ಬಾಗಲಕೋಟೆ: SP ಕಚೇರಿ ಪಕ್ಕದಲ್ಲೇ ನಕಲಿ ಬಾಬಾಗಳ ಹಾವಳಿ

ಬಾಗಲಕೋಟೆ: ಜಿಲ್ಲೆಯಲ್ಲಿ ದಿನೇ ದಿನೇ ನಕಲಿ ಬಾಬಾಗಳ ಹಾವಳಿ ಹೆಚ್ಚಾಗಿದೆ. ಇವರಿಂದ ಜನ ನಂಬಿ ಮೋಸ ಹೋಗುತ್ತಿದ್ದಾರೆ. ನಗರದ ಎಸ್​ಪಿ ಕಚೇರಿ ಪಕ್ಕದಲ್ಲೇ ಬಾಬಾಗಳ ವಂಚನೆ ನಡೆಯುತ್ತಿದೆ. ನಕಲಿ ಬಾಬಾಗಳು ಮುಗ್ಧ ಜನರನ್ನು ನಂಬಿಸಿ ದುಡ್ಡು ಮಾಡುತ್ತಿದ್ದಾರೆ.

ಇಲ್ಲಿ ಬಾಬಾಗಳು ಮುಲಾಮು ಹಚ್ಚಿದ್ರೆ ಕೈ ಕಾಲು ಬೇನೆ ಮಾಯಾವಾಗುತ್ತಂತೆ. ಒಂದು ಗ್ಲಾಸ್​ನಲ್ಲಿ ನೀಲಗಿರಿ ಬೀಜ ನೆನೆಸಿಟ್ಟು, ಆ ನೀರನ್ನು ಕುಡಿದ್ರೆ ಕೆಮ್ಮು ಮಂಗಮಾಯವಾಗುತ್ತಂತೆ ಎಂಬ ಪುಕಾರುಗಳು ಹೆಚ್ಚಾಗಿದ್ದು ಬೆಳಗಾವಿ ಜಿಲ್ಲೆ ರಾಮದುರ್ಗ ತಾಲ್ಲೂಕಿನ ಸಾಲಹಳ್ಳಿ ಮೂಲದ ಬಾಬಾಗಳು ಜನರನ್ನು ಮೂಢರಂನಾಗಿಸಿ ವಂಚಿಸುತ್ತಿದ್ದಾರೆ.

ಇನ್ನು ಈ ವಂಚನೆ ಜಾಲದ ನೇತೃತ್ವ ಪಡೆದಿರೋದು ಲಾಲಸಾಬ್ ಪೈಲ್ವಾನ್ ಎಂಬ ಬಾಬಾ. ಇವರೆಲ್ಲಾ ಆಯುರ್ವೇದಿಕ್ ಚಿಕಿತ್ಸೆ ನೀಡುವ ನೆಪದಲ್ಲಿ ಜನರನ್ನು ಮೋಸ ಮಾಡುತ್ತಿದ್ದಾರೆ. ಪ್ರತಿಯೊಬ್ಬರಿಂದ 150-200ರಂತೆ ಸಾವಿರಾರು ಜನರಿಂದ ಯಾವುದರ ಭಯವಿಲ್ಲದೇ ರಾಜಾರೋಷವಾಗಿ ಹಣ ಸುಲಿಗೆ ಮಾಡುತ್ತಿದ್ದಾರೆ. ಇಷ್ಟೆಲ್ಲಾ ವಂಚನೆ ನಡೆಯುತ್ತಿದ್ರೂ ಪೊಲೀಸ್ ಇಲಾಖೆ ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ.

Related Posts :

Category:

error: Content is protected !!

This website uses cookies to ensure you get the best experience on our website. Learn more