ಯುಗಾದಿ ಹಬ್ಬಕ್ಕೆ ಸಿಹಿ ಸುದ್ದಿ ನೀಡಿದ ದೊಡ್ಮನೆ ಕುಟುಂಬದ ಕುಡಿ; ಖಡಕ್ ಖದರಿನಲ್ಲಿ ವಿನಯ್ ರಾಜ್​ಕುಮಾರ್

ಪೆಪೆ ಸಿನಿಮಾದ ಬಿಡುಗಡೆಯಾದ ಪೋಸ್ಟರ್​ನಲ್ಲಿ ವಿನಯ್  ರೌಡಿಸಂ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ.  ಹೀಗಾಗಿ ಈವರೆಗಿನ ಅವರ ಸಿನಿಮಾಗಳಿಗಿಂತ ಇದು ಭಿನ್ನವಾಗಿರಲಿದೆ ಎಂಬ ನಿರೀಕ್ಷೆ ಅಭಿಮಾನಿಗಳಲ್ಲಿ  ಹುಟ್ಟಿಕೊಂಡಿದೆ. 

  • TV9 Web Team
  • Published On - 22:22 PM, 13 Apr 2021
ಯುಗಾದಿ ಹಬ್ಬಕ್ಕೆ ಸಿಹಿ ಸುದ್ದಿ ನೀಡಿದ ದೊಡ್ಮನೆ ಕುಟುಂಬದ ಕುಡಿ; ಖಡಕ್ ಖದರಿನಲ್ಲಿ ವಿನಯ್ ರಾಜ್​ಕುಮಾರ್
ಪೆಪೆ ಸಿನಿಮಾ ಪೋಸ್ಟರ್

ದೊಡ್ಮನೆ ವಂಶದ ಕುಡಿ ವಿನಯ್ ರಾಜ್​ಕುಮಾರ್ ಮುಂದಿನ ಸಿನಿಮಾ ‘ಪೆಪೆ’ ಪೋಸ್ಟರ್ ಬಿಡುಗಡೆಯಾಗಿದೆ. ಶ್ರೀಲೇಶ್ ಎಸ್ ನಾಯರ್ ನಿರ್ದೇಶಿಸುತ್ತಿರುವ ಸಿನಿಮಾವನ್ನು ಉದಯ ಶಂಕರ್ ಎಸ್. ಮತ್ತು ನಿಜಗುಣ ಗುರುಸ್ವಾಮಿ ನಿರ್ಮಾಣ ಮಾಡುತ್ತಿದ್ದಾರೆ. ಈ ಕುರಿತು ಸ್ವತಃ ರಾಘವೇಂದ್ರ ರಾಜ್​ಕುಮಾರ್ ಫೇಸ್​ಬುಕ್​ನಲ್ಲಿ ಪೋಸ್ಟ್ ಮಾಡಿದ್ದಾರೆ. ಅವರ ಪೋಸ್ಟ್​ಗೆ ದೊಡ್ಮನೆ ಕುಟುಂಬದ ಅಭಿಮಾನಿಗಳು ಸಖತ್ ಖುಷಿಯಾಗಿದ್ದಾರೆ.

ಈಗಾಗಲೇ ಸಿದ್ಧಾರ್ಥ, ರನ್ ಆ್ಯಂಟನಿ, ಅನಂತು ವರ್ಸಸ್ ನುಸ್ರತ್ ಸಿನಿಮಾಗಳಿಂದ ಕನ್ನಡಿಗರ ಮನ ಗೆದ್ದಿರುವ ವಿನಯ್ ರಾಜ್​ಕುಮಾರ್ ‘ಪೆಪೆ’ ಕುರಿತು ನಿರೀಕ್ಷೆಗಳು ತುಂಬಾನೇ ಹೆಚ್ಚಿವೆ. ಅಲ್ಲದೇ ಗ್ರಾಮಾಯಣ ಮತ್ತು ಕರಂ ಚಾವ್ಲಾ ನಿರ್ದೇಶನದ ಇನ್ನೊಂದು 10 ಸಿನಿಮಾ ಸಹ ಚಿತ್ರಮಂದಿರಗಳಿಗೆ ಅಪ್ಪಳಿಸಲು ಸಿದ್ಧವಾಗಿವೆ. ಈ ಹೊತ್ತಲ್ಲೇ ದೊಡ್ಮನೆ ವಂಶದ ಕುಡಿಯ ಇನ್ನೊಂದು ಸಿನಿಮಾ ಘೋಷಣೆಯಾದಂತಾಗಿದೆ.

ಪೆಪೆ ಸಿನಿಮಾದ ಬಿಡುಗಡೆಯಾದ ಪೋಸ್ಟರ್​ನಲ್ಲಿ ವಿನಯ್  ರೌಡಿಸಂ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ.  ಹೀಗಾಗಿ ಈವರೆಗಿನ ಅವರ ಸಿನಿಮಾಗಳಿಗಿಂತ ಇದು ಭಿನ್ನವಾಗಿರಲಿದೆ ಎಂಬ ನಿರೀಕ್ಷೆ ಅಭಿಮಾನಿಗಳಲ್ಲಿ  ಹುಟ್ಟಿಕೊಂಡಿದೆ.

ವಿನಯ್ ನ ಮುಂದಿನ ಚಿತ್ರ ‘ಪೆಪೆ | Pepe’.
All the best to the entire team. 👍🏼
Vinay Rajkumar

Posted by Raghavendra Rajkumar on Tuesday, April 13, 2021

ಇಂದಷ್ಟೇ ಇನ್ನೊಂದು ಹೊಸ ಸುದ್ದಿ ಕೊಟ್ಟ ದೊಡ್ಮನೆ ಕುಟುಂಬ
ಯುಗಾದಿಯ ಶುಭ ಸಂದರ್ಭದಲ್ಲಿ ಯುವರತ್ನ ಹೊಸ ಸುದ್ದಿ ನೀಡಿದ್ದಾನೆ. ಪವರ್​ ಸ್ಟಾರ್ ಪುನೀತ್ ರಾಜ್​ಕುಮಾರ್ ಮುಂದಿನ ಚಿತ್ರ ಘೋಷಣೆಯಾಗಿದೆ. ಹೊಂಬಾಳೆ ಫಿಲ್ಮ್ ನಿರ್ಮಿಸಲಿರುವ ಪುನೀತ್ ರಾಜ್​ಕುಮಾರ್ ಮುಂದಿನ ಸಿನಿಮಾವನ್ನು ಲೂಸಿಯಾ ಪವನ್ ನಿರ್ದೇಶಿಸಲಿದ್ದಾರೆ. ಈ ಕುರಿತು ಸ್ವತಃ ಪುನೀತ್ ರಾಜ್​ಕುಮಾರ್ ಟ್ವೀಟ್ ಮಾಡಿ ವಿಷಯ ಬಹಿರಂಗಪಡಿಸಿದ್ದಾರೆ. ಮುಂದಿನ ಸಿನಿಮಾದದಲ್ಲಿ ಲೂಸಿಯಾ ಪವನ್ ಪವರ್​ ಸ್ಟಾರ್​ಗೆ ಯಾವ ಕಥೆ ಹೆಣೆಯುತ್ತಾರೆ ಕಾದು ನೋಡಬೇಕಿದೆ.

ಇದನ್ನೂ ಓದಿ: Yuvarathnaa: ಸಿನಿಮಾ ಒಂದೇ ಅಲ್ಲ, ನಿಜ ಜೀವನದಲ್ಲೂ ಎಂ.ಕೆ.ಮಠರ ಬೆನ್ನಿಗೆ ನಿಂತ ಯುವರತ್ನ

Yuvarathnaa: ತೆಲುಗು, ತಮಿಳು, ಹಿಂದಿಯಲ್ಲೂ ಯುವರತ್ನ ದರ್ಬಾರು! ಅಮೇಜಾನ್ ಪ್ರೈಮ್​​ನಲ್ಲಿ ಅಪ್ಪು ಹವಾ

(Vinay Rajkumar new film Pepe poster released on Ugadi 2021)