‘ನಾನು ಪ್ರೀತಿ ಮಾಡ್ತಾ ಇದೀನಿ’: ‘ಲೈಗರ್’ ಪ್ರಚಾರದ ವೇಳೆ ವಿಜಯ್ ದೇವರಕೊಂಡ ಮೊದಲ ಮಾತು

‘ಲೈಗರ್’ ಸಿನಿಮಾಗೆ ಅಬ್ಬರದ ಪ್ರಚಾರ ನೀಡಲಾಗುತ್ತಿದೆ. ಈ ಚಿತ್ರದ ಪ್ರಚಾರಕ್ಕಾಗಿ ಈ ತಂಡ ಬೆಂಗಳೂರಿಗೆ ಆಗಮಿಸಿದೆ. ಈ ವೇಳೆ ವಿಜಯ್ ಅವರು ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಆ ಬಗ್ಗೆ ಇಲ್ಲಿದೆ ಮಾಹಿತಿ.

‘ನಾನು ಪ್ರೀತಿ ಮಾಡ್ತಾ ಇದೀನಿ’: ‘ಲೈಗರ್’ ಪ್ರಚಾರದ ವೇಳೆ ವಿಜಯ್ ದೇವರಕೊಂಡ ಮೊದಲ ಮಾತು
TV9kannada Web Team

| Edited By: Rajesh Duggumane

Aug 19, 2022 | 6:11 PM

‘ಲೈಗರ್’ ಸಿನಿಮಾದ (Liger Movie) ಪ್ರಚಾರಕ್ಕಾಗಿ ವಿಜಯ್ ದೇವರಕೊಂಡ ಅವರು ಇಂದು (ಆಗಸ್ಟ್ 19) ಬೆಂಗಳೂರಿಗೆ ಆಗಮಿಸಿದ್ದಾರೆ. ಅನನ್ಯಾ ಪಾಂಡೆ ಅವರಿಗೆ ಸಾಥ್ ನೀಡಿದ್ದಾರೆ. ಮಧ್ಯಾಹ್ನ ಪುನೀತ್ ರಾಜ್​ಕುಮಾರ್ (Puneeth Rajkumar)​ ಸಮಾಧಿಗೆ ಭೇಟಿ ನೀಡಿ ನಮಿಸಿದ್ದ ವಿಜಯ್ ಹಾಗೂ ಅನನ್ಯಾ ಸಂಜೆ ಸುದ್ದಿಗೋಷ್ಠಿ ನಡೆಸಿದ್ದಾರೆ. ಈ ವೇಳೆ ಅನೇಕ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಈ ಸಿನಿಮಾ ಆಗಸ್ಟ್​ 25ರಂದು ರಿಲೀಸ್ ಆಗಲಿದೆ.

ಕನ್ನಡದಲ್ಲಿ ಮಾತಾಡಿದ ವಿಜಯ್

ವಿಜಯ್ ದೇವರಕೊಂಡ ಅವರಿಗೆ ಕರ್ನಾಟಕದ ಮೇಲೆ ಸಾಕಷ್ಟು ಪ್ರೀತಿ ಇದೆ. ಈ ಮೊದಲು ಹಲವು ಸಿನಿಮಾಗಳ ಪ್ರಚಾರ ಮಾಡಲು ಅವರು ಇಲ್ಲಿಗೆ ಬಂದಿದ್ದರು. ಕರ್ನಾಟಕದಲ್ಲಿ ಸಿಕ್ಕಾಪಟ್ಟೆ ಫ್ಯಾನ್ಸ್ ಇದ್ದಾರೆ. ಈ ಕಾರಣಕ್ಕೆ ಕನ್ನಡದಲ್ಲಿ ಮಾತನಾಡಿದ್ದಾರೆ. ‘ಎಲ್ಲರಿಗೂ ನಮಸ್ಕಾರ. ನಿಮ್ಮನ್ನೆಲ್ಲ ನೋಡಿ ಸಂತೋಷವಾಗಿದೆ. ಬೆಂಗಳೂರು ಯವಾಗಲೂ ನನಗೆ ಪ್ರೀತಿ ನೀಡಿದೆ. ನಾನು ಪ್ರೀತಿ ಮಾಡ್ತಾ ಇದೀನಿ’ ಎಂದು ವಿಜಯ್ ದೇವರಕೊಂಡ ಕರ್ನಾಟಕದ ಫ್ಯಾನ್ಸ್​ಗೆ ಹೇಳಿದ್ದರು.

ನಾನು ಡಬ್ ಮಾಡಿಲ್ಲ

‘ಲೈಗರ್ ನನ್ನ ವೃತ್ತಿ ಜೀವನದ ದೊಡ್ಡ ಸಿನಿಮಾ. ನಾನು ಈ ಸಿನಿಮಾದ ಕಥೆ ಕೇಳಿ ಎಗ್ಸೈಟ್ ಆದೆ. ಇದು ಮಾಸ್​ ಎಂಟರ್​ಟೇನರ್​ ಸಿನಿಮಾ. ಈ ಸಿನಿಮಾದಲ್ಲಿ ನಾನು ಡಬ್ ಮಾಡೋಕೆ ಪ್ರಯತ್ನಿಸಿದೆ. ಆದರೆ, ಕೆಟ್ಟದಾಗಿ ಕೇಳಿತು. ಈ ಕಾರಣಕ್ಕೆ ನಾನು ಆ ಪ್ರಯತ್ನಕ್ಕೆ ಮುಂದಾಗಿಲ್ಲ. ಮುಂದಿನ ದಿನಗಳಲ್ಲಿ ಆ ಬಗ್ಗೆ ಪ್ರಯತ್ನಿಸುತ್ತೇನೆ’ ಎಂದರು ವಿಜಯ್ ದೇವರಕೊಂಡ.

ಮೈಕ್ ಟೈಸನ್ ಬಗ್ಗೆ ವಿಜಯ್ ಮಾತು

‘ಲೈಗರ್’ ಚಿತ್ರದಲ್ಲಿ ಬಾಕ್ಸಿಂಗ್ ದಿಗ್ಗಜ ಮೈಕ್ ಟೈಸನ್ ನಟಿಸಿದ್ದಾರೆ. ಈ ಬಗ್ಗೆ ವಿಜಯ್ ದೇವರಕೊಂಡ ಮಾತನಾಡಿದ್ದಾರೆ. ‘ಮೈಕ್ ಟೈಸನ್ ನಮ್ಮ ಸಿನಿಮಾದಲ್ಲಿ ನಟಿಸಿದ್ದು ಸಖತ್ ಖುಷಿ ಇದೆ. ಅವರು ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ’ ಎಂದಿದ್ದಾರೆ ವಿಜಯ್.

ಪುನೀತ್ ಅಣ್ಣನ ಮಿಸ್ ಮಾಡಿಕೊಳ್ಳುತ್ತಿದ್ದೇನೆ

ಇದನ್ನೂ ಓದಿ

‘ಪುನೀತ್​ ಅಣ್ಣನನ್ನು ನಾನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನಾನು ಬೆಂಗಳೂರಿಗೆ ಬಂದಾಗ ಪುನೀತ್ ಅವರನ್ನು ಭೇಟಿ ಮಾಡುತ್ತಿದ್ದೆ. ಸಮಾಧಿಗೆ ಭೇಟಿ ನೀಡಿದಾಗ ತುಂಬಾ ಬೇಸರ ಆಯಿತು’ ಎಂದಿದ್ದಾರೆ ವಿಜಯ್.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada