಡ ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ. ತಮ್ಮ ಮೇಲೂ ಲೈಂಗಿಕ ದೌರ್ಜನ್ಯ ಆಗಿದೆ ಎಂದು ಅವರು ಹೇಳಿದ್ದಾರೆ. ‘ನನಗೂ ಇದೇ ರೀತಿಯ ಅನುಭವ ಆಯಿತು. ಈ ರೀತಿಯ ಕೆಟ್ಟ ಅನುಭವ ಯಾರಿಗೂ ಆಗದಿರಲಿ ಎಂದು ನಾನು ಕೇಳಿಕೊಳ್ಳುತ್ತೇನೆ. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು’ ಎಂದು ನಟಿ ಕೋರಿದ್ದಾರೆ. ಸದ್ಯ ವಿಡಿಯೋ ವೈರಲ್ ಆಗಿದೆ. ಈ ರೀತಿ ಕೆಟ್ಟ ರೀತಿಯಲ್ಲಿ ನಡೆದುಕೊಂಡವರು ಯಾರು ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada