ಲವ್ ಲೈಫ್ ಬಗ್ಗೆ ಬಾಯ್ಬಿಟ್ಟ ವಿಜಯ್ ದೇವರಕೊಂಡ, ಸಹನಟಿಯೊಟ್ಟಿಗೆ ಡೇಟಿಂಗ್

|

Updated on: Nov 21, 2024 | 1:02 PM

Vijay Deverakonda: ನಟ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಪರಸ್ಪರ ಪ್ರೀತಿಯಲ್ಲಿದ್ದಾರೆ ಎಂಬ ಸುದ್ದಿ ಆಗಾಗ್ಗೆ ಹರಿದಾಡುತ್ತಿರುತ್ತದೆ. ಇದೀಗ ಸಂದರ್ಶನವೊಂದರಲ್ಲಿ ವಿಜಯ್ ದೇವರಕೊಂಡ ತಮ್ಮ ಲವ್ ಲೈಫ್ ಬಗ್ಗೆ ಹೇಳಿಕೊಂಡಿದ್ದಾರೆ.

ಲವ್ ಲೈಫ್ ಬಗ್ಗೆ ಬಾಯ್ಬಿಟ್ಟ ವಿಜಯ್ ದೇವರಕೊಂಡ, ಸಹನಟಿಯೊಟ್ಟಿಗೆ ಡೇಟಿಂಗ್
Follow us on

ನಟ ವಿಜಯ್ ದೇವರಕೊಂಡ, ತೆಲುಗು ಚಿತ್ರರಂಗದ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್. ಅವರ ಹೆಸರು ಆಗಾಗ್ಗೆ ಗಾಸಿಪ್ ಕಾಲಂಗಳಲ್ಲಿ ಕಂಡು ಬರುತ್ತಲೇ ಇರುತ್ತದೆ. ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಪರಸ್ಪರ ಪ್ರೀತಿಯಲ್ಲಿದ್ದು, ಇಬ್ಬರೂ ವಿವಾಹವಾಗಲಿದ್ದಾರೆ ಎಂಬ ಸುದ್ದಿಯಂತೆ ಕಳೆದ ಕೆಲ ವರ್ಷಗಳಿಂದಲೂ ಕೇಳಿ ಬರುತ್ತಿದೆ. ಪ್ರೀತಿ-ಪ್ರೇಮದ ವಿಷಯವನ್ನು ರಶ್ಮಿಕಾ ಹಾಗೂ ವಿಜಯ್ ಆಗಲಿ ಒಪ್ಪಿಲ್ಲವಾದರೂ, ನಿರಾಕರಿಸಿಯೂ ಇಲ್ಲ. ಇಬ್ಬರೂ ಒಟ್ಟಿಗೆ ಪ್ರವಾಸಕ್ಕೆ ಹೋಗುತ್ತಾರೆ. ಪರಸ್ಪರರ ಮನೆಗಳಲ್ಲಿ ಹಬ್ಬಗಳನ್ನು ಆಚರಿಸುತ್ತಾರೆ. ಆದರೆ ಪ್ರೀತಿ ವಿಷಯ ಬಹಿರಂಗಗೊಳಿಸಿಲ್ಲ. ಆದರೆ ಇತ್ತೀಚೆಗಿನ ಸಂದರ್ಶನದಲ್ಲಿ ವಿಜಯ್ ತಮ್ಮ ಲವ್ ಲೈಫ್​ ಬಗ್ಗೆ ಮಾತನಾಡಿದ್ದಾರೆ.

ಜನಪ್ರಿಯ ಯೂಟ್ಯೂಬ್ ಚಾನೆಲ್ ಕರ್ಲಿ ಟೇಲ್ಸ್​ಗೆ ನೀಡಿರುವ ಫನ್ ಸಂದರ್ಶನದಲ್ಲಿ ಮಾತನಾಡಿರುವ ವಿಜಯ್ ದೇವರಕೊಂಡ, ತಾವು ಸಿಂಗಲ್ ಅಲ್ಲ ಬದಲಿಗೆ ಒಬ್ಬರೊಂದಿಗೆ ಪ್ರೀತಿಯಲ್ಲಿದ್ದೇನೆ ಎಂದಿದ್ದಾರೆ. ಆದರೆ ಅದು ಯಾರೆಂದು ಹೆಸರು ಹೇಳಿಲ್ಲ. ‘ನನಗೆ ಈಗ 35 ವರ್ಷ ವಯಸ್ಸು, ನಿಮಗೆ ಅನ್ನಿಸುತ್ತದೆಯೇ ನಾನು ಸಿಂಗಲ್ ಎಂದು’ ಎಂದು ಸಂದರ್ಶಕಿಯನ್ನು ಪ್ರಶ್ನೆ ಮಾಡಿದ್ದಾರೆ ವಿಜಯ್ ದೇವರಕೊಂಡ. ಅದೇ ಸಂದರ್ಶನದಲ್ಲಿ ತಾವು ತಮ್ಮೊಟ್ಟಿಗೆ ನಟಿಸಿದ ಸಹನಟಿಯೊಂದಿಗೆ ಪ್ರೇಮ ಸಂಬಂಧ (ಡೇಟಿಂಗ್) ಹೊಂದಿರುವುದಾಗಿಯೂ ಹೇಳಿಕೊಂಡಿದ್ದಾರೆ. ಆದರೆ ಯಾರೆಂದು ಮಾತ್ರ ಹೆಸರು ಹೇಳಿಲ್ಲ. ಆದರೆ ನೆಟ್ಟಿಗರು ಆ ನಟಿ ರಶ್ಮಿಕಾ ಮಂದಣ್ಣ ಅವರೇ ಎಂದು ಊಹಿಸಿದ್ದಾರೆ.

ಇದನ್ನೂ ಓದಿ:‘ಪುಷ್ಪ 2’ ಪ್ರಮೋಷನ್; ಸಖತ್ ಆ್ಯಕ್ಟೀವ್ ಆದ ರಶ್ಮಿಕಾ ಮಂದಣ್ಣ

ಅದೇ ಸಂದರ್ಶನದಲ್ಲಿ ತಾವು ಪ್ರೀತಿ ಮಾಡುವ ಬಗೆ ಹೇಗಿರುತ್ತದೆ ಎಂಬುದನ್ನು ವಿವರಿಸಿರುವ ವಿಜಯ್ ದೇವರಕೊಂಡ, ‘ನನ್ನ ಪ್ರೀತಿ ಬೇಷರತ್ ಪ್ರೀತಿ (ಅನ್​ಕಂಡೀಷನಲ್) ಅಲ್ಲ. ನನ್ನ ಪ್ರೀತಿಗೆ ಕೆಲವು ನಿರೀಕ್ಷೆಗಳಿವೆ. ನಿರೀಕ್ಷೆಗಳು ಇಲ್ಲದೆ ಯಾರೂ ಯಾರನ್ನೂ ಪ್ರೀತಿ ಮಾಡುವುದಿಲ್ಲ. ಕೆಲವರದ್ದು ಸಣ್ಣ-ಪುಟ್ಟ ನಿರೀಕ್ಷೆಗಳಿರುತ್ತವೆ, ಕೆಲವರದ್ದು ದೊಡ್ಡ ನಿರೀಕ್ಷೆಗಳು ಇರಬಹುದು. ಹಾಗೆಯೇ ನನ್ನದು ಸಹ ನಿರೀಕ್ಷೆಗಳು ಇರುವ ಪ್ರೀತಿಯೇ, ಬೇಷರತ್ ಆಗಿ ಪ್ರೀತಿಸಲು ಆಗುವುದಿಲ್ಲ. ಬೇಷರತ್ ಪ್ರೀತಿ ಎಂಬುದೆಲ್ಲ ಕ್ಲೀಷೆ’ ಎಂದಿದ್ದಾರೆ ವಿಜಯ್ ದೇವರಕೊಂಡ.

ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಬಹಳ ಆತ್ಮೀಯವಾಗಿದ್ದಾರೆ. ಇಬ್ಬರೂ ಪರಸ್ಪರ ಪ್ರವಾಸಕ್ಕೆ ಸಹ ತೆರಳಿದ್ದಿದೆ. ಇತ್ತೀಚೆಗೆ ಮಲೇಷ್ಯಾ ಮತ್ತಿತರೆ ಕಡೆಗಳಲ್ಲಿ ಪ್ರವಾಸಕ್ಕೆ ಹೋಗಿದ್ದರು. ಹಬ್ಬಗಳನ್ನು, ರಶ್ಮಿಕಾ ಆಚರಣೆ ಮಾಡುವುದು ವಿಜಯ್ ದೇವರಕೊಂಡ ಮನೆಯಲ್ಲಿಯೇ. ಇಬ್ಬರೂ ಪರಸ್ಪರ ಪ್ರೀತಿಯಲ್ಲಿದ್ದರೂ ಸಹ ಈ ಬಗ್ಗೆ ಬಹಿರಂಗವಾಗಿ ಹೇಳಿಕೊಂಡಿಲ್ಲ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ