Radhe Shyam: ಪ್ರೇಮಿಗಳ ದಿನದಂದು ರಾಧೆ ಶ್ಯಾಮ್ ಚಿತ್ರ ತಂಡದಿಂದ ಗಿಫ್ಟ್​; ಪ್ರಭಾಸ್​ ಅಭಿಮಾನಿಗಳು ಫುಲ್ ಖುಷ್​

ಪ್ರೇಮಿಗಳ ದಿನದಿಂದು ನಟ ಪ್ರಭಾಸ್ (prabhas) ಅಭಿನಯದ ಚಿತ್ರ ರಾಧೆ ಶ್ಯಾಮ್​ ಸಿನಿಮಾದ ತುಣುಕು ​ ಬಿಡುಗಡೆಗೊಂಡಿದೆ. ಈ ಸಿನಿಮಾ​ ಕನ್ನಡ ಸೇರಿದಂತೆ, ಹಿಂದಿ, ಮಲಯಾಳಂ, ತೆಲುಗು ಹಾಗೂ ತಮಿಳಿನಲ್ಲಿ ಬಿಡುಗಡೆಗೊಳ್ಳಲಿದೆ.

  • TV9 Web Team
  • Published On - 12:23 PM, 14 Feb 2021
Radhe Shyam: ಪ್ರೇಮಿಗಳ ದಿನದಂದು ರಾಧೆ ಶ್ಯಾಮ್ ಚಿತ್ರ ತಂಡದಿಂದ ಗಿಫ್ಟ್​; ಪ್ರಭಾಸ್​ ಅಭಿಮಾನಿಗಳು ಫುಲ್ ಖುಷ್​
ನಟ ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ಅಭಿನಯದ ’ರಾಧೆ ಶ್ಯಾಮ್’ ಚಿತ್ರದ ತುಣುಕು ಬಿಡುಗಡೆ

ಬೆಂಗಳೂರು: ಪ್ರೇಮಿಗಳ ದಿನಕ್ಕೆ ನಟ ಪ್ರಭಾಸ್ (prabhas)​ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್​ ಸಿಕ್ಕಿದೆ.  ಪ್ರಭಾಸ್​ ಮತ್ತು ಪೂಜಾ ಹೆಗ್ಡೆ ಅಭಿನಯದ ರಾಧೆಶ್ಯಾಮ್​ ಸಿನಿಮಾದ ಸಣ್ಣ ತುಣಕನ್ನು ಇಂದು ಬಿಡುಗಡೆ ಮಾಡಲಾಗಿದೆ. ಇನ್ನು ಜುಲೈ 30ರಂದು ರಾಧೆಶ್ಯಾಮ್​ ಚಿತ್ರ ಥಿಯೇಟರ್​​ಗೆ ಲಗ್ಗೆ ಇಡಲಿದ್ದು, ಕನ್ನಡದಲ್ಲೂ ಬಿಡುಗಡೆಯಾಗಲಿದೆ.  ಇಂದು ಒಟ್ಟು 5 ಭಾಷೆಗಳಲ್ಲಿ ಸ್ಯಾಂಪಲ್​​ ಬಿಡುಗಡೆಯಾಗಿದ್ದು, ಕನ್ನಡದ ವಿಡಿಯೋ ಕೂಡ ರಿಲೀಸ್​ ಆಗಿದೆ. ಇದನ್ನು ನೋಡಿ ಪ್ರಭಾಸ್​ ಫ್ಯಾನ್ಸ್​ ಫುಲ್ ಫಿದಾ ಆಗಿದ್ದಾರೆ. 

ಸಾಹೋ ಸಿನಿಮಾದ ನಂತರ ಟಾಲಿವುಡ್​ ನಟ ಪ್ರಭಾಸ್​ ನಟಿಸುತ್ತಿರುವ ಚಿತ್ರವಿದು.  ಈ ಸಿನಿಮಾದಲ್ಲಿ ಲವರ್​ ಬಾಯ್ ​ಆಗಿ ಕಾಣಿಸಿಕೊಳ್ಳುತ್ತಿರುವ prabhas ರನ್ನು ನೋಡಲು  ಅಭಿಮಾನಿಗಳಂತೂ ಕಾತುರದಿಂದ ಕಾಯುತ್ತಿದ್ದಾರೆ.  ಪ್ರಭಾಸ್​ ಚಿತ್ರದಲ್ಲಿ ವಿಕ್ರಮಾದಿತ್ಯನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ನಾಯಕಿಯಾಗಿ ಅಭಿನಯಿಸಿರುವ ಪೂಜಾ ಹೆಗ್ಡೆ ಪ್ರೇರಣಾ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇವರಿಬ್ಬರ ಕಾಂಬಿನೇಷನ್​ನಲ್ಲಿ ಬಿಡುಗಡೆಗೊಳ್ಳುತ್ತಿರುವ ಲವ್​ಸ್ಟೋರಿಯ ಸಣ್ಣ ತುಣಕನ್ನು ಚಿತ್ರತಂಡ ಈಗಾಗಲೇ ಹಂಚಿಕೊಂಡಿದೆ.

ಇದನ್ನೂ ಓದಿ: Challenging Star ದರ್ಶನ್​: ತೆಲುಗಿನಲ್ಲಿ ಭರ್ಜರಿ ಓಟ ಆರಂಭಿಸಿದ ರಾಬರ್ಟ್​ ಸಿನಿಮಾ ಟೀಸರ್

ಈ ಚಿತ್ರದ ತುಣುಕು​ ಕನ್ನಡ ಸೇರಿದಂತೆ, ಹಿಂದಿ, ಮಲಯಾಳಂ, ತೆಲುಗು ಹಾಗೂ ತಮಿಳಿನಲ್ಲಿ ಬಿಡುಗಡೆಗೊಳ್ಳಲಿದೆ. ಲಾಕ್​ಡೌನ್​ಗೂ ಮುಂಚಿತವಾಗಿ ಈ ಚಿತ್ರದ ಶೂಟಿಂಗ್​  ನಡೆದಿತ್ತು. ರಾಧೆಶ್ಯಾಮ್​ ಚಿತ್ರದ ಪೋಸ್ಟರ್​, ಮೋಷನ್ ಪೋಸ್ಟರ್​ನ್ನು ಕೂಡ ಈಗಾಗಲೇ ಬಿಡುಗಡೆ ಮಾಡಲಾಗಿದೆ.