25 ಕೋಟಿ ಬಜೆಟ್​ನ ಈ ಸಿನಿಮಾ, ಚೀನಾನಲ್ಲಿ ಗಳಿಸಲಿದೆ 700 ಕೋಟಿ

Box Office: ಭಾರಿ ಬಜೆಟ್ ಸಿನಿಮಾಗಳು ಮಾತ್ರವೇ 500 ಕೋಟಿ 1000 ಕೋಟಿ ಕಲೆಕ್ಷನ್ ಮಾಡುತ್ತವೆ ಎಂಬುದು ಸುಳ್ಳು, ಇತ್ತೀಚೆಗೆ ಕಡಿಮೆ ಅಥವಾ ಮಧ್ಯಮ ಬಜೆಟ್ ಸಿನಿಮಾಗಳೇ ಹೆಚ್ಚು ಹಣ ಗಳಿಕೆ ಮಾಡಿವೆ. ಇದೀಗ 25 ಕೋಟಿ ಬಜೆಟ್ ಸಿನಿಮಾ ಒಂದು ಚೀನಾದಲ್ಲಿ 700 ಕೋಟಿ ಗಳಿಕೆ ಮಾಡುವ ಭರವಸೆ ಮೂಡಿಸಿದೆ.

25 ಕೋಟಿ ಬಜೆಟ್​ನ ಈ ಸಿನಿಮಾ, ಚೀನಾನಲ್ಲಿ ಗಳಿಸಲಿದೆ 700 ಕೋಟಿ
Follow us
ಮಂಜುನಾಥ ಸಿ.
|

Updated on: Nov 23, 2024 | 2:47 PM

ದೊಡ್ಡ ಬಜೆಟ್ ಹಾಕಿದ ಸಿನಿಮಾಗಳೇ ದೊಡ್ಡ ಮೊತ್ತವನ್ನು ಗಳಿಸುತ್ತವೆ ಎಂಬುದು ಅಪ್ಪಟ ಸುಳ್ಳು. ಅತ್ಯಂತ ಕಡಿಮೆ ಬಜೆಟ್​ನಲ್ಲಿ ನಿರ್ಮಾಣವಾದ ಸಿನಿಮಾಗಳು ಕೋಟ್ಯಂತರ ರೂಪಾಯಿ ಹಣ ಗಳಿಸಿದ ಉದಾಹರಣೆಗಳು ಇವೆ. ಆದರೆ ಇತ್ತೀಚೆಗೆ ಇಂಥಹಾ ಮಧ್ಯಮ ಬಜೆಟ್​ನ ಸಿನಿಮಾಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲುತ್ತಿವೆ. ಭಾರಿ ಬಜೆಟ್​ನ ಪ್ಯಾನ್ ಇಂಡಿಯಾ ಸಿನಿಮಾಗಳಿಗೆ ಠಕ್ಕರ್ ಕೊಡುತ್ತಿವೆ. ಕನ್ನಡದ ‘ಕಾಂತಾರ’ ಸಹ ಇದಕ್ಕೊಂದು ಒಳ್ಳೆಯ ಉದಾಹರಣೆ. ಮಲಯಾಳಂನ ‘ಮಂಜುಮೆಲ್ ಬಾಯ್ಸ್’, ‘ಆವೇಶಂ’ ಸಹ ಕಡಿಮೆ ಬಜೆಟ್​ನಲ್ಲಿ ನಿರ್ಮಾಣಗೊಂಡು ನೂರಾರು ಕೋಟಿ ಕಲೆಕ್ಷನ್ ಮಾಡಿದವು. ಇದೇ ಸಾಲಿಗೆ ಸೇರುವ ತಮಿಳು ಸಿನಿಮಾ ಒಂದು ಈಗಾಗಲೇ ಭಾರತದಲ್ಲಿ ನೂರಾರು ಕೋಟಿ ಗಳಿಸಿದೆ. ಈಗ ಚೀನಾದಲ್ಲಿ 700 ಕೋಟಿ ಗಳಿಸುವ ಭರವಸೆ ಹುಟ್ಟುಹಾಕಿದೆ.

ವಿಜಯ್ ಸೇತುಪತಿ ನಟಿಸಿರುವ ‘ಮಹಾರಾಜ’ ತಮಿಳು ಸಿನಿಮಾ ಕೆಲ ತಿಂಗಳ ಹಿಂದೆ ಚಿತ್ರಮಂದಿರದಲ್ಲಿ ಬಿಡುಗಡೆ ಆಗಿತ್ತು. ಸರಳವಾದ ಕತೆ, ಭಿನ್ನ ನಿರೂಪಣೆ ಹೊಂದಿದ್ದ ಈ ಸಿನಿಮಾ ಪ್ರೇಕ್ಷಕರನ್ನು ಬಹುವಾಗಿ ಸೆಳೆಯಿತು. 25 ಕೋಟಿ ಬಜೆಟ್​ನಲ್ಲಿ ನಿರ್ಮಾಣವಾದ ಈ ಸಿನಿಮಾ ಚಿತ್ರಮಂದಿರದಲ್ಲಿ ನೂರು ಕೋಟಿಗೂ ಹೆಚ್ಚು ಹಣ ಗಳಿಸಿತ್ತು. ತಮಿಳಿನಲ್ಲಿ ಮಾತ್ರವೇ ಬಿಡುಗಡೆ ಆಗಿದ್ದ ಈ ಸಿನಿಮಾವನ್ನು ಆ ನಂತರ ತೆಲುಗಿಗೆ ಡಬ್ ಮಾಡಿ ಬಿಡುಗಡೆ ಮಾಡಲಾಯ್ತು. ಒಟಿಟಿಯಲ್ಲಿ ಬಿಡುಗಡೆ ಆದ ಬಳಿಕವಂತೂ ಸಿನಿಮಾದ ಜನಪ್ರಿಯ ಇನ್ನೂ ದೊಡ್ಡ ಮಟ್ಟದಲ್ಲಿ ಹೆಚ್ಚಿತು.

ಇದೀಗ ಈ ಸಿನಿಮಾ ಚೀನಾದಲ್ಲಿ ಬಿಡುಗಡೆ ಆಗಲಿದ್ದು, ಚೀನಾದಲ್ಲಿ ಭಾರಿ ದೊಡ್ಡ ಮಟ್ಟದಲ್ಲಿ ಸಿನಿಮಾ ತೆರೆಗೆ ಬರಲಿದೆ. ಚೀನಾದ ಜನರಿಗೆ ಇಂಥಹಾ ಡ್ರಾಮಾ, ಸೆಂಟಿಮೆಂಟ್​ ಕತೆಗಳು ಮೊದಲಿನಿಂದಲೂ ಬಹಳ ಇಷ್ಟವಾಗುತ್ತವೆ. ಈ ಸಿನಿಮಾವನ್ನು ಚೀನಾದಲ್ಲಿ ಭಾರಿ ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡಲಾಗುತ್ತಿದ್ದು, ಈ ಸಿನಿಮಾ ಚೀನಾ ಮಾರುಕಟ್ಟೆಯಲ್ಲಿ ಸುಮಾರು 700 ಕೋಟಿ ರೂಪಾಯಿ ಕಮಾಯಿ ಮಾಡಲಿದೆ ಎಂಬ ಲೆಕ್ಕಾಚಾರ ಇದೆ.

ಇದನ್ನೂ ಓದಿ:‘ಡಾಕು ಮಹಾರಾಜ್​’ ಆದ ಬಾಲಯ್ಯ; ಈಗ ಟೀಸರ್, ಸಂಕ್ರಾಂತಿಗೆ ಮಾಸ್ ಮಸಾಲ

ಚೀನಾದ ಯೀ ಶೀ ಫಿಲಮ್ಸ್​ ‘ಮಹಾರಾಜ’ ಸಿನಿಮಾವನ್ನು ಚೀನಾದಲ್ಲಿ ಬಿಡುಗಡೆ ಮಾಡಲಿದ್ದಾರೆ. ಒಟ್ಟಿಗೆ ಬರೋಬ್ಬರಿ 40 ಸಾವಿರ ಸ್ಕ್ರೀನ್​ಗಳಲ್ಲಿ ಈ ಸಿನಿಮಾವನ್ನು ತೆರೆಗೆ ತರಲಾಗುತ್ತಿದೆ. ಸ್ಥಳೀಯ ಮ್ಯಾಂಡರೀನ್ ಭಾಷೆಗೆ ಸಿನಿಮಾವನ್ನು ಡಬ್ ಮಾಡಲಾಗಿದ್ದು, ಯೀ ಶೀ ಫಿಲಮ್ಸ್ ವಿತರಣಾ ಸಂಸ್ಥೆ ‘ಮಹಾರಾಜ’ ಸಿನಿಮಾದ ಕಂಟೆಂಟ್ ಬಗ್ಗೆ ಬಹಳ ನಂಬಿಕೆ ಇರಿಸಿಕೊಂಡಿದೆ. ಭಾರತದ ಇನ್ಯಾವುದೇ ಸಿನಿಮಾ ಚೀನಾದಲ್ಲಿ ಒಟ್ಟಿಗೆ 40 ಸಾವಿರ ಸ್ಕ್ರೀನ್​ಗಳಲ್ಲಿ ಬಿಡುಗಡೆ ಆಗಿಲ್ಲವಂತೆ. ಆ ಮೂಲಕ ‘ಮಹಾರಾಜ’ ಸಿನಿಮಾ ದಾಖಲೆ ಬರೆಯುತ್ತಿದೆ.

40 ಸಾವಿರ ಸ್ಕ್ರೀನ್​ಗಳಲ್ಲಿ ಒಟ್ಟಿಗೆ ಸಿನಿಮಾ ಬಿಡುಗಡೆ ಆಗಲಿದ್ದು, ಪ್ರತಿ ಸ್ಕ್ರೀನ್​ನಿಂದ ಸರಾಸರಿ 2000 ಡಾಲರ್ ಗಳಿಕೆ ಕಾಣುವ ನಿರೀಕ್ಷೆಯನ್ನು ಸ್ವತಃ ಯೀ ಶೀ ಫಿಲಮ್ಸ್ ವಿತರಣಾ ಸಂಸ್ಥೆ ವ್ಯಕ್ತಪಡಿಸಿದೆ. ಅಲ್ಲಿಗೆ ಸಿನಿಮಾದ ಕಲೆಕ್ಷನ್ 80 ಮಿಲಿಯನ್ ಡಾಲರ್ ಆಗಲಿದ್ದು, ಭಾರತದ ರೂಪಾಯಿ ಲೆಕ್ಕದಲ್ಲಿ ಇದು 700 ಕೋಟಿಗೂ ಹೆಚ್ಚಾಗಲಿದೆ.

‘ಮಹಾರಾಜ’ ಸಿನಿಮಾವನ್ನು ನಿತಿಲನ್ ಸಾಮಿನಾಥನ್ ನಿರ್ದೇಶನ ಮಾಡಿದ್ದಾರೆ. ಸಿನಿಮಾಕ್ಕೆ ಸುಧನ್ ಸುಂದರನ್ ಮತ್ತು ಜಗದೀಶ್ ಪಳನಿಸ್ವಾಮಿ ನಿರ್ಮಾಣ ಮಾಡಿದ್ದಾರೆ. ವಿಜಯ್ ಸೇತುಪತಿ ಸಹ ಈ ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ ಎನ್ನಲಾಗಿದೆ. ಸಿನಿಮಾದ ಪ್ರಮುಖ ಪಾತ್ರದಲ್ಲಿ ವಿಜಯ್ ಸೇತುಪತಿ, ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್, ಮಮತಾ ಮೋಹನ್​ದಾಸ್, ನಟರಾಜನ್ ಸುಬ್ರಹ್ಮಣ್ಯನ್ ನಟಿಸಿದ್ದಾರೆ. ಸಿನಿಮಾಕ್ಕೆ ಸಂಗೀತ ನೀಡಿರುವುದು ಕನ್ನಡದ ಅಜನೀಶ್ ಲೋಕನಾಥ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ