ಲಕ್ಷಲಕ್ಷ ನೀಡಿ ಸಿಮ್​ಕಾರ್ಡ್​​ನಿಂದ ಮಾಡಿದ ಬಟ್ಟೆ ಖರೀದಿಸಿದ ಉರ್ಫಿ ಜಾವೇದ್; ಮನೆ ಬಾಗಿಲಿಗೆ ಬಂದ್ರು ಪೊಲೀಸ್​

ನೆಟ್​ಫ್ಲಿಕ್ಸ್​ನಲ್ಲಿ ‘ಜಮ್ತಾರಾ ಸೀಸನ್​ 2’ ಆರಂಭ ಆಗುತ್ತಿದೆ. ಇದರ ಪ್ರಮೋಷನ್​​ಗೆ ವಿಡಿಯೋ ಒಂದನ್ನು ಮಾಡಲಾಗಿದೆ. ಅದರಲ್ಲಿ ಉರ್ಫಿಗೆ ಮೋಸ ಮಾಡಿದ ರೀತಿಯಲ್ಲಿ ತೋರಿಸಲಾಗಿದೆ.  ‘

ಲಕ್ಷಲಕ್ಷ ನೀಡಿ ಸಿಮ್​ಕಾರ್ಡ್​​ನಿಂದ ಮಾಡಿದ ಬಟ್ಟೆ ಖರೀದಿಸಿದ ಉರ್ಫಿ ಜಾವೇದ್; ಮನೆ ಬಾಗಿಲಿಗೆ ಬಂದ್ರು ಪೊಲೀಸ್​
ಉರ್ಫಿ
TV9kannada Web Team

| Edited By: Rajesh Duggumane

Sep 23, 2022 | 3:53 PM

ನಟಿ ಉರ್ಫಿ ಜಾವೇದ್ (Urfi Javed) ಅವರು ‘ಹಿಂದಿ ಬಿಗ್ ಬಾಸ್ ಒಟಿಟಿ’ಯ ಮೊದಲ ಸೀಸನ್​ನಲ್ಲಿ ಭಾಗಿ ಆಗಿದ್ದರು. ಆ ಬಳಿಕ ಅವರ ಜನಪ್ರಿಯತೆ ಹೆಚ್ಚಿತು. ಮನೆಯಿಂದ ಹೊರ ಬಂದ ನಂತರದಲ್ಲಿ ಉರ್ಫಿ ಚಿತ್ರ-ವಿಚಿತ್ರ ಬಟ್ಟೆ ಧರಿಸೋಕೆ ಆರಂಭಿಸಿದರು. ಉರ್ಫಿ ಧರಿಸಿದ ಬಟ್ಟೆ ನೋಡಿ ಅನೇಕರು ನಕ್ಕಿದ್ದರು. ಆದರೆ, ಅವರು ಈ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ಚಿಪ್ಪಿನಿಂದ ಮಾಡಿದ ಬಟ್ಟೆ ಸೇರಿದಂತೆ ನಾನಾ ರೀತಿಯ ಬಟ್ಟೆ ಹಾಕಿ ಅವರು ಕಾಣಿಸಿಕೊಂಡಿದ್ದಾರೆ. ಈಗ ಅವರು ಸಿಮ್​ನಿಂದ ಮಾಡಿದ ಬಟ್ಟೆಯನ್ನು 5 ಲಕ್ಷ ರೂಪಾಯಿಗೆ ಖರೀದಿ ಮಾಡಿದ್ದಾರೆ. ಈ ಕಾರಣಕ್ಕೆ ಅವರ ಮನೆಗೆ ಪೊಲೀಸರು ಹುಡುಕಿ ಬಂದಿದ್ದಾರೆ!

ನೆಟ್​ಫ್ಲಿಕ್ಸ್​ನಲ್ಲಿ ‘ಜಮ್ತಾರಾ ಸೀಸನ್​ 2’ ಆರಂಭ ಆಗುತ್ತಿದೆ. ಇದರ ಪ್ರಮೋಷನ್​​ಗೆ ವಿಡಿಯೋ ಒಂದನ್ನು ಮಾಡಲಾಗಿದೆ. ಅದರಲ್ಲಿ ಉರ್ಫಿಗೆ ಮೋಸ ಮಾಡಿದ ರೀತಿಯಲ್ಲಿ ತೋರಿಸಲಾಗಿದೆ.  ‘ಜಮ್ತಾರಾ ಸೀಸನ್​ 2’ನಲ್ಲಿ ಮುಖ್ಯಭೂಮಿಕೆ ನಿರ್ವಹಿಸಿರುವ ಸ್ಪರ್ಶ್​ ಶ್ರೀವಾಸ್ತವ ಹಾಗೂ ಮೋನಿಕಾ ಪನ್ವಾರ್ ಅವರು ಉರ್ಫಿ ಬಳಿ ಹೊಸ ಬಟ್ಟೆ ಹಿಡಿದು ಬರುತ್ತಾರೆ. ಈ ಡ್ರೆಸ್​​ನ ಮಾಡಿದ್ದು ಸಂಪೂರ್ಣವಾಗಿ ಸಿಮ್​ನಿಂದ. ಹೀಗೆ ಈ ವಿಡಿಯೋ ಆರಂಭ ಆಗುತ್ತದೆ.

ಬಟ್ಟೆಗೆ 5 ಲಕ್ಷ ರೂಪಾಯಿ ಎಂದು ಸ್ಪರ್ಶ್ ಹೇಳುತ್ತಾರೆ. ಬಟ್ಟೆ ನೋಡಿ ಖುಷಿ ಆಗುವ ಉರ್ಫಿ, 5.20 ಲಕ್ಷ ರೂಪಾಯಿ ನೀಡಿ ಅದನ್ನು ಖರೀದಿ ಮಾಡುತ್ತಾರೆ. ಈ ಡ್ರೆಸ್​ನಲ್ಲಿ ಬರೋಬ್ಬರಿ 2000 ಸಿಮ್​ಕಾರ್ಡ್​ ಇರುತ್ತದೆ. ಆ ಬಳಿಕ ಸ್ಪರ್ಶ್​ ಹಾಗೂ ಮೋನಿಕಾ ಅಲ್ಲಿಂದ ಕಾಲ್ಕೀಳುತ್ತಾರೆ. ಉರ್ಫಿ ಡ್ರೆಸ್ ಹಾಕಿ ಬಂದಾಗ ಪೊಲೀಸರು ಅವರನ್ನು ಹುಡುಕಿ ಬರುತ್ತಾರೆ. ಅಷ್ಟೇ ಅಲ್ಲ, ಸ್ಕ್ಯಾಮ್​ಗೆ ಬಳಕೆ ಆದ ಸಿಮ್​ಗಳು ಇವು ಎಂದು ಪೊಲೀಸರು ಹೇಳುತ್ತಾರೆ. ಇದನ್ನು ಕೇಳಿ ನಟಿ ಶಾಕ್ ಆಗುತ್ತಾರೆ. ಸದ್ಯ ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ.

ಇದನ್ನೂ ಓದಿ: ‘ನಿಮ್ಮ ತಾಯಿ, ತಂಗಿ, ಪ್ರೇಯಸಿ ಬಟ್ಟೆ ಬಗ್ಗೆ ಕೆಟ್ಟ ಕಮೆಂಟ್​ ಮಾಡಿ, ನನ್ನ ಬಟ್ಟೆ ಬಗ್ಗೆ ಅಲ್ಲ’: ಉರ್ಫಿ ಗರಂ

ಉರ್ಫಿ ಜಾವೇದ್ ಅವರು ಇತ್ತೀಚೆಗೆ ಸಾಕಷ್ಟು ಟ್ರೋಲ್ ಆಗಿದ್ದರು. ಇದಕ್ಕೆ ಕಾರಣ ಅವರ ಬಟ್ಟೆ. ಖಾಸಗಿ ಅಂಗಗಳನ್ನು ಎಕ್ಸ್​ಪೋಸ್​ ಮಾಡುವ ರೀತಿಯಲ್ಲೂ ಅವರು ಬಟ್ಟೆ ಹಾಕಿಕೊಂಡು ಬಂದಿದ್ದೂ ಇದೆ. ಅನೇಕರು ಅವರಿಗೆ ಕೆಟ್ಟದಾಗಿ ಕಮೆಂಟ್ ಮಾಡಿದ್ದರು. ಕೆಲ ಸೆಲೆಬ್ರಿಟಿಗಳು ಕೂಡ ನನ್ನ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾರೆ ಎಂದು ನಟಿ ಉರ್ಫಿ ಜಾವೇದ್ ಅವರು ಈ ಮೊದಲು ಅಳಲು ತೋಡಿಕೊಂಡಿದ್ದರು.

ಇದನ್ನೂ ಓದಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada