ಜೈಲಿನಲ್ಲಿದ್ದ ಸಂಪತ್ ರಾಜ್‌ ಜಯದೇವ ಆಸ್ಪತ್ರೆಗೆ ಶಿಫ್ಟ್

  • Ayesha Banu
  • Published On - 12:11 PM, 22 Nov 2020

ಬೆಂಗಳೂರು: ಶಾಸಕರ ಮನೆಗೆ ಬೆಂಕಿ, 2 ಠಾಣಾ ವ್ಯಾಪ್ತಿಯಲ್ಲಿ ಗಲಭೆ ಕೇಸ್​ಗೆ ಸಂಬಂಧಿಸಿ ಮಾಜಿ ಮೇಯರ್ ಸಂಪತ್ ರಾಜ್‌ ಜೈಲಿನಲ್ಲಿದ್ದರು. ಆದರೆ ಹೃದಯ ಸಮಸ್ಯೆ ಹಿನ್ನೆಲೆಯಲ್ಲಿ ಸಂಪತ್‌ರಾಜ್‌ನನ್ನ ಪರಪ್ಪನ ಅಗ್ರಹಾರದಿಂದ ಜಯದೇವ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.

ಜೈಲಿನ ಸಿಬ್ಬಂದಿ ಸಂಪತ್‌ರಾಜ್‌ನನ್ನ ವೈದ್ಯಕೀಯ ತಪಾಸಣೆಗೆ ಕರೆತಂದಿದ್ದು ತಪಾಸಣೆ ಬಳಿಕ ರಿಪೋರ್ಟ್ ಆಧರಿಸಿ ಚಿಕಿತ್ಸೆಗೆ ನಿರ್ಧರಿಸಲಾಗಿದೆ. ಸದ್ಯ ಆಸ್ಪತ್ರೆಯಲ್ಲಿ ಸಂಪತ್ ಆರೋಗ್ಯ ಪರಿಶೀಲನೆ ನಡೆಯುತ್ತಿದೆ. ಸ್ಕ್ಯಾನಿಂಗ್​ಗೆ ಒಳಪಡಿಸಲಾಗಿದೆ. ಸಂಪತ್ ರಾಜ್ ಸತತ 22 ದಿನಗಳ ಕಾಲ ನಾಪತ್ತೆಯಾಗಿದ್ದರು. ಈ ವೇಳೆ ಅತಿಯಾಗಿ ಓಡಾಟ ನಡೆಸಿದ್ದರು. ಸರಿಯಾದ ಊಟ, ನಿದ್ರೆ ಇಲ್ಲದೆ ಆರೋಗ್ಯದಲ್ಲಿ ಏರುಪೇರಾಗಿತ್ತು. ಬಿಪಿ, ಶುಗರ್​ನಲ್ಲಿ ಬಾರಿ ಪ್ರಮಾಣದ ಬದಲಾವಣೆಯಾಗಿತ್ತು. ಇದೇ ಕಾರಣದಿಂದ ತೂಕದಲ್ಲಿ ಸಹ ಬಾರಿ ಇಳಿಕೆಯಾಗಿದೆ.