ಲಾಕ್​ಡೌನ್​ ಗಾಯದ ಮೇಲೆ ವಿಚಿತ್ರ ರೋಗದ ಬರೆ, ಮನನೊಂದ ರೈತನಿಂದ ಬೆಳೆ ನಾಶ

ದಾವಣಗೆರೆ: ಲಾಕ್​ಡೌನ್​ನಿಂದ ರೈತರು ಸಾಕಷ್ಟು ಸಂಕಷ್ಟಗಳನ್ನ ಎದುರಿಸಬೇಕಾಯಿತು. ಈ ನಡುವೆ, ಈರುಳ್ಳಿ ಬೆಳೆಗೆ ವಿಚಿತ್ರ ರೋಗ ತಾಗಿದ್ದಕ್ಕೆ ಮನನೊಂದು ರೈತನೊಬ್ಬ ತನ್ನ ಕೈಯಾರೆ ಬೆಳೆಸಿದ ಬೆಳೆಯನ್ನ ನಾಶಮಾಡಿದ್ದಾನೆ. ಅಂದ ಹಾಗೆ, ಈ ಘಟನೆ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ದಡಗಾರನಹಳ್ಳಿಯಲ್ಲಿ ನಡೆದಿದೆ.

ಗ್ರಾಮದ ನಿವಾಸಿ ಹಾಲೇಶಪ್ಪ ತನ್ನ ಎರಡು ಎಕರೆ ಜಮೀನಿನಲ್ಲಿ ಈರುಳ್ಳಿ ಬೆಳೆಸಿದ್ದನು. ಆದರೆ, ಕೆಲವು ದಿನಗಳ ಹಿಂದೆ ಈರುಳ್ಳಿ ಬೆಳೆಗೆ ವಿಚಿತ್ರ ಕಾಯಿಲೆಯೊಂದು ತಗಲಿತ್ತಂತೆ. ಕೃಷಿ ತಜ್ಞರ ಸಲಹೆಯಂತೆ ಹತ್ತಾರು ಔಷಧಿ ಸಿಂಪಡಣೆ ಮಾಡಿದ್ರೂ ಏನು ಪ್ರಯೋಜನವಾಗಿರಲಿಲ್ಲ.

ಇದರಿಂದ ಮನನೊಂದ ಹಾಲೇಶಪ್ಪ ಇಂದು ಟ್ರ್ಯಾಕ್ಟರ್‌ ಹರಿಸಿ ಈರುಳ್ಳಿ ಬೆಳೆಯನ್ನ ನಾಶ ಮಾಡಿದ್ದಾನೆ.

Related Tags:

Related Posts :

Category:

error: Content is protected !!