ಸುಳ್ಳು ದಾಖಲೆ ಬಳಸಿ ಅಂಗನವಾಡಿ ಶಿಕ್ಷಕಿ ಹುದ್ದೆಗೆ ಆಯ್ಕೆ, ಕೆಲಸ ಕಳೆದುಕೊಂಡ ಅಮಾಯಕಿ

ರಾಯಚೂರು: ಆ ಜಿಲ್ಲೆಯಲ್ಲಿ ಅಂಗನವಾಡಿ ಶಿಕ್ಷಕಿ ಹುದ್ದೆಗೆ ಫುಲ್ ಡಿಮ್ಯಾಂಡ್. ಹೀಗಾಗಿ ಆ ಜಿಲ್ಲೆಯಲ್ಲಿ ಅಂಗನವಾಡಿ ಶಿಕ್ಷಕಿ ಹುದ್ದೆ ಗಿಟ್ಟಿಸಿಕೊಳ್ಳಲು ಭೋಗಸ್ ದಾಖಲೆ ಸೃಷ್ಟಿಸಿ ಜಿಲ್ಲಾಡಳಿತದ ದಿಕ್ಕು ತಪ್ಪಿಸುವ ದಂಧೆ ನಿರಂತರವಾಗಿ ನಡೆಯುತ್ತಿದೆ. ಇದರಿಂದಾಗಿ ಅಲ್ಲಿ ಅದೆಷ್ಟೋ ಅರ್ಹ ಅಭ್ಯರ್ಥಿಗಳ ಬದುಕು ಅಲ್ಲಿ ಬೀದಿ ಪಾಲಾಗ್ತಿದೆ.

ತಹಶೀಲ್ದಾರ್ ಎಡವಟ್ಟು, ಹುದ್ದೆ ಕಳೆದುಕೊಂಡ ಅಮಾಯಕಿ:
ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಗೋರ್ಕಲ್ ಗ್ರಾಮದ ನಿವಾಸಿ ಹಂಪಮ್ಮ ಕಂದಾಯ ನಿರೀಕ್ಷಕರು ಹಾಗೂ ಮಾನ್ವಿ ತಹಶೀಲ್ದಾರ್ ಬೇಜಬ್ದಾರಿಗೆ ಅಂಗನವಾಡಿ ಶಿಕ್ಷಕಿ ಹುದ್ದೆಯಿಂದ ವಂಚಿತರಾಗಿದ್ದಾರೆ. ಹಿರೇದಿನ್ನಿ ಗ್ರಾಮದ ಸುಧಾಕಲಾ ಎಂಬ ಮಹಿಳೆಗೆ ಮಾನ್ವಿ ತಹಶೀಲ್ದಾರರು ಗೋರ್ಕಲ್ ನಿವಾಸಿ ಎಂಬ ಸುಳ್ಳು ವಾಸಸ್ಥಳ ಪ್ರಮಾಣ ಪತ್ರ ನೀಡಿದ್ದಾರೆ. ಇದನ್ನ ಬಳಸಿಕೊಂಡು ಅಂಗನವಾಡಿ ಶಿಕ್ಷಕಿ ಹುದ್ದೆಗೆ ಅರ್ಜಿ ಸಲ್ಲಿಸಿದ್ದ ಹಿರೇದಿನ್ನಿ ಗ್ರಾಮದ ಸುಧಾಕಲಾ ತಾತ್ಕಾಲಿಕವಾಗಿ ಆಯ್ಕೆಯಾಗಿದ್ದಾರೆ.

ಈಗ ಇಲಾಖೆ ಪ್ರಕಟಿಸಿದ ತಾತ್ಕಾಲಿಕ ಆಯ್ಕೆ ಪಟ್ಟಿಗೆ ಹಂಪಮ್ಮ ತಕರಾರು ಅರ್ಜಿ ಸಲ್ಲಿಸಿದ್ದಾರೆ. ಹೀಗಾಗಿ, ಸುಧಾಕಲಾ ನೀಡಿರುವ ವಾಸಸ್ಥಳ ಪ್ರಮಾಣ ಪತ್ರದ ಮರು ಪರಿಶೀಲನೆ ನಡೆಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಂದಾಯ ಇಲಾಖೆಗೆ ಪತ್ರ ಬರೆದರೂ ಪ್ರಯೋಜನವಾಗಿಲ್ಲ. ಹೀಗಾಗಿ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ವಿಶೇಷಚೇತನಳಾದ ಹಂಪಮ್ಮ ಅಂಗನವಾಡಿ ಶಿಕ್ಷಕಿ ಹುದ್ದೆಯಿಂದ ವಂಚಿತಳಾಗುವ ಸ್ಥಿತಿ ಎದುರಾಗಿದೆ.

ಇನ್ನು ಮಾನ್ವಿ ತಹಶೀಲ್ದಾರರಿಗೂ ಈ ಬಗ್ಗೆ ದೂರು ಸಲ್ಲಿಸಿದ್ರೂ ಪ್ರಯೋಜನವಾಗಿಲ್ಲ. ವಿಶೇಷಚೇತನ ಹಂಪಮ್ಮ ತನಗಾದ ಅನ್ಯಾಯವನ್ನ ಸರಿಪಡಿಸುವಂತೆ ಸಂಬಂಧಪಟ್ಟ ಕಚೇರಿಗಳಿಗೆ ಅಲೆದಾಡ್ತಿದ್ರೂ, ಯಾವೊಬ್ಬ ಅಧಿಕಾರಿಯೂ ಸ್ಪಂದಿಸುತ್ತಿಲ್ಲ. ಹೀಗಾಗಿ, ಸ್ಥಳೀಯ ಜತೆಗೆ ಜಿಲ್ಲಾಡಳಿತದ ವಿರುದ್ಧ ಹೋರಾಟ ನಡೆಸಲು ನಿರ್ಧರಿಸಿದ್ದಾಳೆ.

ಈ ರೀತಿ ಸುಳ್ಳು ವಾಸಸ್ಥಳ ಪ್ರಮಾಣ ಪತ್ರ ನೀಡಿದ ಕಂದಾಯ ನಿರೀಕ್ಷಕ ಮತ್ತು ಮಾನ್ವಿ ತಹಶೀಲ್ದಾರರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ ಕ್ರಮ ಕೈಗೊಳ್ಳಬೇಕೆಂದು ಹಂಪಮ್ಮ ಜಿಲ್ಲಾಡಳಿತಕ್ಕೆ ಆಗ್ರಹಿಸಿದ್ದಾಳೆ. ಒಟ್ನಲ್ಲಿ ರಾಯಚೂರು ಜಿಲ್ಲೆಯಾದ್ಯಂತ ಅಂಗನವಾಡಿ ಶಿಕ್ಷಕಿ ಹುದ್ದೆ ಗಿಟ್ಟಿಸಿಕೊಳ್ಳಲು ಈ ರೀತಿ ಸುಳ್ಳು ವಾಸಸ್ಥಳ ಪ್ರಮಾಣ ಪತ್ರ ನೀಡಿದ್ದರಿಂದ ಸಾಕಷ್ಟು ಅರ್ಹ ಫಲಾನುಭವಿಗಳಿಗೆ ವಂಚನೆಯಾಗಿದೆ.

Related Posts :

Leave a Reply

Your email address will not be published. Required fields are marked *

ತಾಜಾ ಸುದ್ದಿ

error: Content is protected !!