ಕೈಗೆ ಬಂದ ಬಾಟಲಿ​ ಬಾಯಿಗೆ ಸಿಗಲಿಲ್ಲ: 16 ಲಕ್ಷ ರೂ. ಮೌಲ್ಯದ ಗುಂಡು ಗುಂಡಿಗೆ!

  • KUSHAL V
  • Published On - 17:31 PM, 18 Sep 2020

ಯಾದಗಿರಿ: ಅವಧಿ ಮುಗಿದ 16 ಲಕ್ಷ ರೂಪಾಯಿ ಮೌಲ್ಯದ ಮದ್ಯವನ್ನ ಅಬಕಾರಿ ಇಲಾಖೆ ಅಧಿಕಾರಿಗಳು ನಾಶ ಪಡಿಸಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಯಾದಗಿರಿ ನಗರದ ಹೊರ ವಲಯದಲ್ಲಿರುವ ಕರ್ನಾಟಕ ರಾಜ್ಯ ಪಾನೀಯ ನಿಗಮದ ಗೋಡೌನ್ ಆವರಣದಲ್ಲಿ ಅವಧಿ ಮುಗಿದ ಪೋಸ್ಟರ್ ಗೋಲ್ಡ್, ಲಾಗರ್ ಹಾಗೂ ನಾಕೌಟ್ ಸ್ಟ್ರಾಂಗ್ ಬ್ರಾಂಡ್​ನ ಅವಧಿ ಮುಗಿದ 1,028 ಬಾಕ್ಸ್ ಬಿಯರ್ ನಾಶ ಪಡಿಸಿದ್ದಾರೆ.

ಪರಿಸರಕ್ಕೆ ತೊಂದರೆಯಾಗದಂತೆ ಗುಂಡಿ ತೆಗೆದು ಮದ್ಯ ಸುರಿದರು
ಸಾರ್ವಜನಿಕರಿಗೆ, ಜಾನುವಾರುಗಳಿಗೆ ಹಾಗೂ ಪರಿಸರಕ್ಕೆ ತೊಂದರೆಯಾಗದ ರೀತಿಯಲ್ಲಿ ಗೋಡೌನ್ ಆವರಣದಲ್ಲಿ ಗುಂಡಿ ತೆಗೆದು ಮದ್ಯವನ್ನು ಸುರಿದು ಮುಚ್ಚಲಾಯಿತು.