Liger First Glimpse: 24 ಗಂಟೆಯಲ್ಲಿ 16 ಮಿಲಿಯನ್ ವೀಕ್ಷಣೆ ಪಡೆದು ದಾಖಲೆ ಬರೆದ ವಿಜಯ್ ದೇವರಕೊಂಡ ನಟನೆಯ ಲೈಗರ್

Liger First Glimpse: 24 ಗಂಟೆಯಲ್ಲಿ 16 ಮಿಲಿಯನ್ ವೀಕ್ಷಣೆ ಪಡೆದು ದಾಖಲೆ ಬರೆದ ವಿಜಯ್ ದೇವರಕೊಂಡ ನಟನೆಯ ಲೈಗರ್
‘ಲೈಗರ್’ ಚಿತ್ರದಲ್ಲಿ ವಿಜಯ್ ದೇವರಕೊಂಡ

Vijay Deverkonda | Mike Tyson: ವಿಜಯ್ ದೇವರಕೊಂಡ, ಮೈಕ್ ಟೈಸನ್ ಕಾಣಿಸಿಕೊಳ್ಳುತ್ತಿರುವ ‘ಲೈಗರ್’ ಅಪಾರ ನಿರೀಕ್ಷೆ ಹುಟ್ಟುಹಾಕಿದೆ. ಚಿತ್ರದ ಮೊದಲ ಟೀಸರ್ ಬಿಡುಗಡೆಯಾಗಿದ್ದು, 24 ಗಂಟೆಗಳ ಅವಧಿಯಲ್ಲೇ ಹಲವು ದಾಖಲೆ ಬರೆದಿದೆ.

TV9kannada Web Team

| Edited By: shivaprasad.hs

Jan 01, 2022 | 12:06 PM


ವಿಜಯ್ ದೇವರಕೊಂಡ ನಟನೆಯ ‘ಲೈಗರ್’ (Liger) ಹಲವು ಕಾರಣಗಳಿಗೆ ಸಖತ್ ಸುದ್ದಿ ಮಾಡುತ್ತಿದೆ. ಮೊದಲನೆಯದು ಚಿತ್ರದ ಕ್ಯಾನ್ವಾಸ್. ಟಾಲಿವುಡ್ ನೆಲದ ಚಿತ್ರ ಹಾಲಿವುಡ್​ವರೆಗೂ ವ್ಯಾಪಿಸಿಕೊಂಡಿರುವುದು ‘ಲೈಗರ್​’ನ ವಿಶೇಷತೆ. ಬಾಕ್ಸಿಂಗ್ ಲೆಜೆಂಡ್ ಮೈಕ್ ಟೈಸನ್ (Mike Tyson) ಈ ಚಿತ್ರದಲ್ಲಿ ವಿಜಯ್ ದೇವರಕೊಂಡ (Vijay Deverakonda) ಎದುರು ತೊಡೆ ತಟ್ಟಲಿದ್ದಾರೆ. ನಾಯಕ ನಟ ವಿಜಯ್ ದೇವರಕೊಂಡ ಈ ಚಿತ್ರದ ಮೂಲಕ ಹಿಂದಿ ಚಿತ್ರರಂಗಕ್ಕೆ ಕಾಲಿಡಲಿದ್ದಾರೆ. ಬಾಲಿವುಡ್ ಬೆಡಗಿ ಅನನ್ಯಾ ಪಾಂಡೆ (Ananya Panday) ದಕ್ಷಿಣ ಭಾರತಕ್ಕೆ ಕಾಲಿಡುತ್ತಿದ್ದಾರೆ. ದಿಗ್ಗಜರ ಸಮಾಗಮಕ್ಕೆ ಸಾಕ್ಷಿಯಾಗಿರುವ ಈ ಚಿತ್ರವನ್ನು ನಿರೀಕ್ಷೆಗೆ ತಕ್ಕಂತೆ ಚಿತ್ರವನ್ನು ತೆರೆಗೆ ತರಲು ನಿರ್ದೇಶಕ ಪುರಿ ಜಗನ್ನಾಥ್ ಬಹಳ ಶ್ರಮವಹಿಸುತ್ತಿದ್ದಾರೆ. ಇದು ಚಿತ್ರದ ಮೊದಲ ಟೀಸರ್​ನಲ್ಲಿ ಎದ್ದು ಕಂಡಿದೆ. ಇದೇ ಕಾರಣಕ್ಕೆ ಚಿತ್ರದ ಟೀಸರ್ ಜನರಿಗೆ ಇಷ್ಟವಾಗಿದ್ದು, ಹಲವು ದಾಖಲೆಗಳನ್ನು ಸೃಷ್ಟಿಸಿದೆ.

2022ರ ಆಗಸ್ಟ್​​ 25ಕ್ಕೆ ತೆರೆಗೆ ಬರಲಿರುವ ಚಿತ್ರದ ಮೊದಲ ಗ್ಲಿಂಪ್ಸ್​​ ಅನ್ನು ಹೊಸ ವರ್ಷಕ್ಕೂ ಮುನ್ನಾದಿನ ಅಂದರೆ ಡಿಸೆಂಬರ್ 31ರಂದು ಚಿತ್ರತಂಡ ಬಿಡುಗಡೆ ಮಾಡಿತ್ತು. ಇದನ್ನು ಅದ್ದೂರಿಯಾಗಿ ಸ್ವಾಗತಿಸಿರುವ ಸಿನಿ ಪ್ರೇಮಿಗಳು, ಬಾಕ್ಸಿಂಗ್ ಪಟುವಾಗಿ ಕಾಣಿಸಿಕೊಂಡಿರುವ ವಿಜಯ್ ದೇವರಕೊಂಡ ಲುಕ್​ಗೆ ಮಾರುಹೋಗಿದ್ದಾರೆ.

ಇದೀಗ ಚಿತ್ರದ ಟೀಸರ್ ಹಲವು ದಾಖಲೆಗಳನ್ನು ಸೃಷ್ಟಿಸಿದ್ದು, ಯೂಟ್ಯೂಬ್​ನ ಟ್ರೆಂಡಿಂಗ್ ಲೀಸ್ಟ್​​​ನಲ್ಲಿ ನಂಬರ್ 1 ಸ್ಥಾನದಲ್ಲಿದೆ. ಬಿಡುಗಡೆಯಾದ ಕೇವಲ 24 ಗಂಟೆಗಳ ಅವಧಿಯಲ್ಲಿ 16 ಮಿಲಿಯನ್​ಗೂ ಅಧಿಕ ವೀಕ್ಷಣೆಯನ್ನು ‘ಲೈಗರ್’ ಕಂಡಿದೆ. ಅಲ್ಲದೇ 4 ಲಕ್ಷಕ್ಕೂ ಅಧಿಕ ಜನರು ಲೈಕ್ ಮಾಡಿದ್ದಾರೆ. ಯೂಟ್ಯೂಬ್​ನಲ್ಲಿ 24 ಗಂಟೆಗಳ ಅವಧಿಯಲ್ಲಿ ಅತ್ಯಂತ ಹೆಚ್ಚು ವೀಕ್ಷಣೆಗೆ ಒಳಪಟ್ಟ ಫರ್ಸ್ಟ್ ಗ್ಲಿಂಪ್ಸ್ ಎಂಬ ದಾಖಲೆಯನ್ನೂ ‘ಲೈಗರ್’ ಬರೆದಿದೆ.

‘ಲೈಗರ್’ ಟೀಸರ್ ಇಲ್ಲಿದೆ:

ಈ ಸಿನಿಮಾ ಸುಮಾರು 125 ಕೋಟಿ ವೆಚ್ಚದಲ್ಲಿ ತಯಾರಾಗುತ್ತಿದ್ದು, ಪುರಿ ಜಗನ್ನಾಥ್​, ಕರಣ್​ ಜೋಹರ್​, ಚಾರ್ಮಿ ಕೌರ್​, ಅಪೂರ್ವ ಮೆಹ್ತಾ, ಹೀರೂ ಯಶ್​ ಜೋಹರ್​ ಒಟ್ಟಾಗಿ ನಿರ್ಮಿಸುತ್ತಿದ್ದಾರೆ. ಈ ಚಿತ್ರ ಕನ್ನಡದಲ್ಲೂ ತೆರೆಗೆ ಬರುತ್ತಿದೆ.

ಇದನ್ನೂ ಓದಿ:

ವಿಜಯ್​ ದೇವರಕೊಂಡ ನಟನೆಯ ‘ಲೈಗರ್​’ ಚಿತ್ರದಿಂದ ಅಭಿಮಾನಿಗಳಿಗೆ ಹೊಸ ವರ್ಷಕ್ಕೆ ಬಿಗ್​ ಗಿಫ್ಟ್​

Vijay Devarakonda: ಮಾಸ್​ ಅವತಾರದಲ್ಲಿ ವಿಜಯ್​ ದೇವರಕೊಂಡ; ‘ಲೈಗರ್​’ ಗ್ಲಿಂಪ್ಸ್​​ ಇಷ್ಟಪಟ್ಟ ಫ್ಯಾನ್ಸ್​

 ಬಾಲಿವುಡ್​ಗೆ ಕಾಲಿಡುತ್ತಿದ್ದಾರೆ ದಕ್ಷಿಣದ ಹೀರೋಗಳು; ಯಶಸ್ಸಿನ ನಿರೀಕ್ಷೆಯಲ್ಲಿ ವಿಜಯ್​ ದೇವರಕೊಂಡ

Follow us on

Related Stories

Most Read Stories

Click on your DTH Provider to Add TV9 Kannada