ಅಕ್ರಮವಾಗಿ ತಲೆ ಎತ್ತಿದ ಜಲ್ಲಿ ಕ್ರಷರ್: ದಂಧೆಕೋರರ ಹಾವಳಿ ತಗ್ಗಿಸಲು ರೈತರ ಪಟ್ಟು

ವಿಜಯಪುರ: ಆ ಜಿಲ್ಲೆ ಜನ ಹಂತಕರ ಆಟಾಟೋಪಕ್ಕೆ ನಲುಗಿ ಹೋಗಿದ್ರು. ಆದ್ರೀಗ ದಂಧೆಕೋರರ ಅಟ್ಟಹಾಸಕ್ಕೆ ಬೆಚ್ಚಿಬಿದ್ದಿದ್ದಾರೆ. ನಿರಾತಂಕವಾಗಿ ದಂಧೆಕೋರರು ತಮ್ಮ ಕೆಲಸ ಮಾಡ್ಕೊಂಡು ಹೋಗ್ತಿದ್ದಾರಂತೆ. ಹಾಗಾದ್ರೆ ಆ ಜಾಗ ಇರೋದಾದ್ರೂ ಎಲ್ಲಿ? ದಂಧೆಕೋರರ ಉಪಟಳ ಹೇಗಿದೆ ಅನ್ನೋದರ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ ನೋಡಿ.

ಕೃಷ್ಣಾನದಿ ತಟದ ಕೊಲ್ಹಾರ ಪಟ್ಟಣ ಈಗ ಅಕ್ರಮಗಳ ತಾಣವಾಗಿದೆ. ವಿಜಯಪುರ ಜಿಲ್ಲೆ ಕೊಲ್ಹಾರ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಕೃಷಿಯನ್ನೇ ನಂಬಿ ಜನ ಜೀವನ ಸಾಗಿಸ್ತಿದ್ದು, ಅಕ್ರಮ ಮರಳು ಹಾಗೂ ಜಲ್ಲಿ ಕ್ರಷರ್​ಗಳ ಉಪಟಳಕ್ಕೆ ನಲುಗಿ ಹೋಗಿದ್ದಾರೆ.

ಪರವಾನಗಿ ಪಡೆದಿಲ್ಲ, ಯಾರದ್ದೇ ಭಯವಿಲ್ಲ!
ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಪರವಾನಿಗೆ ಪಡೆಯದೇ ಕೃಷಿ ಭೂಮಿಯಲ್ಲಿ ಕ್ರಷರ್ ಘಟಕಗಳನ್ನ ಮತ್ತು ಗಣಿಗಾರಿಕೆ ನಡೆಸಲಾಗ್ತಿದೆ. ಕೊಲ್ಹಾರ ಪಟ್ಟಣದ ಸಮೀಪವಿರೋ ಮಹದೇವಪ್ಪನ ಬೆಟ್ಟದ ಬಳಿ ಫವಲತ್ತಾದ ಭೂಮಿಯಲ್ಲೇ ಅಕ್ರಮ ಗಣಿಗಾರಿಕೆ, ಕ್ರಷರ್ ಘಟಕಗಳು ತಲೆ ಎತ್ತಿವೆ. ಇದ್ರಿಂದ ಸುತ್ತಮುತ್ತಲ ನೂರಾರು ಎಕರೆ ಪ್ರದೇಶದಲ್ಲಿ ಬೆಳೆಯುವ ಬೆಳೆಗಳ ಮೇಲೆ ದುಷ್ಪರಿಣಾಮ ಬೀರ್ತಿದೆ. ಬೆಳೆಗಳ ಮೇಲೆ ಗಣಿ ಧೂಳು ಬೀಳ್ತಿರೋದ್ರಿಂದ ರೈತರು ನಲುಗಿ ಹೋಗಿದ್ದಾರೆ. ಅತ್ತ ಫಸಲು ಬರದೆ, ಮೇವೂ ಸರಿಯಾಗಿ ಸಿಗದೆ ರೈತ ಸಮುದಾಯ ಪರದಾಡ್ತಿದೆ. ಹೀಗಾಗಿ, ಸಮಸ್ಯೆ ಬಗೆಹರಿಸಿ ಅಂತಾ ಜಿಲ್ಲಾಧಿಕಾರಿ ಕಚೇರಿ ಬಾಗಿಲು ಬಡಿಯುತ್ತಿದ್ದಾರೆ.

ರೈತರ ಮನವಿಯನ್ನ ಗಂಭೀರವಾಗಿ ಪರಿಗಣಿಸಿರೋ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಕಲ್ಲು ಗಣಿಗಾರಿಕೆ ಹಾಗೂ ಜಲ್ಲಿ ಕ್ರಷರ್ ಘಟಕಗಳ ಕುರಿತು ಮಾಹಿತಿ ನೀಡುವಂತೆ ಗಣಿ ಹಾಗೂ ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.

ಒಟ್ನಲ್ಲಿ ದಂಧೆಕೋರರ ಅಟ್ಟಹಾಸಕ್ಕೆ ರೈತರು ನಲುಗುತ್ತಿದ್ದಾರೆ. ಒಂದ್ಕಡೆ ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಾ ರಾಜ್ಯದ ಸಂಪತ್ತನ್ನ ದಂಧೆಕೋರರು ದೋಚುತ್ತಿದ್ದರೆ, ಮತ್ತೊಂದೆಡೆ ಇದರಿಂದ ರೈತ ಸಮುದಾಯಕ್ಕೆ ಭಾರಿ ತೊಂದರೆ ಆಗ್ತಿದೆ. ದಂಧೆಕೋರರ ಅಟ್ಟಹಾಸಕ್ಕೆ ಸರ್ಕಾರ ಆದಷ್ಟು ಬೇಗ ಕಡಿವಾಣ ಹಾಕಬೇಕಿದೆ.
Related Posts :

Leave a Reply

Your email address will not be published. Required fields are marked *

ತಾಜಾ ಸುದ್ದಿ

error: Content is protected !!